ಪ್ರಪಂಚದ ಬೇರೆ ಬೇರೆ ಕಡೆ ವಿವಿಧ ರೀತಿಯಲ್ಲಿ ಮದುವೆಯ ಶಾಸ್ತ್ರಗಳನ್ನು ಮಾಡುತ್ತಾರೆ. ಮದುವೆ ಅಂದ್ರೆ ಒಂದೊಂದು ಊರಿನಲ್ಲೂ ಬೇರೆ ಬೇರೆ ರೀತಿ ಸಂಪ್ರದಾಯ ಇರುತ್ತದೆ. ಕೆಲವು ಸಂಪ್ರದಾಯಗಳು ನಮಗೆ ಆಶ್ಚರ್ಯ ಅನ್ನಿಸುವುದು ಉಂಟು. ಇದೊಂದು ಸಮುದಾಯದಲ್ಲಿ ತಂದೆಯೇ ಮಗಳನ್ನು ಮದುವೆ ಆಗುವ ಸಂಪ್ರದಾಯ ಇದೆ. ಇದನ್ನ ಕೇಳೋಕೆ ವಿಚಿತ್ರ ಅನ್ನಿಸಿದರೂ ಸಹ ಇದು ಸತ್ಯ..
ತಂದೆ ಮಗಳ ಸಂಬಂಧ ಅಂದ್ರೆ ಅದು ಬಹಳ ಪವಿತ್ರವಾದ ಸಂಬಂಧ ಅನ್ನೋದು ನಮಗೆಲ್ಲ ಗೊತ್ತಿರುವ ವಿಷಯ. ಒಬ್ಬ ತಂದೆ ತನ್ನ ಮಗಳನ್ನ ರಾಣಿಯ ಹಾಗೆ ನೋಡಿಕೊಳ್ಳುತ್ತಾನೆ. ಆದರೆ ಇದೊಂದು ಸಮುದಾಯದಲ್ಲಿ ತಂದೆಯೇ ಮಗಳನ್ನು ಮದುವೆಯಾಗುತ್ತಾರೆ. ಇಂಥ ಒಂದು ಸಂಪ್ರದಾಯ ಪಾಲಿಸುವುದು ಬಾಂಗ್ಲಾದೇಶದ ಮಂಡಿ ಎನ್ನುವ ಸಮುದಾಯದಲ್ಲಿ.
ಹೌದು, ಈ ಸಮುದಾಯದಲ್ಲಿ ಒಂದು ಹೆಣ್ಣುಮಗು ದೊಡ್ಡವಳಾದ ಬಳಿಕ ಆಕೆಯನ್ನು ಆಕೆಯ ತಂದೆಯೇ ಮದುವೆ ಆಗುತ್ತಾರೆ. ಆಕೆಗೆ ಹೆಂಡತಿಗೆ ಕೊಡುವ ಎಲ್ಲಾ ಅಧಿಕಾರವನ್ನು ಕೊಡುತ್ತಾರೆ. ಒಂದು ವೇಳೆ ಆ ಹುಡುಗಿ ಚಿಕ್ಕವಳಾಗಿದ್ದಾಗಲೇ ಗಂಡ ಸತ್ತು ಹೋದರೆ, ನಂತರ ಆಕೆಯನ್ನು ಮತ್ತೊಬ್ಬ ವ್ಯಕ್ತಿ ಮದುವೆ ಆಗುತ್ತಾರೆ. ಒಂದು ವೇಳೆ ಆಕೆಗೆ ಅದಾಗಲೇ ಮಗಳಿದ್ದರೆ, ಆಕೆ ದೊಡ್ಡವಳಾದ ಮೇಲೆ ತಾಯಿಯನ್ನು ಮದುವೆಯಾದ ವ್ಯಕ್ತಿಯೇ ಮದುವೆಯಾಗುತ್ತಾರೆ.
ಮತ್ತೆ ಇದೇ ರೀತಿ ಶಾಸ್ತ್ರಗಳು ಮುಂದುವರೆಯುತ್ತವೆ. ಇಂಥದ್ದೊಂದು ಪದ್ಧತಿಯನ್ನು ಬಹಳಷ್ಟು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಮಂಡಿ ಸಮುದಾಯಕ್ಕೆ ಸೇರಿದ ಓರೋಲಾ ಎನ್ನುವ ಹುಡುಗಿ ತಮ್ಮ ಸಮುದಾಯದಲ್ಲಿ ನಡೆಯುತ್ತಿರುವ ಈ ಆಚರಣೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಇದನ್ನು ನೋಡಿದ ನೆಟ್ಟಿಗರು ಈ ಆಚರಣೆ ಬಗ್ಗೆ ಕೇಳಿ ಶಾಕ್ ಆಗಿದ್ದಾರೆ. ತಂದೆ ಮಗಳ ಸಂಬಂಧವನ್ನ ಈ ಥರ ಮಾಡ್ತಿದ್ದಾರಾ ಎಂದು ಜನರು ಆಶ್ಚರ್ಯಪಟ್ಟಿದ್ದಾರೆ.