PM-Kisan samman nidhi: ಪ್ರಧಾನಮಂತ್ರಿ ನರೇಂದ್ರಮೋದಿ ಅವರು ನಮ್ಮ ದೇಶದ ಜನರು ಮತ್ತು ರೈತರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ನಮಗೆಲ್ಲ ಗೊತ್ತಿರುವ ಹಾಗೆ ನಮ್ಮ ದೇಶದ ಬೆನ್ನೆಲುಬು ರೈತ, ರೈತನ ಕೆಲಸ ಚೆನ್ನಾಗಿ ನಡೆದು, ಒಳ್ಳೆಯ ಬೆಳೆ ಬೆಳೆದರೆ ಇಡೀ ದೇಶಕ್ಕೆ ಒಳ್ಳೆಯದು. ರೈತ ನಮ್ಮೆ ದೇಶದ ಬಹುಮುಖ್ಯ ಅಂಗ, ಆದರೆ ಎಲ್ಲಾ ರೈತರಿಗೂ ಕೂಡ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ. ರೈತರು ಕಷ್ಟ ಪಡುವುದೇ ಹೆಚ್ಚು.
ಹಾಗಾಗಿ ರೈತರಿಗೆ ಅನುಕೂಲ ಆಗಲಿ, ಕೃಷಿಯಲ್ಲಿ ಉತ್ತಮ ಬೆಳೆ ಸಿಗಲಿ ಎನ್ನುವ ಕಾರಣಕ್ಕೆ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಯ ಮೂಲಕ ಎಲ್ಲಾ ರೈತರಿಗೆ ಕೃಷಿ ಚಟುವಟಿಕೆಗೆ ಸಹಾಯ ಆಗಲಿ ಎಂದು ಆರ್ಥಿಕವಾಗಿ ಸಹಾಯ ಮಾಡಲಾಗುತ್ತದೆ. ಇದು ನರೇಂದ್ರಮೋದಿ ಅವರು ರೈತರಿಗೆ ವಿಶೇಷವಾಗಿ ಜಾರಿಗೆ ತಂದಿರುವ ಯೋಜನೆ ಆಗಿದೆ.
PM-Kisan samman nidhi 2023
ಈ ಯೋಜನೆಯ ವಿಶೇಷತೆ ಏನು ಎಂದರೆ, ವರ್ಷಕ್ಕೆ 3 ಬಾರಿ 3 ಕಂತುಗಳಲ್ಲಿ ಹಣ ಬಿಡುಗಡೆ ಮಾಡಿ ಕೊಡಲಿದೆ. ಏಪ್ರಿಲ್ ಇಂದ ಜುಲೈ, ಆಗಸ್ಟ್ ಇಂದ ನವೆಂಬರ್, ಡಿಸೆಂಬರ್ ಇಂದ ಮಾರ್ಚ್. ಈ ಮೂರು ಕಂತುಗಳಲ್ಲಿ ರೈತರಿಗೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ಬರಲಿದೆ. ಈ ಹಣವು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಕ್ರೆಡಿಟ್ ಆಗಲಿದೆ. ಒಟ್ಟು 6000 ರೂಪಾಯಿ ರೈತರ ಅಕೌಂಟ್ ಗೆ ಬರಲಿದೆ.
ಒಂದು ಕಂತಿಗೆ 2000 ರೂಪಾಯಿ ಹಣ ರೈತರ ಖಾತೆಗೆ ಬರುತ್ತದೆ. 14ನೇ ಕಂತಿನ ಹಣ ರೈತರ ಖಾತೆಗೆ ಬಂದಿದ್ದು, 15ನೇ ಕಂತಿನ ಹಣ ಯಾವಾಗ ಬರುತ್ತದೆ ಎಂದು ರೈತರು ಕಾಯುತ್ತಿದ್ದರು. ಇದೀಗ ಅದಕ್ಕೆ ಉತ್ತರ ಸಿಕ್ಕಿದ್ದು, ನವೆಂಬರ್ 15ರಂದು ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 15ನೇ ಕಂತಿನ ಹಣ ಬಿಡುಗಡೆ ಆಗಿದೆ. ರೈತರು ಕೂಡ ತಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿದ್ಯಾ ಎಂದು ಚೆಕ್ ಮಾಡಿಕೊಳ್ಳಬಹುದು.