free ration scheme 2023: ಪ್ರತಿಯೊಒಂದು ಕುಟುಂಬಕ್ಕೆ ಪಡಿತರ ಚೀಟಿಯನ್ನು ಸರ್ಕಾರದಿಂದ ಕೊಡಲಾಗಿದ್ದು ಪಡಿತರ ಚೀಟಿಯ ಆಧಾರದ ಮೇಲೆ ಪ್ರತಿ ತಿಂಗಳು ರೇಷನ್ ಕೊಡಲಾಗುತ್ತದೆ. ಬಡತನ ರೇಖೆಗಿಂತ ಕಡಿಮೆ ಇರುವ ಕುಟುಂಬದವರಿಗೆ ಹೆಚ್ಚು ಅಕ್ಕಿಯನ್ನು ಕೊಡುವ ಸರ್ಕಾರದ ನಿರ್ಧಾರದಿಂದ ಕೆಲವು ಶ್ರೀಮಂತರು ಸಹ ಅಕ್ಕಿಯನ್ನು ಪಡೆಯುತ್ತಿರುವುದು ವಿಷಾದನೀಯವಾಗಿದೆ. ಸರ್ಕಾರ ಇದೀಗ ಪಡಿತರ ಚೀಟಿದಾರರಿಗೆ ಹೊಸದೊಂದು ಸಿಹಿ ಸುದ್ದಿಯನ್ನು ನೀಡುತ್ತಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ಪಡಿತರ ಚೀಟಿದಾರರಿಗೆ ಒಂದು ಸಿಹಿ ಸುದ್ದಿ ಇದೆ. ಪಡಿತರ ಚೀಟಿ ಹೊಂದಿದ ಪ್ರತಿಯೊಂದು ಕುಟುಂಬಕ್ಕೆ ಕುಟುಂಬದ ಸದಸ್ಯರ ಸಂಖ್ಯೆಯ ಆಧಾರದ ಮೇಲೆ ಪಡಿತರ ಅಂಗಡಿಗಳಲ್ಲಿ ಅಕ್ಕಿಯನ್ನು ಕೊಡಲಾಗುತ್ತದೆ. ಪ್ರತಿ ತಿಂಗಳು ಕುಟುಂಬದ ಸದಸ್ಯರ ಸಂಖ್ಯೆಯ ಆಧಾರದ ಮೇಲೆ ಅಕ್ಕಿಯನ್ನು ಕೊಡಲಾಗುತ್ತಿತ್ತು ನಂತರ ಸಿದ್ದರಾಮಯ್ಯನವರ ಸರ್ಕಾರ ಅಧಿಕಾರಕ್ಕೆ ಬಂದಾಗ ಅವರ ಮಾತಿನಂತೆ ಅಕ್ಕಿ ಹಾಗೂ ಹಣವನ್ನು ಅಕೌಂಟ್ ಗೆ ನೇರವಾಗಿ ವರ್ಗಾವಣೆ ಮಾಡುವ ಪದ್ಧತಿಯನ್ನು ಜಾರಿಗೊಳಿಸಿದರು ಇದೀಗ ಹೊಸ ನಿರ್ಧಾರವನ್ನು ಸರ್ಕಾರ ಮಾಡುತ್ತಿದೆ.
free ration scheme 2023
ಇನ್ನುಮುಂದೆ ಸರ್ಕಾರ ಹೊಸದೊಂದು ನಿರ್ಧಾರ ಮಾಡಿದೆ. 5 ಕೆಜಿ ಅಕ್ಕಿ ಹಣದ ಬದಲು ಕುಚಲಕ್ಕಿ ವಿತರಣೆ ಮಾಡುವ ನಿರ್ಧಾರವನ್ನು ಮಾಡಿದ್ದಾರೆ. ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರ ಒಂದು ಹೊಸ ಸಿಹಿ ಸುದ್ದಿಯೊಂದು ನೀಡಿದೆ. ಕೆಲವು ಕಡೆ ಈಗಾಗಲೆ 5 ಕೆಜಿ ಕುಚಲಕ್ಕಿ ನೀಡಲಾಗಿದೆ ಎಂದು ಕೆ ಎಚ್ ಮುನಿಯಪ್ಪ ಹೇಳಿದ್ದಾರೆ. ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆಯಡಿ ಕಾಂಗ್ರೆಸ್ ನ ಅಶೋಕ ಕುಮಾರ್ ರೈ ಅಕ್ಕಿ ವಿಷಯ ಪ್ರಸ್ತಾಪಿಸಿ, ಹತ್ತು ಕೆಜಿ ಅಕ್ಕಿ ಇತ್ತೀಚಿನ ದಿನಗಳಲ್ಲಿ 5 ಕೆಜಿ ಅಕ್ಕಿ ಬದಲಿಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಅಕ್ಕಿಯ ಬದಲಿಗೆ ಕುಚಲಕ್ಕಿಯನ್ನು ಕೊಡುವ ನಿರ್ಧಾರ ಮಾಡಲಾಗುತ್ತದೆ ಎಂದು ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ. ನಂತರ ಮಾತನಾಡಿದ ಸಚಿವರು ಕೆ ಎಚ್ ಮುನಿಯಪ್ಪ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಕೊಡುವುದಾದರೆ ಕುಚಲಕ್ಕಿ ಕೊಡಲಾಗುತ್ತದೆ ಎಂದು ಹೇಳಿದರು. ಕುಚಲಕ್ಕಿ ಸೇವನೆಯಿಂದ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಉಪಯೋಗವಿದೆ. ಕುಚಲಕ್ಕಿ ಸೇವನೆಯಿಂದ ದೇಹಕ್ಕೆ ಶಕ್ತಿ ಒದಗುತ್ತದೆ, ಕುಚಲಕ್ಕಿ ಕೊಡುವ ಸರ್ಕಾರದ ಈ ಹೊಸ ನಿರ್ಧಾರ ದ ಬಗ್ಗೆ ನಿಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.