Govt Loan Schemes: ಒಂದು ವೇಳೆ ನೀವು ಎಸ್ಸಿ ಎಸ್ಟಿ ಸಮುದಾಯದವರಾಗಿದ್ದು, ಸಾಲ ಸೌಲಭ್ಯ ಪಡೆಯಲು ಕಾಯುತ್ತಿದ್ದರೆ, ನಿಮಗಾಗಿ ಒಂದು ಸದವಕಾಶ ಕಾದಿದೆ. ಇದೀಗ 2023-24ನೇ ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆಯ ಮೂಲಕ ಮಹಿಳೆಯರಿಗೆ ಸಾಲ ಸೌಲಭ್ಯ (Govt Loan Schemes) ನೀಡುವುದಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ..
ಮಹಿಳಾ ಸಬಲೀಕರಣ ನಡೆಯಬೇಕು, ಮಹಿಳೆಯರು ಯಾರ ಮೇಲೂ ಡಿಪೆಂಡ್ ಆಗಿರಬಾರದು ಎಂದು ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಸ್ವಸಹಾಯ ಸಂಘಗಳಲ್ಲಿ ಮಹಿಳೆಯರು ಈ ಸಾಲ ಪಡೆದು, ಸ್ವಯಂ ಉದ್ಯೋಗ ಶುರು ಮಾಡಿ, ಆರ್ಥಿಕವಾಗಿ ಯಾರ ಹಂಗಲ್ಲು ಇರಬಾರದು ಎಂದು ಪ್ರೇರಣಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಮೂಲಕ ಯಾರೆಲ್ಲಾ ಸಾಲ ಪಡೆಯಬಹುದು, ಅರ್ಹತೆ ಮಾನದಂಡಗಳು ಏನೇನು? ಎಲ್ಲವನ್ನು ತಿಳಿಸುತ್ತೇವೆ ನೋಡಿ..
ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ. ಈ ಎಲ್ಲಾ ನಿಗಮಗಳಿಗೆ ಸೇರಿದ ಮಹಿಳೆಯರು ಪ್ರೇರಣಾ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಪ್ರೇರಣಾ ಯೋಜನೆಯ ಸಾಲ ಪಡೆಯಲು, ಒಂದು ಸಂಘದಲ್ಲಿ ಕನಿಷ್ಠ 10 ಮಹಿಳೆಯರು ಇರಿಬೇಕು, ಇವರಿಗೆ 15,000 ಸಹಾಯಧನ 10,000 ಸಾಲ, ಒಟ್ಟು 25,000 ರೂಪಾಯಿಗಳ ಸಾಲ ಸಿಗುತ್ತದೆ.
ಒಂದು ಸಂಘಕ್ಕೆ 2.50 ಲಕ್ಷ ರೂಪಾಯಿ ಸಾಲ ಸಿಗಲಿದ್ದು, 4% ಬಡ್ಡಿದರದಲ್ಲಿ ಈ ಸಾಲ ಸೌಲಭ್ಯ ಸಿಗುತ್ತದೆ. 30 ಕಂತುಗಳಲ್ಲಿ ಮಹಿಳೆಯರು ಈ ಸಾಲವನ್ನು ತೀರಿಸಬೇಕಾಗುತ್ತದೆ. ಪ್ರೇರಣಾ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಹೀಗಿವೆ..
ಪಾಸ್ ಪೋರ್ಟ್ ಸೈಜ್ ಫೋಟೋ
ಕ್ಯಾಸ್ಟ್ ಸರ್ಟಿಫಿಕೇಟ್
ಇನ್ಕಮ್ ಸರ್ಟಿಫಿಕೇಟ್
ಆಧಾರ್ ಕಾರ್ಡ್ ಕಾಪಿ
ಬ್ಯಾಂಕ್ ಪಾಸ್ ಬುಕ್ ಡೀಟೇಲ್ಸ್
ಸ್ವಸಹಾಯ ಸಂಘಕ್ಕೆ ರಿಜಿಸ್ಟರ್ ಮಾಡಿಸಿರುವ ಪತ್ರ.
ಈ ಯೋಜನೆಯ ಮೂಲಕ ಸಾಲ ಪಡೆಯಲು ಇಚ್ಛಿಸುವ ಮಹಿಳೆಯರು, ಸೇವಾ ಸಿಂಧು ಪೋರ್ಟಲ್ ನಲ್ಲಿ ಅಗತ್ಯ ದಾಖಲೆಗಳ ಜೊತೆಗೆ ಅರ್ಜಿ ಸಲ್ಲಿಸಬಹುದು. ಈ ತಿಂಗಳ ನವೆಂಬರ್ 29ರ ಒಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಕೇಂದ್ರಗಳಲ್ಲಿ ಅಭ್ಯರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕಕ್ಕೆ ಇನ್ನು ಕೆಲವು ದಿನಗಳು ಮಾತ್ರ ಬಾಕಿ ಉಳಿದಿದ್ದು, ಅಷ್ಟರ ಒಳಗೆ ಅರ್ಜಿ ಸಲ್ಲಿಸಿ.