property Law: ಈಗ ನಮ್ಮ ಕಾನೂನಿನಲ್ಲಿ ಹೆಣ್ಣುಮಕ್ಕಳಿಗೆ ತಂದೆಯ ಆಸ್ತಿ ಮೇಲೆ ಗಂಡುಮಕ್ಕಳಿಗೆ ಇರುವಷ್ಟೇ ಹಕ್ಕು ಇರುತ್ತದೆ. ಒಂದು ವೇಳೆ ಹೆಣ್ಣುಮಕ್ಕಳನ್ನು ಕೇಳದೇ ಆಸ್ತಿ ವಿಭಜನೆ ಮಾಡಿದರೆ, ಕೇಸ್ ಹಾಕಿ ಆಸ್ತಿಯನ್ನು ಪಡೆಯಬಹುದು. ಆದರೆ ಅಕಸ್ಮಾತ್ ಮನೆಯ ಮಗಳು ವಿಧಿವಶರಾಗಿದ್ದರೆ, ಆ ಆಸ್ತಿಯನ್ನು ಆಕೆಯ ಮಕ್ಕಳು ತಾತನಿಂದ ಪಡೆಯಬಹುದಾ? ಕಾನೂನು ಈ ಬಗ್ಗೆ ಏನು ಹೇಳುತ್ತದೆ?
ಒಂದು ವೇಳೆ ಹೆಣ್ಣುಮಗಳು ತಮ್ಮ ಸಹೋದರನ ಬಳಿ ತನಗೆ ಯಾವುದೇ ಆಸ್ತಿ ಬೇಡ ಎಂದು ಪತ್ರ ಬರೆದು ಕೊಟ್ಟುಬಿಟ್ಟಿದ್ದರೆ, ಆಗ ಮತ್ತೆ ಆಸ್ತಿಯನ್ನು ಕೇಳಲು ಆಗೋದಿಲ್ಲ. ಬದುಕಿದ್ದಾಗ ತಂದೆಯ ಆಸ್ತಿಯಲ್ಲಿ ಪಾಲು ಕೇಳಬಹುದು. ಒಂದು ವೇಳೆ ಮನೆಯ ಹೆಣ್ಣುಮಗಳು ವಿಧಿವಶವಾಗಿದ್ದರೆ, ಆಕೆಯ ಮಕ್ಕಳು ತಾಯಿಯ ಪಾಲಿನ ಆಸ್ತಿಯನ್ನು ತಾತನ ಬಳಿ ಕೇಳಲು ಕಾನೂನಿನಲ್ಲಿ ಅವಕಾಶವಿದೆ.
ನಿಧನವಾಗಿರುವ ಮಗಳಿಗೆ ಎಷ್ಟು ಆಸ್ತಿ ಇದೆ ಎನ್ನುವುದರ ಮೇಲೆ ಎಷ್ಟು ಆಸ್ತಿ ಸಿಗಬೇಕು ಎನ್ನುವುದನ್ನು ಕೋರ್ಟ್ ನಿರ್ಧಾರ ಮಾಡುತ್ತದೆ. ಕೆಲವೊಮ್ಮೆ ಮನೆಯ ಮಗಳಿಗೆ ಒತ್ತಡ ಹೇರಿ, ತನಗೆ ಆಸ್ತಿ ಬೇಡ ಎಂದು ಹಕ್ಕುಪತ್ರ ಬರೆಸಿಕೊಳ್ಳಲಾಗಿರುತ್ತದೆ. ಒಂದು ವೇಳೆ ಈ ರೀತಿ ಆಗಿದ್ದರೆ, ಈ ಘಟನೆ ನಡೆದ ಒಂದು ತಿಂಗಳ ಒಳಗೆ ಹೆಣ್ಣುಮಗಳು ಕೋರ್ಟ್ ಗೆ ಹೋಗಿ, ನಡೆದಿದ್ದನ್ನು ಹೇಳಿ ಆ ಹಕ್ಕುಪತ್ರ ಉಪಯೋಗಕ್ಕೆ ಬರದ ಹಾಗೆ ಮಾಡಬಹುದು.
2014ರಲ್ಲಿ ಹಿಂದೂ ಸಕ್ಸೆಶನ್ ಆಕ್ಟ್ ತಿದ್ದುಪಡಿಯಾದ ಮೇಲೆ ಹುಟ್ಟಿರುವ ಹೆಣ್ಣುಮಕ್ಕಳಿಗೆ ಮನೆಯ ಗಂಡುಮಕ್ಕಳಿಗೆ ಇರುವಷ್ಟೇ ಹಕ್ಕು ಇರುತ್ತದೆ. ಅದಕ್ಕಿಂತ ಮೊದಲು ಜನಿಸಿರುವವರಿಗೂ ಕೂಡ ತಂದೆಯ ಆಸ್ತಿಯ ಮೇಲೆ ಹಕ್ಕು ಇರುತ್ತದೆ. ಕೆಲವು ಹೆಣ್ಣುಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಪಾಲು ಪಡೆಯುವ ಆಸೆ ಇರುವುದಿಲ್ಲ. ಅಂಥವರು ಇರುವಾಗಲೇ ತಮ್ಮ ಸಹೋದರರಿಗೆ ಆಸ್ತಿ ಬೇಡ ಎಂದು ಪತ್ರ ಬರೆದು ಕೊಟ್ಟುಬಿಡುವುದು ಒಳ್ಳೆಯದು.
ಇಲ್ಲದೇ ಹೋದರೆ, ಆಕೆ ಮರಣ ಹೊಂದಿದ ಬಳಿಕ ಆಕೆಯ ಮಕ್ಕಳು ಬಂದು ಆಸ್ತಿ ಕೇಳಬಹುದು. ಹಾಗಾಗಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಹಾಗೆ ಎಲ್ಲಾ ವಿಚಾರಗಳನ್ನು ಕಾನೂನಿನ ಪ್ರಕಾರ ಎಲ್ಲವನ್ನು ಇತ್ಯರ್ಥ ಮಾಡಿಕೊಳ್ಳುವುದು ಒಳ್ಳೆಯದು. ಇಲ್ಲವಾದರೆ ನಿಮಗೆ ಮುಳುವಾಗಬಹುದು.