property New Rules: ನಮಗೆಲ್ಲ ಆದಾಯ ಜಾಸ್ತಿಯಾದರೆ, ಹೆಚ್ಚು ಹಣ ಸಿಕ್ಕರೆ ಭವಿಷ್ಯಕ್ಕಾಗಿ ಹೂಡಿಕೆ ಮಾಡುತ್ತೇವೆ. ಕೆಲವರು ಬ್ಯಾಂಕ್ ಗಳಲ್ಲಿ ಅಥವಾ ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಇನ್ನು ಕೆಲವರು ಭೂಮಿ ಖರೀದಿ ಮೇಲೆ ಹೂಡಿಕೆ ಮಾಡುತ್ತಾರೆ. ಭೂಮಿ ಖರೀದಿ ಇಂದ ಹೆಚ್ಚು ಅನುಕೂಲ ಎಂದರೆ ತಪ್ಪಲ್ಲ. ಭೂಮಿ ಖರೀದಿ ಮಾಡಿದರೆ ಕೆಲ ವರ್ಷಗಳಲ್ಲಿ ಅದರ ಬೆಲೆ ದುಪ್ಪಟ್ಟು ಆಗುತ್ತದೆ. ಇದು ಹಲವರಿಗೆ ಗೊತ್ತಿರುವ ವಿಚಾರ.
ನೀವು ಯಾವ ಜಾಗದಲ್ಲಿ ಭೂಮಿ ಖರೀದಿ ಮಾಡುತ್ತೀರಾ ಎನ್ನುವುದರ ಮೇಲೆ ಇದು ಆಧಾರವಾಗುತ್ತದೆ. ಸಾಮಾನ್ಯವಾಗಿ ಇಂದು ಭೂಮಿ ಖರೀದಿ ಮಾಡಿದರೆ, ಜಾಗದ ಮೇಲಿರುವ ಬೇಡಿಕೆಯ ಮೇಲೆ, ಭೂಮಿಯ ಬೆಲೆ ಕೆಲವೇ ವರ್ಷಗಳಲ್ಲಿ ದುಪ್ಪಟ್ಟು ಅಥವಾ ಮೂರರಷ್ಟು ಜಾಸ್ತಿಯಾಗಬಹುದು. ಈ ಕಾರಣಕ್ಕೆ ಹೆಚ್ಚಿನ ಜನರು ಭೂಮಿ ಖರೀದಿ ಮಾಡಲು ಬಯಸುತ್ತಾರೆ.
ಆದರೆ ನಿಮ್ಮ ಬಳಿ ಹಣ ಇದ್ದ ಮಾತ್ರಕ್ಕೆ ಮನಸ್ಸಿಗೆ ಬಂದ ಹಾಗೆ ಭೂಮಿ ಖರೀದಿ ಮಾಡಲು ಸಾಧ್ಯವಿಲ್ಲ. ಭೂಮಿ ಖರೀದಿಗೆ ಇಂತಿಷ್ಟು ಎಂದು ಮಿತಿ ಇರುತ್ತದೆ. ಅದರಲ್ಲೂ ಕೃಷಿ ಭೂಮಿ ವಿಚಾರದಲ್ಲಿ ಸರ್ಕಾರ ಬಹಳ ಸ್ಟ್ರಿಕ್ಟ್ ಆಗಿ ಒಬ್ಬ ವ್ಯಕ್ತಿ ಇಷ್ಟೇ ಭೂಮಿ ಖರೀದಿ ಮಾಡಬೇಕು ಎಂದು ಲಿಮಿಟ್ ಇಟ್ಟಿದೆ. ಕೃಷಿ ಬಿಟ್ಟು ಬೇರೆ ನೆಲ ಖರೀದಿ ಮಾಡುವವರಿಗೆ ಮಿತಿಯನ್ನು ನಿಗದಿ ಮಾಡಿಲ್ಲ. ಈ ಮಿತಿ ನಮ್ಮ ದೇಶದಲ್ಲಿದ್ದು, ಬೇರೆ ಬೇರೆ ರಾಜ್ಯದಲ್ಲಿ ಬೇರೆ ಬೇರೆ ರೀತಿ ನಿಗದಿ ಆಗಿರುತ್ತದೆ..
ಅದೇ ರೀತಿ ನಮ್ಮ ರಾಜ್ಯದಲ್ಲಿ ಕೂಡ ಕೃಷಿ ಭೂಮಿ ಖರೀದಿಗೆ ಲಿಮಿಟ್ ಹಾಕಲಾಗಿದೆ, ಅದು ಎಷ್ಟು ಎಂದರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಒಬ್ಬ ವ್ಯಕ್ತಿ 54 ಎಕರೆ ಭೂಮಿಯನ್ನು ಖರೀದಿ ಮಾಡಬಹುದು. ಇಲ್ಲಿ ಮತ್ತೊಂದು ವಿಚಾರ ಏನು ಎಂದರೆ, ಕೃಷಿ ಭೂಮಿಯನ್ನು ನಮ್ಮ ದೇಶದ ನಿವಾಸಿಗಳು ಮಾತ್ರ ಖರೀದಿ ಮಾಡಲು ಸಾಧ್ಯ. NRI ಗಳು ನಮ್ಮ ದೇಶದಲ್ಲಿ ಕೃಷಿ ಭೂಮಿ ಖರೀದಿಸಲು ಸಾಧ್ಯವಿಲ್ಲ.
ಇಲ್ಲಿರುವ ಜನರು ಅವರಿಗೆ ಗಿಫ್ಟ್ ಆಗಿ ಭೂಮಿಯನ್ನು ನೀಡಿದರೆ, ಅದರಲ್ಲಿ ಅವರು ವ್ಯವಸಾಯ ಮಾಡಬಹುದು. ಆದರೆ NRI ಗಳು ಸ್ವಂತವಾಗಿ ವ್ಯವಸಾಯ ಮಾಡಲು ಸಾಧ್ಯವಿಲ್ಲ. ಇದು ನಮ್ಮ ದೇಶದಲ್ಲಿ ಕೃಷಿ ಭೂಮಿಗೆ ಸಂಬಂಧಿಸಿದ ನಿಯಮ ಆಗಿದ್ದು, ಎಲ್ಲರೂ ಇದನ್ನು ಅರ್ಥ ಮಾಡಿಕೊಂಡು, ಇದಕ್ಕೆ ತಕ್ಕ ಹಾಗೆ ಆಸ್ತಿ ಖರೀದಿ ಮಾಡಬೇಕು.