Anna Bhagya money: ರಾಜ್ಯ ಸರ್ಕಾರವು ನಮ್ಮ ಜನರಿಗೆ ಆಹಾರಕ್ಕೆ ಕೊರತೆ ಆಗಬಾರದು ಎಂದು ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ ಇಂದ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಪ್ರತಿ ವ್ಯಕ್ತಿಗೆ 10 ಕೆಜಿ ನೀಡುವ ಭರವಸೆ ಸರ್ಕಾರ ಕೊಟ್ಟಿತ್ತು, ಆದರೆ 10 ಕೆಜಿ ಅಕ್ಕಿ ಒದಗಿಸಲು ಸಾಧ್ಯವಾಗದ ಕಾರಣ, 5 ಕೆಜಿ ಅಕ್ಕಿ ಕೊಟ್ಟು, ಇನ್ನು 5 ಕೆಜಿ ಅಕ್ಕಿಯ ಬದಲಾಗಿ ಹಣವನ್ನು ಕೊಡಲಾಗುತ್ತಿದೆ. ಈಗಾಗಲೇ ಅನ್ನಭಾಗ್ಯ ಯೋಜನೆಯ ಹಣವನ್ನು ಫಲಾನುಭವಿಗಳು ಪಡೆಯುತ್ತಿದ್ದಾರೆ..
ಪ್ರಸ್ತುತ ಅನ್ನಭಾಗ್ಯ ಯೋಜನೆಯ 4ನೇ ಕಂತಿನ ಹಣ ಬಿಡುಗಡೆ ಆಗಿದೆ. ಈ ಹಣವು ಎಲ್ಲಾ ಫಲಾನುಭವಿಗಳಿಗೆ ತಲುಪಿದೆಯೋ ಇಲ್ಲವೋ ಎನ್ನುವುದನ್ನು ನೀವು ಅನ್ನಭಾಗ್ಯ ಯೋಜನೆಯ ಸ್ಟೇಟಸ್ ಚೆಕ್ ಮಾಡುವ ಮೂಲಕ ತಿಳಿದುಕೊಳ್ಳಬಹುದು. ಅದು ಹೇಗೆ ಎಂದು ತಿಳಿಸಿಕೊಡುತ್ತೇವೆ ನೋಡಿ.. ಈ ರೀತಿ ಮಾಡುವ ಮೂಲಕ ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಅಕೌಂಟ್ ಗೆ ಬಂದಿದ್ಯಾ ಎಂದು ಚೆಕ್ ಮಾಡಿ..
https://ahara.kar.nic.in/lpg/ ಮೊದಲಿಗೆ ಈ ಲಿಂಕ್ ಓಪನ್ ಮಾಡಿ. ಇಲ್ಲಿ ಎಲ್ಲಾ ಜಿಲ್ಲೆಗಳ ಲಿಸ್ಟ್ ಕೂಡ ಇರುತ್ತದೆ, ಇಲ್ಲಿ ನೀವು ನಿಮ್ಮ ಜಿಲ್ಲೆಯ ಹೆಸರು ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. *ಈಗ ಸ್ಟೇಟಸ್ ಆಫ್ ಡಿಬಿಟಿ ಎನ್ನುವ ಆಪ್ಶನ್ ಕಾಣುತ್ತದೆ, ಅದನ್ನು ಸೆಲೆಕ್ಟ್ ಮಾಡಿ. ಈಗ ಯಾವ ವರ್ಷ, ಯಾವ ತಿಂಗಳ ಹಣ ಬಂದಿದೆ ಎಂದು ತಿಳಿಯಲು ಆ ಎರಡನ್ನು ಹಾಕಿ, ರೇಷನ್ ಕಾರ್ಡ್ ನಂಬರ್ ಹಾಕಿ, Go ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ. ಈಗ ನೀವು ಡಿಬಿಟಿ ಸ್ಟೇಟಸ್ ನೋಡಬಹುದು, ನಿಮ್ಮ ಯಾವ ಬ್ಯಾಂಕ್ ಅಕೌಂಟ್ ಗೆ ಎಷ್ಟು ಹಣ ಬಂದಿದೆ ಎಂದು ಚೆಕ್ ಮಾಡಿಕೊಳ್ಳಬಹುದು.
ಇನ್ನು ನಿಮ್ಮ ಅಕೌಂಟ್ ಗೆ ಹಣ ಬರದೆ ಪ್ರೊಸೆಸಿಂಗ್ ಎಂದು ಬಂದಿದ್ದರೆ ನಿಮ್ಮ ಅಕೌಂಟ್ ಗೆ ಹಣ ಬರುತ್ತದೆ ಎಂದು ಅರ್ಥ. ಆಧಾರ್ ಸೀಡಿಂಗ್ ಆಗಿಲ್ಲದೆ ಇದ್ದರೆ, ಅಥವಾ ಇನ್ನಿತರ ಬ್ಯಾಂಕ್ ಸಮಸ್ಯೆ ಇದ್ದರೆ ನಿಮ್ಮ ಅಕೌಂಟ್ ಗೆ ಬರುವುದಿಲ್ಲ.