BPL Ration Card: ಬಿಪಿಎಲ್ ಕಾರ್ಡ್ ಗಳನ್ನು ರಾಜ್ಯದಲ್ಲಿ ಬಡತನದ ರೇಖೆಗಿಂತ ಕಡಿಮೆ ಇರುವ ಜನರಿಗೆ ವಿತರಣೆ ಮಾಡಲಾಗುತ್ತದೆ. ಬಿಪಿಎಲ್ ಕಾರ್ಡ್ ಹೊಂದಿದ್ದರೆ ಆ ಕುಟುಂಬಗಳಿಗೆ ಹೆಚ್ಚಿನ ಸೌಲಭ್ಯ ಮತ್ತು ಸವಲತ್ತುಗಳನ್ನು ಕೂಡ ಕೊಡಲಾಗುತ್ತಿದೆ. ಉಚಿತವಾಗಿ ಗ್ಯಾರೆಂಟಿ ಯೋಜನೆಯ ಭಾಗ್ಯಗಳು. ಉಚಿತ ರೇಷನ್ ಇನ್ನಷ್ಟು ಸವಲತ್ತುಗಳನ್ನು ಕೊಡಲಾಗುತ್ತದೆ. ಅದರ ಜೊತೆಗೆ ಈಗ ರಾಜ್ಯ ಸರ್ಕಾರವು ಜನರಿಗಾಗಿ ಹೊಸದೊಂದು ಸೌಲಭ್ಯ ಕೊಡುವುದಕ್ಕೆ ಮುಂದಾಗಿದೆ.
ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರವು ಆಯುಶ್ಮಾನ್ ಭಾರತ್ ಕಾರ್ಡ್ ಅನ್ನು ಜಾರಿಗೆ ತಂದಿದೆ. ಈ ಕಾರ್ಡ್ ಇರುವವರಿಗೆ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯ ಸೌಲಭ್ಯವನ್ನು ಕೊಡಲಾಗುತ್ತದೆ. ಇದೀಗ ಇಂಥದ್ದೇ ಒಂದು ಯೋಜನೆಯನ್ನು ಜಾರಿಗೆ ತಂದಿದೆ. ಇದು ರಾಜ್ಯದಲ್ಲಿ, ಆಯುಶ್ಮಾನ್ ಭಾರತ್ ಮುಖ್ಯಮಂತ್ರಿ ಆರೋಗ್ಯ ಯೋಜನೆ ಆಗಿದೆ. ಈ ಯೋಜನೆಯ ಮೂಲಕ ಸಿದ್ದರಾಮಯ್ಯ ಅವರು ಈ ಬಗ್ಗೆ ಸೂಚನೆ ಕೊಟ್ಟಿದ್ದಾರೆ..
ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದವರಿಗೆ ವರ್ಷಕ್ಕೆ 5 ಲಕ್ಷ ರೂಪಾಯಿಯವರೆಗು ರಿಜಿಸ್ಟರ್ ಆಗಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಇನ್ನು ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ವರ್ಷಕ್ಕೆ ಸುಮಾರು 30% ಜೊತೆಗೆ 1.50 ಲಕ್ಷ ರೂಪಾಯಿಯವರೆಗು ಉಚಿತ ಚಿಕಿತ್ಸೆ ಪಡೆದುಕೊಳ್ಳಬಹುದು. ಈ ಚಿಕಿತ್ಸೆ ಭಾಗ್ಯದ ವಿಚಾರದಲ್ಲಿ ಇದೀಗ ಸರ್ಕಾರವು ಜನರಿಗೆ ಒಂದು ಗುಡ್ ನ್ಯೂಸ್ ನೀಡಿದೆ.
ಆಯುಶ್ಮಾನ್ ಭಾರತ್ ಮುಖ್ಯಮಂತ್ರಿ ಆರೋಗ್ಯ ಯೋಜನೆಯ ಅನುಸಾರ ಈ ಸೌಲಭ್ಯ ಸಿಗುವ ಕಾರ್ಡ್ ಗಳನ್ನು ಜನರಿಗೆ ವಿಸ್ತರಣೆ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದೆ. ರಾಜ್ಯದ ಎಲ್ಲಡೆ ಇರುವ ಜನರಿಗೆ ಈ ಸೌಲಭ್ಯ ಕೊಡಲು ಮುಂದಾಗಿದೆ ಸರ್ಕಾರ. ಆಯುಶ್ಮಾನ್ ಕಾರ್ಡ್ ಗಳನ್ನು ವಿತರಣೆ ಮಾಡಲು ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ.
ನಮ್ಮ ರಾಜ್ಯದಲ್ಲಿ ಒಟ್ಟು 5.69 ಕೋಟಿ ಆಯುಶ್ಮಾನ್ ಕಾರ್ಡ್ ಗಳನ್ನು ನೀಡುವುದಕ್ಕೆ ಸಿದ್ದರಾಮಯ್ಯ ಅವರು ನಿರ್ಧಾರ ಮಾಡಿದ್ದು. ಇದರ ಪೈಕಿ 1.54 ಕೋಟಿ ಕಾರ್ಡ್ ಗಳನ್ನು ಈಗಾಗಲೇ ವಿತರಣೆ ಮಾಡಲಾಗಿದೆ. ಇನ್ನು 4.15 ಕೋಟಿ ಜನರಿಗೆ ಆಯುಶ್ಮಾನ್ ಕಾರ್ಡ್ ಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಕಾರ್ಡ್ ಗಳ ಸಾಫ್ಟ್ ಕಾಪಿಯನ್ನು ಕೊಡಲಾಗುತ್ತದೆ.
ಈ ಕಾರ್ಡ್ ಗಳನ್ನು ರಾಜ್ಯದ ಎಲ್ಲಾ ಗ್ರಾಮೀಣ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಕಾರ್ಡ್ ಗಳನ್ನು ಕೊಡಲು ವ್ಯವಸ್ಥೆ ಮಾಡಲಾಗುತ್ತದೆ. ಹಾಗೆಯೇ ಈ ಕಾರ್ಡ್ ಗಳನ್ನು ಪಡೆಯಲು ರಿಜಿಸ್ಟರ್ ಮಾಡಲು ಎಲ್ಲಾ ಕೇಂದ್ರಗಳಲ್ಲಿ ಸಾಧ್ಯವಿಲ್ಲ, ಅದಕ್ಕಾಗಿಯೂ ಬೇರೆ ವ್ಯವಸ್ಥೆಗಳನ್ನು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ ಸಿಎಂ ಸಿದ್ದರಾಮಯ್ಯ ಅವರು.