Bagur hukum Application: ನಮ್ಮಲ್ಲಿ ಹಲವಾರು ರೈತರು ತಮ್ಮದೇ ಸ್ವಂತ ಭೂಮಿ ಇಲ್ಲದೆ, ಸರ್ಕಾರದ ಭೂಮಿಯಲ್ಲಿ ವ್ಯವಸಾಯ ಮಾಡುತ್ತಾ ಇರುತ್ತಾರೆ. ಬಹಳಷ್ಟು ವರ್ಷಗಳಿಂದ ಈ ರೀತಿ ಸರ್ಕಾರದ ನೆಲದಲ್ಲಿ ವ್ಯವಸಾಯ ಮಾಡುತ್ತಿರುವವರಿಗೆ ಬಗರ್ ಹುಕುಂ ಅಥವಾ ಅಕ್ರಮ ಸಕ್ರಮ ಕಾನೂನು ಕ್ರಮದ ಮೂಲಕ ಅರ್ಜಿ ಸಲ್ಲಿಸಲು ಸರ್ಕಾರ ಸೂಚನೆ ನೀಡಿತ್ತು. ರೈತರು ಕೂಡ ಬಗರ್ ಹುಕುಂ ಮೂಲಕ ತಮ್ಮ ಹೆಸರಿಗೆ ಭೂಮಿವನ್ಮು ಉಳಿಸಿಕೊಳ್ಳಬೇಕು ಎಂದು ಕಾಯುತ್ತಿದ್ದರು.
ಇದೀಗ ಸರ್ಕಾರವು ಈ ವಿಷಯಕ್ಕೆ ಸಂಬಂಧಿಸಿದ ಹಾಗೆ ರೈತರು ಅರ್ಜಿ ಸಲ್ಲಿಸಬಹುದು ಎಂದು ಹೇಳಿತ್ತು. ಆದರೆ ಹಲವಾರು ಜನರು ಸರ್ಕಾರದ ನಿಯಮವನ್ನು ದುರುಪಯೋಗ ಪಡಿಸಿಕೊಂಡು, ಹೆಚ್ಚಿನ ಭೂಮಿಯನ್ನು ವಶಪಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಒಂದೇ ಹಳ್ಳಿಯಲ್ಲಿ ನಾಲ್ಕೈದು ಕಡೆ ಸರ್ಕಾರಿ ಭೂಮಿಯನ್ನು ಬಗರ್ ಹುಕುಂ ಮೂಲಕ ತಮ್ಮದಾಗಿಸಿಕೊಳ್ಳಲು ಅರ್ಜಿ ಹಾಕಿದ್ದಾರೆ. ಇನ್ನು ಕೆಲವರು ಬೇರೆ ಬೇರೆ ತಾಲ್ಲೂಕುಗಳಲ್ಲಿ ಭೂಮಿಯನ್ನು ತಮ್ಮದಾಗಿಸಿಕೊಳ್ಳಲು ಅರ್ಜಿ ಹಾಕಿದ್ದಾರೆ.
ಹಾಗೆಯೇ ಒಂದು ಗ್ರಾಮದಲ್ಲಿ 100 ಜಾನುವಾರುಗಳಿದ್ದರೆ 30 ಎಕರೆ ಗೋಮಾಳ ಇರಬೇಕು ಎನ್ನುವ ನಿಯಮ ಸಹ ಇದೆ. ಆದರೆ ಈ ನಿಯಮಗಳು ಸರಿಯಾಗಿ ಪಾಲನೆ ಆಗುತ್ತಿಲ್ಲ, ಇದು ಸರ್ಕಾರದ ಗಮನಕ್ಕೆ ಬಂದಿದ್ದು, ಯಾರು ಕೂಡ ಅಕ್ರಮ ಸಕ್ರಮದ ವಿಷಯದಲ್ಲಿ ಸರ್ಕಾರಕ್ಕೆ ಮೋಸ ಮಾಡಬಾರದು ಎಂದು ಸರ್ಕಾರವು ಕೆಲವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ.
ರೈತರು ತಾವೇ ಹೋಗಿ ಅರ್ಜಿ ಸಲ್ಲಿಸುವಾಗ ಈ ಥರದ ಘಟನೆಗಳು ನಡೆಯುತ್ತಿದ್ದವು, ಹಾಗಾಗಿ ಇನ್ನುಮುಂದೆ ಟೆಕ್ನಾಲಜಿ ಬಳಸಿ ಅರ್ಜಿ ಸಲ್ಲಿಸುವ ತಂತ್ರಜ್ಞಾನವನ್ನು ತರಲಾಗುತ್ತಿದೆ. ಹಾಗೆಯೇ ಕೆಲವು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಅವುಗಳು ಏನೇನು ಎಂದು ನೋಡುವುದಾದರೆ..
