Ration Card Updates: ಕಾಂಗ್ರೆಸ್ ಸರ್ಕಾರ ಬಂದ ನಂತರ ಬಡವರಿಗೆ ಅನೇಕ ಯೋಜನೆಗಳು ಜಾರಿಗೆ ಬಂದಿದೆ. ರೇಷನ್ ಕಾರ್ಡ್ ಮೂಲಕ ರಾಜ್ಯದ ಬಹುತೇಕ ಕುಟುಂಬಗಳು ರೇಷನ್ ಪಡೆಯುತ್ತಿದೆ. ಇದೀಗ ರೇಷನ್ ಕಾರ್ಡ್ (Ration Card) ಹೊಂದಿದವರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ. ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ಪ್ರತಿ ತಿಂಗಳು ರೇಷನ್ ಅಂಗಡಿಯಿಂದ ಆಹಾರ ಧಾನ್ಯ ತೆಗೆದುಕೊಳ್ಳುತ್ತಿರುವ ರಾಜ್ಯದ ಬಿಪಿಎಲ್, ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರುವ ರಾಜ್ಯದ ಎಲ್ಲ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ಒಂದು ಬಿಗ್ ಶಾಕ್ ಇದೆ ಅದೇನೆಂದರೆ ಪಡಿತರ ಚೀಟಿ ಹೊಂದಿರುವ ಪ್ರತಿಯೊಬ್ಬರು ಇದೆ ಡಿಸೆಂಬರ್ 30 ರೊಳಗಾಗಿ ರಾಜ್ಯದಲ್ಲಿ ದಿನ ದಿನೆ ಹೆಚ್ಚುತ್ತಿರುವ ಅನಧಿಕೃತ ರೇಷನ್ ಕಾರ್ಡ್ ಗಳನ್ನು ರದ್ದುಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ
ಈಗಾಗಲೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿರುವ ರಾಜ್ಯ ಸರ್ಕಾರ ಮತ್ತೊಂದು ಹೊಸ ರೂಲ್ಸ್ ಜಾರಿಗೆ ತರಲಿದೆ ಇದು ಪಡಿತರ ಚೀಟಿದಾರರಿಗೆ ಶಾಕ್ ಕೊಡುತ್ತದೆ. ಈಗಾಗಲೆ ಬಿಪಿಎಲ್, ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರುವ ಗ್ರಾಹಕರು ಪ್ರತಿ ತಿಂಗಳ ಆಹಾರಧಾನ್ಯ ಪಡೆದುಕೊಳ್ಳುತ್ತಿದ್ದಾರೆ ನಿಮ್ಮ ರೇಷನ್ ಕಾರ್ಡ್ ರದ್ದಾಗದಂತೆ ನೋಡಿಕೊಳ್ಳಿ.
ಡಿಸೆಂಬರ್ 30ರೊಳಗಡೆ ಇಕೆವೈಸಿ ಮಾಡಿಲ್ಲವಾದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತದೆ. ಸರ್ಕಾರದ ಯಾವುದೆ ಒಂದು ಯೋಜನೆಯನ್ನು ಪಡೆಯಲು ರೇಷನ್ ಕಾರ್ಡ್ ಅಗತ್ಯವಾಗಿ ಬೇಕಾಗಿರುತ್ತದೆ. ರೇಷನ್ ಕಾರ್ಡ್ ಆಹಾರ ಧಾನ್ಯ ಪಡೆಯಲು ಮಾತ್ರವಲ್ಲದೆ ಗುರುತಿನ ಚೀಟಿ ಪಡೆಯಲು ಕೂಡ ಸಹಕಾರಿಯಾಗಿರುತ್ತದೆ. ಸರ್ಕಾರ ಈಗಾಗಲೆ ಎಲ್ಲಾ ಯೋಜನೆಗಳಿಗೆ ಪಡಿತರ ಚೀಟಿ ಕಡ್ಡಾಯ ಮಾಡಿದೆ ಸರ್ಕಾರ ಪಡಿತರ ಚೀಟಿಗೆ ಇಕೆವೈಸಿ ಮಾಡಿಸುವುದನ್ನು ಕಡ್ಡಾಯಗೊಳಿಸಿದೆ.
