ದೇಶದ ರಕ್ಷಣಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಅವಕಾಶ ನೀಡಲಾಗಿದ್ದು, ಆಸಕ್ತಿ ಇರುವವರಿಗೆ ಈ ಮಾಹಿತಿ ಅನುಕೂಲ ನೀಡಲಿದೆ. ಇಲ್ಲಿ ಪಿಯುಸಿ ಪಾಸ್ ಆದವರಿಗೆ ಶುರುವಿನಲ್ಲೇ 56,000 ಸಂಬಳ ಸಿಗಲಿದೆ, ಹಾಗೆಯೇ ಡಿಗ್ರಿ ಪಾಸ್ ಆದವರಿಗೆ 1.75 ಲಕ್ಷದವರೆಗು ಸಂಬಳ ಸಿಗಲಿದೆ. ಈ ಕೆಲಸದ ಪೂರ್ತಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ..

ರಕ್ಷಣಾ ಇಲಾಖೆಯಲ್ಲಿ ಸೈನಿಕರನ್ನ ಮಾತ್ರ ನೇಮಕಾತಿ ಮಾಡಿಕೊಳ್ಳುವುದಿಲ್ಲ, ಬೇರೆ ವಿವಿಧ ಹುದ್ದೆಗಳಿಗೂ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಈ ಪರೀಕ್ಷೆಯನ್ನು UPSC ನಡೆಸುತ್ತದೆ. ವರ್ಷಕ್ಕೆ ಎರಡು ಸಾರಿ ಪರೀಕ್ಷೆ ನಡೆಸಿ, ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಖಾಲಿ ಇರುವ ಹುದ್ದೆಗಳನ್ನು ಫಿಲ್ ಮಾಡಲಾಗುತ್ತದೆ. ರಕ್ಷಣಾ ದಳದಲ್ಲಿ ಕೆಲಸ ಪಡೆಯುವವರಿಗೆ ಸಂಬಳ ತುಂಬಾ ಜಾಸ್ತಿ ಇರುತ್ತದೆ. ಪಿಯುಸಿ, ಡಿಗ್ರಿ ಹಾಗೂ ಇಂಜಿನಿಯರಿಂಗ್ ಮಾಡಿರುವವರಿಗೆ ಹುದ್ದೆಗಳು ಖಾಲಿ ಇದೆ.

ಆಯ್ಕೆ ಆದವರಿಗೆ ಮಿಲಿಟರಿ ಡಿಫೆನ್ಸ್, ನೌಕಾಪಡೆ ಅಥವಾ ವಾಯುಪಡೆಯಲ್ಲಿ ಪೋಸ್ಟಿಂಗ್ ಆಗುತ್ತದೆ. ಡಿಗ್ರಿ ಪಾಸ್ ಆಗಿರುವವರಿಗೆ ಒಟ್ಟು 457 ಹುದ್ದೆಗಳು ಖಾಲಿ ಇದ್ದು, UPSC ಪರೀಕ್ಷೆಯನ್ನು ಅಟೆಂಡ್ ಮಾಡಬೇಕು. CDS- Combined Defense Service ಹೆಸರಿನಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆ 2024ರ ಏಪ್ರಿಲ್ 21 ರಂದು ನಡೆಯಲಿದ್ದು, ಯಾವುದೇ ಡಿಗ್ರಿ, ಇಂಜಿನಿಯರಿಂಗ್ ಅಥವಾ ಬಿಟೆಕ್ ಮಾಡಿರುವವರು ಈ ಎಕ್ಸಾಂ ಬರೆಯಬಹುದು.

ಮಿಲಿಟರಿಯಲ್ಲಿ ಕೆಲಸ ಪಡೆಯಬೇಕಿರುವವರಿಗೆ ಯಾವುದೇ ಡಿಗ್ರಿ ಆಗಿದ್ದರು ಪರ್ವಾಗಿಲ್ಲ. ನೌಕಾಪಡೆಯಲ್ಲಿ ಕೆಲಸ ಬೇಕು ಎಂದುಕೊಂಡಿರುವವರಿಗೆ ಇಂಜಿನಿಯರಿಂಗ್ ಆಗಿರಬೇಕು, ಏರ್ ಫೋರ್ಸ್ ನಲ್ಲಿ ಕೆಲಸ ಬೇಕು ಎಂದರೆ ಡಿಗ್ರಿಯಲ್ಲಿ ಫಿಸಿಕ್ಸ್ ಹಾಗೂ ಮ್ಯಾತ್ಸ್ ಓದಿರಬೇಕು. ಈ ಹುದ್ದೆಗಳಿಗೆ ಅರ್ಜಿ ಹಾಕಲು 2024ರ ಜನವರಿ 9 ಲಾಸ್ಟ್ ಡೇಟ್ ಆಗಿರುತ್ತದೆ. ಹುದ್ದೆಗೆ ಅಪ್ಲೈ ಮಾಡಲು 200 ರೂಪಾಯಿ ಅಪ್ಲಿಕೇಶನ್ ಫೀಸ್ ಇರುತ್ತದೆ.