15 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಸಮಯದಿಂದ ಸರ್ಕಾರಿ ನೆಲದಲ್ಲಿ ವ್ಯವಸಾಯ ಮಾಡುತ್ತಿರುವ ರೈತರು ಮಾತ್ರ ಬಗರ್ ಹುಕುಂ ಗೆ ಅರ್ಹರಾಗುತ್ತಾರೆ. ಇದಕ್ಕಾಗಿ ಬಗರ್ ಹುಕುಂ ಹೆಸರಿನಲ್ಲಿ ಹೊಸ ತಂತ್ರಾಂಶವನ್ನು ಸಿದ್ಧಪಡಿಸಲಾಗುತ್ತಿದೆ. ಪ್ರತಿ ತಾಲ್ಲೂಕಿನಲ್ಲಿ 4 ಕಡೆ ಇದನ್ನು ಚೆಕ್ ಮಾಡಲಾಗುತ್ತದೆ. ಯಶಸ್ಸು ಕಂಡರೆ ಎಲ್ಲಾ ತಾಲ್ಲೂಕುಗಳಿಗೂ ವಿಸ್ತರಣೆ ಮಾಡಲಾಗುತ್ತದೆ. ಕೃಷಿ ಭೂಮಿಯ ಸ್ಯಾಟಿಲೈಟ್ ಫೋಟೋಸ್ ಗಳನ್ನು ಆಪ್ ಗೆ ಹಾಕಿ, ರೈತ ನಿಜಕ್ಕೂ ಭೂಮಿಯನ್ನು ಕೃಷಿಗೆ ಬಳಸಿದ್ದಾನಾ ಎನ್ನುವುದನ್ನು ಚೆಕ್ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಿರುವ ರೈತ 15 ವರ್ಷಗಳಿಂದ ಕೃಷಿಗೆ ಭೂಮಿಯನ್ನು ಬಳಸಿದ್ದಾನಾ ಎಂದು ಚೆಕ್ ಮಾಡಲು, ESRO ಮತ್ತು ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಕ ಕೇಂದ್ರವು 15 ವರ್ಷಗಳಿಂದ ಉಪಗ್ರಹದಿಂದ ಕೃಷಿ ಭೂಮಿಯ ಫೋಟೋವನ್ನು ಪತ್ತೆ ಮಾಡುತ್ತದೆ. ಎಷ್ಟು ವರ್ಷಗಳಿಂದ ಕೃಷಿ ಕೆಲಸ ನಡೆದಿದೆ ಎನ್ನುವುದು ಸರ್ವೇ ನಂಬರ್ ಮೂಲಕ ಗೊತ್ತಾಗುತ್ತದೆ. ಹಾಗೆಯೇ ಉಪಗ್ರಹದ ಫೋಟೋ ಇಂದ ಕೃಷಿ ಚಟುವಟಿಕೆ ಬಗ್ಗೆ ಗೊತ್ತಾಗದೇ ಹೋದರೆ ಅರ್ಜಿಯನ್ನು ರಿಜೆಕ್ಟ್ ಮಾಡಲಾಗುತ್ತದೆ.
ಬಗರ್ ಹುಕುಂ ನಲ್ಲಿ ಮೋಸ ಅಕ್ರಮ ನಡೆಯುತ್ತಿರುವುದು ಫಾರ್ಮ್ 57 ವಿಚಾರದಲ್ಲಿ. ಹಲವು ಕಡೆಗಳಲ್ಲಿ ರೈತರು ಬಗರ್ ಹುಕುಂ ಗಾಗಿ ಅರ್ಜಿ ಸಲ್ಲಿಕ ಮಾಡುತ್ತಿದ್ದಾರೆ. ಹಾಗಾಗಿ ಇದನ್ನು ಆಪ್ ಮೂಲಕ ಪತ್ತೆ ಹಚ್ಚಿ, ಅರ್ಹತೆ ಇರುವ ರೈತರಿಗೆ ಮಾತ್ರ ಭೂಮಿ ಸಿಗುವ ಹಾಗೆ ಮಾಡುವ ಕೆಲಸ ಶೀಘ್ರದಲ್ಲೇ ಜಾರಿಗೆ ಬರಲಿದೆ. ಆಪ್ ಗೆ ಸಂಬಂಧಿಸಿದ ಹಾಗೆ ಸಮಿತಿ ರಚನೆ ಆಗಲಿದೆ, 50 ಸಮಿತಿಗಳನ್ನು ರಚನೆ ಮಾಡುವ ನಿರ್ಧಾರ ಮಾಡಿದೆ ಸರ್ಕಾರ. ಈಗ ಸರ್ಕಾರದ ಬಳಿ ಇರುವ ಅರ್ಜಿಗಳನ್ನು ಶೀಘ್ರದಲ್ಲೇ 6 ತಿಂಗಳ ಒಳಗೆ ಕ್ಲಿಯರ್ ಮಾಡಬೇಕು ಎಂದು ಆದೇಶ ನೀಡಲಾಗಿದೆ