ಈಗ ಎಲ್ಲರೂ ಕೂಡ ಹಣದ ವಹಿವಾಟು ನಡೆಸುವುದು ಬ್ಯಾಂಕ್ ಅಕೌಂಟ್ ಮೂಲಕ ಎಂದು ಹೇಳಿದರೆ ತಪ್ಪಲ್ಲ. ಯುಪಿಐ ಬಳಕೆ ಕೂಡ ಜಾಸ್ತಿ ನಡೆಯುತ್ತದೆ. ಬಹುತೇಕ ಎಲ್ಲರೂ ಯುಪಿಐ ಬಳಸಿ, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿ ಮಾಡುತ್ತಾರೆ. ಹಾಗಾಗಿ ಬಹುತೇಕ ಎಲ್ಲರೂ ಕೂಡ ಬ್ಯಾಂಕ್ ಖಾತೆ ಹೊಂದಿರುತ್ತಾರೆ. ಆದರೆ ಇದೀಗ RBI ಒಂದಕ್ಕಿಂತ ಹೆಚ್ಚು ಬ್ಯಾಂಕ್ ಗಳಲ್ಲಿ ಅಕೌಂಟ್ ಹೊಂದಿರುವವರಿಗೆ ಪ್ರಮುಖವಾದ ಮಾಹಿತಿ ನೀಡಿದೆ.
ಬಹಳಷ್ಟು ಜನರ ಬಳಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳು ಇರುತ್ತದೆ. ಆದರೆ ಅವರು ಎಲ್ಲಾ ಬ್ಯಾಂಕ್ ಖಾತೆಗಳನ್ನು ಬಳಸುತ್ತಿರುವುದಿಲ್ಲ. ಒಂದು ಬ್ಯಾಂಕ್ ಖಾತೆಯನ್ನು ಮಾತ್ರ ಆಕ್ಟಿವ್ ಆಗಿ ಬಳಸುತ್ತಾ ಇನ್ನುಳಿದ ಖಾತೆಗಳನ್ನು ಬಳಸದೇ ಹಾಗೆಯೇ ಬಿಟ್ಟಿರುತ್ತಾರೆ. ಅದು ಸೇವಿಂಗ್ಸ್ ಅಕೌಂಟ್ ಆಗಿರಬಹುದು ಅಥವಾ ಇನ್ಯಾವುದೇ ಅಕೌಂಟ್ ಆಗಿರಬಹುದು. ಒಬ್ಬ ವ್ಯಕ್ತಿಯ ಅಕೌಂಟ್ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಸಮಯದಿಂದ ಬಳಸಿಲ್ಲ ಎಂದರೆ, ಅಂಥವರ ಬ್ಯಾಂಕ್ ಅಕೌಂಟ್ ನಿಷ್ಕ್ರಿಯಗೊಳಿಸಬೇಕು ಎಂದು RBI ಸೂಚನೆ ನೀಡಿದೆ.
ಹೌದು, ಈ ಸೂಚನೆಯನ್ನು ಎಲ್ಲಾ ಬ್ಯಾಂಕ್ ಗಳಿಗೆ ನೀಡಲಾಗಿದ್ದು, ಒಂದು ವೇಳೆ ನೀವು ಒಂದಕ್ಕಿಂತ ಹೆಚ್ಚು ಖಾತೆ ಇಟ್ಟುಕೊಂಡು, ಬಳಕೆ ಮಾಡುತ್ತಿಲ್ಲ ಎಂದರೆ ನಿಮ್ಮ ಬ್ಯಾಂಕ್ ಅಕೌಂಟ್ ಕೂಡ ಖತಂ ಆಗುತ್ತದೆ. ಗ್ರಾಹಕರ ಬ್ಯಾಂಕ್ ಅಕೌಂಟ್ ನಿಷ್ಕ್ರಿಯವಾಗುವ ಮೊದಲು ಅವರಿಗೆ ಒಂದು ಸೂಚನೆ ನೀಡಲಾಗುತ್ತದೆ. ಒಂದು ವೇಳೆ ನಿಮಗೆ ಅಕೌಂಟ್ ಅನ್ನು ಉಳಿಸಿಕೊಳ್ಳಬೇಕು ಎಂದರೆ ನಿಮ್ಮ ಅಕೌಂಟ್ ನಲ್ಲಿ ವಹಿವಾಟು ನಡೆಸಬೇಕು.
ಆಗ ನಿಮ್ಮ ಅಕೌಂಟ್ ಉಳಿದುಕೊಳ್ಳುತ್ತದೆ. ಅಕಸ್ಮಾತ್ ನಿಮಗೆ ಸರಿಯಾಗಿ ಗೊತ್ತಾಗದೇ ಅಕೌಂಟ್ ನಿಷ್ಕ್ರಿಯವಾದರೆ ಒಮ್ಮೆ ನಿಮ್ ಬ್ಯಾಂಕ್ ಅಕೌಂಟ್ ಇರುವ ಬ್ಯಾಂಕ್ ಶಾಖೆಗೆ ಹೋಗಿ, ಹಣದ ವಹಿವಾಟು ಮಾಡುವ ಮೂಲಕ, ನಿಮ್ಮ ಅಕೌಂಟ್ ಸಕ್ರಿಯವಾಗಿಸಿಕೊಳ್ಳಬಹುದು. RBI ನ ಈ ಹೊಸ ನಿಯಮವನ್ನು ಎಲ್ಲರೂ ತಿಳಿದುಕೊಳ್ಳಬೇಕು.