ನಮ್ಮ ರಾಜ್ಯದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕಾನೂನಿನ ನಿಯಮಗಳು ಬದಲಾವಣೆ ಆಗುತ್ತಲಿದೆ. ಇದೀಗ ರೈತರಿಗೆ ಅನುಕೂಲ ಅಗುವಂಥ ಹೊಸದೊಂದು ಕಾನೂನನ್ನು ಜಾರಿಗೆ ತರಲಾಗಿದೆ. ಇದರ ಬಗ್ಗೆ ಖುದ್ದು ಕಂದಾಯ ಇಲಾಖೆಯ ಸಚಿವರಾದ ಕೃಷ್ಣ ಭೈರೇಗೌಡ ಅವರು ತಿಳಿಸಿದ್ದಾರೆ. ರೈತರಿಗಾಗಿ ಜಾರಿಗೆ ತಂದಿರುವ ಈ ಕಾನೂನು, ದರಾಖಸ್ತು ಪೋಡಿ ಕಾನೂನು ಆಗಿದೆ.

ಈ ಕಾನೂನಿನ ನಿಯಮದ ಅನುಸಾರ, ರೈತರ ಜಮೀನು ಅವರ ತಂದೆ ಅಥವಾ ತಾತನ ಹೆಸರಿನಲ್ಲಿ ಇದ್ದರೆ, ಅವರು ಅರ್ಜಿ ಸಲ್ಲಿಸಿದ್ದರೆ ಅಥವಾ ಸಲ್ಲಿಸದೇ ಇದ್ದರು ಸಹ, ಸರ್ಕಾರವೇ ಅವರ ಆಸ್ತಿ ಸರ್ವೇ ನಡೆಸಿ, ಆಸ್ತಿಯನ್ನು ಅವರ ಹೆಸರಿಗೆ, ಅಥವಾ ಅಣ್ಣ ತಮ್ಮನ ಹೆಸರಿಗೆ ಅಥವಾ ಮಕ್ಕಳ ಹೆಸರಿಗೆ ವರ್ಗಾವಣೆ ಮಾಡಿಕೊಡುತ್ತದೆ. ಹೌದು, ಇದು ಹೊಸ ನಿಯಮ ಆಗಿದ್ದು, ಎಲ್ಲಾ ರೈತರಿಗೆ ಇದು ಅನುಕೂಲ ತರಲಿದೆ.

ಸರ್ಕಾರದ ಈ ಹೊಸ ನಿಯಮದ ಅನುಸಾರ, ಒಂದು ವೇಳೆ ರೈತರು ಹಣಕಾಸಿನ ಸಮಸ್ಯೆ ಇಂದ, ಕುಟುಂಬದಲ್ಲಿನ ತೊಂದರೆಗಳಿಂದ ಅಥವಾ ಇನ್ಯಾವುದೇ ಕಾರಣದಿಂದ ಜಮೀನನ್ನು ತಮ್ಮ ಹೆಸರಿಗೆ ಬದಲಾಯಿಸಿಕೊಳ್ಳಲು ಸಾಧ್ಯವಾಗಿಲ್ಲದೇ ಇದ್ದರೆ, ಅಂಥವರಿಗೆ ಈಗ ಸರ್ಕಾರವೇ ಸಹಾಯ ಮಾಡಲಿದೆ. ಇಂಥ ರೈತರಿಗೆ ಸಹಾಯ ಮಾಡಲು ಸರ್ಕಾರವು ದರಾಖಸ್ತು ಪೋಡಿ ಅಭಿಯಾನವನ್ನು ಶುರು ಮಾಡಿದೆ.

ಈಗ ಕೋರ್ಟ್ ನಲ್ಲಿ ಕೂಡ ಇಂಥದ್ದೇ ಕೇಸ್ ಗಳು ಜಾಸ್ತಿಯಾಗುತ್ತಿರುವ ಕಾರಣ ಸರ್ಕಾರವು ಈ ನಿರ್ಧಾರ ಕೈಗೊಂಡಿದೆ. ದರಾಖಸ್ತು ಪೋಡಿ ಸರ್ವೇಗೆ ರೈತರು ಅರ್ಜಿ ಸಲ್ಲಿಸಿದ್ದರೂ, ಸಲ್ಲಿಸಿಲ್ಲದೇ ಇದ್ದರು ಸಹ ರೈತರ ನೆಲದ ಸರ್ವೇ ನಡೆಸಿ, ಅವರ ಹೆಸರು, ಅಣ್ಣ ತಮ್ಮಂದಿರ ಹೆಸರಿಗೆ ಆಸ್ತಿಯನ್ನು ವರ್ಗಾವಣೆ ಮಾಡಿ ಕೊಡಲಾಗುತ್ತದೆ. ಮೊದಲೆಲ್ಲಾ ಈ ಕೆಲಸ ಮಾಡಿಸಿಕೊಳ್ಳಲು ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಇನ್ನಿತರ ಕಚೇರಿಗಳಿಗೆ ರೈತರು ಅಲೆದಾಡಬೇಕಿತ್ತು.

ಆದರೆ ಇನ್ನುಮುಂದೆ ಅದರ ಅವಶ್ಯಕತೆ ಇರುವುದಿಲ್ಲ. ಸರ್ಕಾರವೇ ಕ್ರಮ ಕೈಗೊಳ್ಳಲಿದೆ, ಮೊದಲಿಗೆ ಈ ಕೆಲಸವು ರಾಮನಗರದಲ್ಲಿ ಶುರುವಾಗಲಿದ್ದು, ಇಲ್ಲಿನ ಸರ್ವೇ ಕಾರ್ಯಗಳು ಯಶಸ್ವಿಯಾದರೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಡೆಯಲಿದೆ. ಈ ಕೆಲಸಕ್ಕಾಗಿ ರೋವರ್ ಟ್ಯಾಬ್ ಆರ್ಥೋರೆಕ್ಟಿಫೈಡ್ ರಾಡಾರ್ ತಂತ್ರಜ್ಞಾನ ಹಾಗೂ ಇನ್ನಿತರ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತದೆ. ಇಮೇಜ್ ಟೆಕ್ನಾಲಜಿ ಬಳಸಿ ಸ್ಥಳದ ಸರ್ವೇ ನಂಬರ್, ವಿಸ್ತೀರ್ಣ, ಒತ್ತುವರಿ ಎಲ್ಲಾ ಮಾಹಿತಿಯನ್ನು ಸರ್ಕಾರ ಪಡೆಯಲಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!