ಕಳೆದ ವರ್ಷ ನಮ್ಮ ದೇಶದಲ್ಲಿ ಮುಂಗಾರು ಮಳೆ ಸರಿಯಾಗಿ ಬರದೇ ಇಡೀ ವರ್ಷ ಸರಿಯಾಗಿ ಮಳೆ ಬೆಳೆ ಆಗದ ಕಾರಣ ಕೃಷಿಯಲ್ಲಿ ನಷ್ಟವಾಗಿ, ಆರ್ಥಿಕವಾಗಿ ಕಷ್ಟದಲ್ಲಿದ್ದಾರೆ. ಇದೀಗ ಸರ್ಕಾರವು ಬೆಲೆ ನಷ್ಟದ ಕಷ್ಟದಲ್ಲಿರುವ ರೈತರಿಗೆ ಪರಿಹಾರವನ್ನು ಬಿಡುಗಡೆ ಮಾಡಿದೆ. ರೈತರು ಈ ಪರಿಹಾರ ಧನ ಪಡೆಯಲು ಕೃಷಿ ಇಲಾಖೆಯ ಫ್ರೂಟ್ಸ್ ವೆಬ್ಸೈಟ್ ನ FID ನಂಬರ್ ಕಡ್ಡಾಯ ಆಗಿರುತ್ತದೆ. ನೀವು FID ಖಾತೆ ಹೊಂದಿದ್ದರೆ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸಬಹುದು.
ಇಲ್ಲಿ ನೀವು ಫ್ರೂಟ್ಸ್ ಐಡಿ ಪಡೆಯಲು, ಫ್ರೂಟ್ಸ್ ವೆಬ್ಸೈಟ್ ನಲ್ಲಿ ಆಧಾರ್ ನಂಬರ್ ಹಾಕಿ, FID ನಂಬರ್ ಹಾಕಿ ಚೆಕ್ ಮಾಡಿಕೊಳ್ಳಬೇಕು. ಇಲ್ಲಿ ನಿಮಗೆ ನಿಮ್ಮ FID ನಂಬರ್ ಇದೆಯೋ ಇಲ್ಲವೋ ಎನ್ನುವ ವಿಷಯ ಗೊತ್ತಾಗುತ್ತದೆ. ಇದನ್ನು ಹೇಗೆ ಚೆಕ್ ಮಾಡುವುದು ಎಂದು ತಿಳಿಸಿಕೊಡುತ್ತೇವೆ ನೋಡಿ..
ಮೊದಲಿಗೆ ನೀವು ಫ್ರೂಟ್ಸ್ ಐಡಿ ವೆಬ್ಸೈಟ್ ಗೆ ಭೇಟಿ ನೀಡಿ, FID Number Check ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ, ಇಲ್ಲಿ 12 ಅಂಕಿಗಳ ಆಧಾರ್ ಕಾರ್ಡ್ ನಂಬರ್ ಹಾಕಿ, Search ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಈಗ 16 ನಂಬರ್ ಗಳ FID ನಂಬರ್ ಬಂದರೆ, ಫ್ರೂಟ್ಸ್ ಐಡಿ ಬಂದಿದೆ ಎಂದು ಅರ್ಥ. ಫ್ರೂಟ್ಸ್ ಐಡಿ ಇಲ್ಲ ಎಂದರೆ Data Not Found ಎಂದು ಬರುತ್ತದೆ. ಒಂದು ವೇಳೆ ಹೀಗೆ ಬಂದರೆ, ನಿಮಗೆ ಹತ್ತಿರವಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ, ಬೇಕಿರುವ ದಾಖಲೆಗಳನ್ನು ನೀಡಿ FID ನಂಬರ್ ರಚಿಸಬಹುದು.
ಬಲಿಕ ನೀವು 2023-24ರ Parihara List ನಲ್ಲಿ ನಿಮ್ಮ ಹೆಸರು ಇದ್ಯಾ ಎಂದು ಚೆಕ್ ಮಾಡಿಕೊಳ್ಳಿ. ಪಿಎಮ್ ಕಿಸಾನ್ ಯೋಜೆನೆಯಲ್ಲಿ ರಿಜಿಸ್ಟರ್ ಮಾಡಿಕೊಂಡಿರುವವರಿಗೆ FID ನಂಬರ್ ಸಿಗುತ್ತದೆ. ಅವರು ಈ ಲಿಸ್ಟ್ ನೋಡಿ, ನಿಮ್ಮ ಹೆಸರು ಇದ್ದರೆ, ನಿಮಗೆ ಪರಿಹಾರದ ಹಣ DBT ಮೂಲಕ ಜಮೆ ಆಗುವುದು ಖಂಡಿತ. ಇದನ್ನು ಹೇಗೆ ತಿಳಿಯುವುದು ಎಂದು ತಿಳಿಸುತ್ತೇವೆ ನೋಡಿ..
ಮೊದಲಿಗೆ ಈ https://fruitspmk.karnataka.gov.in/MISReport/FarmerDeclarationReport.aspx ಲಿಂಕ್ ಮೇಲೆ ಕ್ಲಿಕ್ ಮಾಡಿ, ಪಿಎಮ್ ಕಿಸಾನ್ ಯೋಜನೆಯ ಫ್ರೂಟ್ಸ್ ತಂತ್ರಾಂಶವನ್ನು ಚೆಕ್ ಮಾಡಿಕೊಳ್ಳಬೇಕುಬಳಿಕ ಇಲ್ಲಿ, ನಿಮ್ಮ ಊರು, ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಇದೆಲ್ಲವನ್ನು ಎಂಟ್ರಿ ಮಾಡಿ, ವೀಕ್ಷಿಸು ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿದರೆ. ಹಳ್ಳಿಗಳ ಅನುಸಾರ ಪರಿಹಾರ ಪಡೆದಿರುವ ರೈತರ ಲಿಸ್ಟ್ ಬರುತ್ತದೆ. ನಿಮ್ಮ ವಿಚಾರದಲ್ಲಿ ಯಾವುದೇ ತೊಂದರೆ ಆಗಿಲ್ಲ ಎಂದರೆ, ನಿಮಗೂ DBT ಮೂಲಕ ಹಣ ವರ್ಗಾವಣೆ ಆಗುತ್ತದೆ.