Ration card rejected list: ನಮ್ಮ ರಾಜ್ಯದಲ್ಲಿ ಈಗ ರೇಷನ್ ಕಾರ್ಡ್ ಗೆ (Ration card) ಭಾರಿ ಬೇಡಿಕೆ ಇದೆ. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ರೇಷನ್ ಕಾರ್ಡ್ ಬಹಳ ಮುಖ್ಯವಾಗಿ ಬೇಕು. ಆದರೆ ರೇಷನ್ ಕಾರ್ಡ್ ವಿಚಾರದಲ್ಲಿ ಸರ್ಕಾರಕ್ಕೆ ಜನರಿಂದ ಮೋಸವಾಗುತ್ತಿದೆ. ಇದನ್ನು ಗಮನಿಸಿರುವ ಸರ್ಕಾರ ನಕಲಿ ರೇಶನ್ ಕಾರ್ಡ್ ಗಳನ್ನು ರದ್ದು ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ. ಈಗಾಗಲೇ ಸತ್ತು ಹೋಗಿರುವವರ ಹೆಸರುಗಳನ್ನು ರೇಷನ್ ಕಾರ್ಡ್ ಲಿಸ್ಟ್ ಇಂದ ತೆಗೆದು ಹಾಕಲಾಗುತ್ತಿದೆ.

ಹಾಗೆಯೇ 6 ತಿಂಗಳುಗಳಿಂದ ರೇಷನ್ ಕಾರ್ಡ್ ಬಳಸಿ ಪಡಿತರ ತೆಗದುಕೊಳ್ಳದೆ ಇರುವವರ ರೇಷನ್ ಕಾರ್ಡ್ ಗಳನ್ನು ಕೂಡ ರದ್ದು ಮಾಡುವುದಕ್ಕೆ ಮುಂದಾಗಿದೆ ಸರ್ಕಾರ, 3 ಎಕರೆಗಿಂತ ಜಾಸ್ತಿ ಭೂಮಿ ಹೊಂದಿರುವವರ ಬಳಿ ಕೂಡ ಬಿಪಿಎಲ್ ರೇಶನ್ ಕಾರ್ಡ್ ಇರಲು ಸಾದ್ಯವಿಲ್ಲ, ಅಂಥವರ ಕಾರ್ಡ್ ಅನ್ನು ಕೂಡ ರದ್ದು ಮಾಡಲಾಗುತ್ತಿದೆ. ಹಾಗೆಯೇ ಐಷಾರಾಮಿ ವೈಟ್ ಬೋರ್ಡ್ ಕಾರ್ ಇರುವವರ ಬಳಿ ಬಿಪಿಎಲ್ ರೇಷನ್ ಕಾರ್ಡ್ ಇದ್ದರೆ ಅದನ್ನು ರದ್ದು ಮಾಡಲಾಗುತ್ತಿದೆ.

ವಾರ್ಷಿಕ ಆದಾಯ ಜಾಸ್ತಿ ಇರುವವರ ರೇಶನ್ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತದೆ. ಇಷ್ಟು ದಿವಸ ಈ ಎಲ್ಲಾ ಮುಖ್ಯವಿಚಾರಗಳ ಬಗ್ಗೆ ಗಮನ ಹರಿಸಿರುವ ಸರ್ಕಾರವು, 4.6 ಲಕ್ಷ ನಕಲಿ ರೇಷನ್ ಕಾರ್ಡ್ ಗಳಿವೆ ಎಂದು ಎಂದು ಪತ್ತೆ ಹಚ್ಚಿ ಅವರಿಗೆಲ್ಲಾ ದಂಡ ವಿಧಿಸಿದೆ. ಹಾಗೆಯೇ ಹೊಸದಾಗಿ ರೇಶನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿರುವವರ ಅಪ್ಲಿಕೇಶನ್ ಪರಿಶೀಲಿಸಿ, ಶೀಘ್ರದಲ್ಲೇ ಅವರಿಗೆ ರೇಶನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ರದ್ದುಗೊಳಿಸಿರು ರೇಷನ್ ಕಾರ್ಡ್ ಗಳಿಗೆ ಸರ್ಕಾರದ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ ಸೌಲಭ್ಯ ಸಿಗುವುದಿಲ್ಲ. ಹಾಗಾಗಿ ಆ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡುವುದು ಬಹಳ ಮುಖ್ಯವಾಗುತ್ತದೆ.

ನೀವು ಕೂಡ ಸರ್ಕಾರದ ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ಯಾ ಎಂದು ಚೆಕ್ ಮಾಡಿಕೊಳ್ಳುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ..
ಮೊದಲಿಗೆ ಸರ್ಕಾರದ ಈ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ https://ahara.kar.nic.in/Home/EServices
ಈಗ 3 ಲೈನ್ ಗಳ ಮೇಲೆ ಕ್ಲಿಕ್ ಮಾಡಿ, ಅದರಲ್ಲಿ ಇರೇಷನ್ ಕಾರ್ಡ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ, ಇದರಲ್ಲಿ ರದ್ದು ಮಾಡಲಾಗಿರುವ/ತಡೆ ಹಿಡಿಯಲಾಗಿರುವ ರೇಷನ್ ಕಾರ್ಡ್ ಲಿಸ್ಟ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ

ಈಗ ಒಂದು ಲಿಸ್ಟ್ ಬರುತ್ತದೆ, ಇದರಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯಿತಿ ಮತ್ತು ಹಳ್ಳಿ..ಇದಿಷ್ಟನ್ನು ಆಯ್ಕೆ ಮಾಡಿ. ಈಗ ಕ್ಯಾನ್ಸಲ್ ಆಗಿರುವ ರೇಷನ್ ಕಾರ್ಡ್ ಲಿಸ್ಟ್ ನೊಡುತ್ತೀರಿ, ಇದರಲ್ಲಿ ಕ್ಯಾನ್ಸಲ್ ಆಗಿರುವುದಕ್ಕೆ ಕಾರಣ ಕೂಡ ನೀಡಿರುತ್ತಾರೆ. ಈ ರೀತಿಯಲ್ಲಿ ಮನೆಯಲ್ಲೇ ರೇಷನ್ ಕಾರ್ಡ್ ಬಗ್ಗೆ ಮಾಹಿತಿ ತಿಳಿದು, ಏನು ತಪ್ಪಾಗಿದೆಯೋ ಅದನ್ನು ಸರಿಪಡಿಸಿಕೊಳ್ಳಬಹುದು

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!