ಅಸಲಿ ರೇಷನ್ ಕಾರ್ಡ್ ಯಾವುದು ಹಾಗೂ ನಕಲಿ ರೇಷನ್ ಕಾರ್ಡ್ ಯಾವುದು ಎಂದು ತಿಳಿಯಲು ಇಕೆವೈಸಿ ಅನ್ನು ಸರ್ಕಾರ ಕಡ್ಡಾಯಗೊಳಿಸಿದೆ ಇದರಿಂದ ಅನಧೀಕೃತ ರೇಷನ್ ಕಾರ್ಡ್ ಗಳ ಬಗ್ಗೆ ಮಾಹಿತಿ ಸಿಗಲಿದೆ. ರೇಷನ್ ಕಾರ್ಡ ಗೆ ಇಕೆವೈಸಿ ಮಾಡಿಸಲು ಡಿಸೆಂಬರ್ 30 ರವರೆಗೆ ಅವಕಾಶ ಕೊಟ್ಟಿದೆ ಡಿಸೆಂಬರ್ 30ರ ಒಳಗೆ ಇಕೆವೈಸಿ ಮಾಡಿಸದೆ ಇದ್ದರೆ ರೇಷನ್ ಕಾರ್ಡ್ ರದ್ದಾಗುವ ಸಾಧ್ಯತೆ ಇದೆ.
ರೇಷನ್ ಕಾರ್ಡ್ ಗೆ ಇಕೆವೈಸಿಯನ್ನು ಹತ್ತಿರದ ರೇಷನ್ ಅಂಗಡಿ ಅಥವಾ ಕರ್ನಾಟಕದಾದ್ಯಂತ ಇರುವ ಗ್ರಾಮ ಒನ್ ಗೆ ಭೇಟಿ ನೀಡುವ ಮೂಲಕ ಸರಳವಾಗಿ ಮಾಡಿಕೊಳ್ಳಬಹುದು ಅಲ್ಲದೆ ಬೆಂಗಳೂರು ಒನ್ ಸೇರಿದಂತೆ ಸರ್ಕಾರದ ಇತರೆ ಕಡೆಗಳಲ್ಲಿ ರೇಷನ್ ಕಾರ್ಡ್ ಗೆ ಇಕೆವೈಸಿಯನ್ನು ಮಾಡಿಸಬಹುದಾಗಿದೆ. ರೇಷನ್ ಕಾರ್ಡ್ ಗೆ ಇಕೆವೈಸಿ ಮಾಡಿಸಬೇಕಾದರೆ ಕುಟುಂಬ ಸಮೇತ ಭೇಟಿ ನೀಡಬೇಕಾಗುತ್ತದೆ. ಒಂದು ವೇಳೆ ಡಿಸೆಂಬರ್ 30ರೊಳಗಡೆ ಇಕೆವೈಸಿ ಮಾಡಿಸಿಲ್ಲವಾದರೆ ರೇಷನ್ ಕಾರ್ಡ್ ಸಂಪೂರ್ಣವಾಗಿ ರದ್ದಾಗುತ್ತದೆ. ಈ ಬಗ್ಗೆ ಕೇಂದ್ರ ಸರ್ಕಾರವು ಅಧಿಕೃತವಾಗಿ ಆದೇಶವನ್ನು ಹೊರಡಿಸಲಾಗಿದೆ,
ರಾಜ್ಯ ಸರ್ಕಾರದ ಎಲ್ಲಾ ರೇಷನ್ ಅಂಗಡಿಗಳಿಗೆ ಆದೇಶವನ್ನು ರವಾನಿಸಲಾಗಿದೆ. ಇಕೆವೈಸಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರದೊಂದಿಗೆ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು ಕುಟುಂಬದವರೊಂದಿಗೆ ಇಕೆವೈಸಿ ಮಾಡಲು ಹೋಗಬೇಕಾಗುತ್ತದೆ ಏಕೆಂದರೆ ಬೆರಳಿನ ಸ್ಕ್ಯಾನ್ ಮಾಡಬೇಕಾಗುತ್ತದೆ. ಹೆಚ್ಚಿನ ಮಾಹಿತಿಗೆ ವಲಯದ ರೇಷನ್ ಅಂಗಡಿಯ ಮಾಲೀಕರಿಗೆ ಸಂಪರ್ಕಿಸಬೇಕಾಗುತ್ತದೆ ಅಥವಾ ತಾಲೂಕು ಅಥವಾ ಜಿಲ್ಲೆಯ ಆಹಾರ ಶಾಖೆಯನ್ನು ಸಂಪರ್ಕಿಸಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ರೇಷನ್ ಕಾರ್ಡ್ ರದ್ದಾಗುವುದನ್ನು ತಡೆಯಿರಿ.