Chikkaballapura: ಗುರುಗಳು ಎಂದರೆ ಒಬ್ಬ ವಿದ್ಯಾರ್ಥಿಯ ಬದುಕನ್ನು ಸರಿದಾರಿಗೆ ತೆಗೆದುಕೊಂಡು ಹೋಗುವವರು. ವಿದ್ಯಾರ್ಥಿಗೆ ಶಿಕ್ಷಕರೆ ಮಾರ್ಗದರ್ಶಕರು, ತಂದೆ ತಾಯಿ ನಂತರ ಶಿಕ್ಷಕರೇ ಒಬ್ಬ ವಿದ್ಯಾರ್ಥಿಯ ಬದುಕಿನಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ ಎಂದು ಹೇಳುತ್ತಾರೆ. ಶಿಕ್ಷಕಿ ಮತ್ತು ವಿದ್ಯಾರ್ಥಿಗಳದ್ದು ಬಹಳ ಪವಿತ್ರವಾದ ಸಂಬಂಧ.
ಆದರೆ ಈಗಿನ ಕಾಲದಲ್ಲಿ ಈ ಸಂಬಂಧಕ್ಕೆ ಕೂಡ ಬೆಲೆ ಇಲ್ಲದ ಹಾಗೆ ಆಗಿದೆ. ಇತ್ತೀಚೆಗೆ ಶಾಲೆಯ ಮುಖ್ಯಸ್ಥೆ ತನ್ನ ಶಾಲೆಯ ವಿದ್ಯಾರ್ಥಿಯ ಜೊತೆಗೆ ಶಾಲೆಯ ಟ್ರಿಪ್ ನಲ್ಲಿ ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಮಗನ ವಯಸ್ಸಿನ ವಿದ್ಯಾರ್ಥಿ ಜೊತೆಗೆ ಈ ರೀತಿ ಮಾಡಿದ್ದಾರೆ ಈ ಮುಖ್ಯ ಶಿಕ್ಷಕಿ.
ಈಕೆಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ, ಚಿಂತಾಮಣಿ ತಾಲ್ಲೂಕಿನ, ಮುರಗಮಲ್ಲ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಎಂದು ತಿಳಿಸಲಾಗಿದೆ. ಆದರೆ ಆಕೆಯ ಹೆಸರನ್ನು ಬಹಿರಂಗಪಡಿಸಿಲ್ಲ. ಈಕೆ ವಿದ್ಯಾರ್ಥಿಯ ಜೊತೆಗೆ ಬೇರೆ ಬೇರೆ ರೀತಿಯಲ್ಲಿ ಫೋಟೋ ತೆಗೆಸಿಕೊಂಡಿದ್ದಾರಂತೆ, ಅವುಗಳು ವೈರಲ್ ಆಗಿವೆ..
ವಿದ್ಯಾರ್ಥಿಗೆ ಮುತ್ತು ಕೊಡುತ್ತಿರುವ ಫೋಟೋ ಸಹ ವೈರಲ್ ಆಗಿದೆ. ಇದನ್ನು ನೋಡಿ ಆ ವಿದ್ಯಾರ್ಥಿಯ ತಂದೆ ತಾಯಿ ಶಾಕ್ ಆಗಿದ್ದು, ಶಿಕ್ಷಕಿಯ ಮೇಲೆ ಕೋಪಗೊಂಡಿದ್ದಾರೆ. ಹಾಗೆಯೇ BEO ಅವರಿಗೆ ಈ ಬಗ್ಗೆ ದೂರು ಕೂಡ ನೀಡಲಾಗಿದೆಯಂತೆ.