ಸರ್ಕಾರವು ನಮ್ಮ ದೇಶದ ಕಾರ್ಮಿಕ ವರ್ಗದವರ ಕೆಲಸ ಮಾಡುವವರಿಗೆ ಕೊಡುತ್ತಿರುವ ಸೌಲಭ್ಯ ಲೇಬರ್ ಕಾರ್ಡ್. ಕಾರ್ಮಿಕ ವರ್ಗದಲ್ಲಿ ಕೆಲಸ ಮಾಡುವವರಿಗೆ ಹಲವು ಅನುಕೂಲಕ್ಕಾಗಿ ಕೊಡುತ್ತಿರುವ ಕಾರ್ಡ್ ಇದು. ಈ ಒಂದು ಕಾರ್ಡ್ ಕಟ್ಟಡ ಕಾರ್ಮಿಕರ ಬಳಿ ಇದ್ದರೆ, ಅವರಿಗೆ ಉಚಿತ ಪ್ರಯಾಣ, ಉಚಿತ ಆರೋಗ್ಯ ಚಿಕಿತ್ಸೆ, ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಧನ ಸಹಾಯ..
ಕಾರ್ಮಿಕರ ಮಕ್ಕಳ ಮದುವೆಗೆ ಸಹಾಯ, ಹೀಗೆ ಇಂಥ ಸಾಕಷ್ಟು ಅನುಕೂಲಗಳು ಸಿಗುತ್ತದೆ. ಹಾಗಾಗಿ ಅನೇಕ ಕಾರ್ಮಿಕರು, ಈ ಕಾರ್ಡ್ ಪಡೆದುಕೊಳ್ಳಬೇಕು ಎಂದು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅನೇಕ ಜನರು ಸುಳ್ಳು ಮಾಹಿತಿ, ಸುಳ್ಳು ದಾಖಲೆಗಳನ್ನು ಕೊಟ್ಟು ಲೇಬರ್ ಕಾರ್ಡ್ ಮಾಡಿಸಿಕೊಂಡಿರುತ್ತಾರೆ. ಇಂಥವರಿಗೆ ಈಗ ಸರ್ಕಾರ ಒಂದು ವಾರ್ನಿಂಗ್ ನೀಡಿದೆ. ಈ ರೀತಿ ಮೋಸ ಮಾಡಿ ಲೇಬರ್ ಕಾರ್ಡ್ ಮಾಡಿಸಿಕೊಂಡಿರುವವರು ತಾವೇ ಸ್ವತಃ ಕಾರ್ಡ್ ಗಳನ್ನು ವಾಪಸ್ ಕೊಡಬೇಕು.
ಕಾರ್ಮಿಕ ಇಲಾಖೆಯ ಕಚೇರಿಗೆ ಅಥವಾ ಕಾರ್ಮಿಕ ಇಲಾಖೆಯ ನಿರೀಕ್ಷಕರಿಗೆ ತಾವೇ ಹೋಗಿ ನಿಮ್ಮ ಲೇಬರ್ ಕಾರ್ಡ್ ಅನ್ನು ವಾಪಸ್ ಕೊಡಬೇಕು. ಒಂದು ವೇಳೆ ವಾಪಸ್ ಕೊಡದೆ ಹೋದರೆ ಅಂಥವರ ಮೇಲೆ ಸರ್ಕಾರವು ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತದೆ. ಸರ್ಕಾರವು ಈ ಎಲ್ಲಾ ಲೇಬರ್ ಕಾರ್ಡ್ ಗಳ ಪರಿಶೀಲನೆ ಮಾಡಲಿದ್ದು, ಆ ಸಮಯದಲ್ಲಿ ಯಾರಾದರೂ ಸಿಕ್ಕಿ ಹಾಕಿಕೊಂಡರೆ, ಅಂಥವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ.
ಹಾಗೆಯೇ ಅವರಿಗೆ ಸರ್ಕಾರದಿಂದ ಲೇಬರ್ ಕಾರ್ಡ್ ಮೂಲಕ ಸಿಕ್ಕಿರುವ ಎಲ್ಲಾ ಸೌಲಭ್ಯಗಳನ್ನು ವಾಪಸ್ ತೆಗೆದುಕೊಳ್ಳಲಾಗುತ್ತದೆ. ಹಾಗಾಗಿ ಇದೆಲ್ಲವೂ ಆಗಿ ನೀವು ಹೆಚ್ಚು ತೊಂದರೆ ಅನುಭವಿಸುವುದಕ್ಕಿಂತ, ನೀವು ಸುಳ್ಳು ದಾಖಲೆ ನೀಡಿದ್ದರೆ, ಈಗಲೇ ಲೇಬರ್ ಕಾರ್ಡ್ ವಾಪಸ್ ಕೊಡಿ.