ಅಪ್ಲಿಕೇಶನ್ ತಿದ್ದುಪಡಿ ಮಾಡಲು 7 ದಿನಗಳ ಅವಕಾಶ ಇದೆ. ಈ ಹುದ್ದೆಗಳಿಗೆ ವೇತನ ಶ್ರೇಣಿ ₹56,000 ಇಂದ ₹1,77,000 ವರೆಗು ಇರುತ್ತದೆ. ಈ ಹುದ್ದೆಗಳ ಎಕ್ಸಾಂ ಭಾರತದ 70 ಸೆಂಟರ್ ಗಳಲ್ಲಿ ನಡೆಯಲಿದ್ದು, ಕರ್ನಾಟಕದಲ್ಲಿ ಮೈಸೂರು, ಬೆಂಗಳೂರು ಮತ್ತು ಧಾರವಾಡ ಈ ಮೂರು ಕಡೆ ನಡೆಯಲಿದೆ. ಎಕ್ಸಾಂ ಅಪ್ಲೈ ಮಾಡುವಾಗ ಸೆಂಟರ್ ಆಯ್ಕೆ ಮಾಡಿ. ಎಕ್ಸಾಂ ದಿನದ 7 ದಿನಗಳ ಮೊದಲು ಆನ್ಲೈನ್ ಮೂಲಕ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಬಹುದು.

ಈ ಹುದ್ದೆಗೆ ಅಪ್ಲೈ ಮಾಡಲು UPSC ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ಮೊದಲಿಗೆ ವೆಬ್ಸೈಟ್ ನಲ್ಲಿ ರಿಜಿಸ್ಟರ್ ಮಾಡಿ, CDS ಎಕ್ಸಾಂ ಗೆ ಅಪ್ಲೈ ಮಾಡಬಹುದು. ಏರ್ ಫೋರ್ಸ್ ಗೆ ಸೇರುವವರಿಗೆ ವರ್ಷಕ್ಕೆ 2 ತಿಂಗಳು ಪೂರ್ತಿ ರಜಾ ಇರುತ್ತದೆ. ಮಕ್ಕಳ ಓದಿಗೆ, ಆರೋಗ್ಯಕ್ಕೆ ಹಾಗೂ ಇನ್ನಿತರ ವಿಚಾರಕ್ಕೆ ಇನ್ಷುರೆನ್ಸ್ ಇರುತ್ತದೆ.

ಪಿಯುಸಿ ಪಾಸ್ ಆದವರಿಗೆ ರಕ್ಷಣಾ ಇಲಾಖೆಯಲ್ಲಿ ಒಟ್ಟು 400 ಹುದ್ದೆಗಳು ಖಾಲಿ ಇದೆ. ಇವರಿಗೆ ಶುರುವಿನಲ್ಲಿ 56,100 ಸಂಬಳ ಇರುತ್ತದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 9/1/2024 ಆಗಿರುತ್ತದೆ. ತಿದ್ದುಪಡಿಯನ್ನು 10ನೇ ತಾರೀಕಿನಿಂದ 16ನೇ ತಾರೀಕಿನವರೆಗು ಮಾಡಬಹುದು. ಇವರಿಗೆ ಅಪ್ಲಿಕೇಶನ್ ಫೀಸ್ 100 ರೂಪಾಯಿ ಆಗಿರುತ್ತದೆ. ಇವರಿಗೂ ಕೂಡ ಎಕ್ಸಾಂ ಗೆ ಅಪ್ಲೈ ಮಾಡುವುದಕ್ಕೆ ಕೊನೆಯ ದಿನಾಂಕ 9/1/2024.

ಎಕ್ಸಾಂ ಸೆಂಟರ್ ಅದೇ ರೀತಿ ಇರುತ್ತದೆ. ಪಿಯುಸಿ ಪಾಸ್ ಆದವರಿಗೆ ನೇವಿ ಹಾಗೂ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಪೋಸ್ಟಿಂಗ್ ಆಗುತ್ತದೆ. ಡಿಫೆನ್ಸ್ ನಲ್ಲಿ 370 ಪೋಸ್ಟ್ ಆಗಲಿದ್ದು, 30 ಪೋಸ್ಟ್ ನೇವಿಯಲ್ಲಿ ಆಗುತ್ತದೆ. ಡಿಫೆನ್ಸ್ ಅಕಾಡೆಮಿಯಲ್ಲಿ ಪೋಸ್ಟಿಂಗ್ ಆಗಲು ಪಿಯುಸಿ ಮುಗಿಸಿರಬೇಕು, ನೇವಿಯಲ್ಲಿ ಪೋಸ್ಟಿಂಗ್ ಆಗಲು ಪಿಯುಸಿ ಯಲ್ಲಿ ಸೈನ್ಸ್ ಓದಿರಬೇಕು. ವಯೋಮಿತಿ ಬಗ್ಗೆ ಹೇಳುವುದಾದರೆ ಎರಡು ಹುದ್ದೆಗೆ ಅಪ್ಲೈ ಮಾಡುವವರ ವಯಸ್ಸು 18 ರಿಂದ 24 ವರ್ಷಗಳ ಒಳಗಿರಬೇಕು. ಆಸಕ್ತರು ಬೇಗ ಅಪ್ಲೈ ಮಾಡಿ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!