Gruhalakshmi Scheme: ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಕ್ಕು ಮೂರು ತಿಂಗಳುಗಳ ಸಮಯ ಕಳೆದುಹೋಗಿದೆ. ಈಗಾಗಲೇ 1.20 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇನ್ನೂ ಲಕ್ಷಾಂತರ ಮಹಿಳೆಯರಿಗೆ ಗೃಹಲಕ್ಷ್ಮಿ (Gruhalakshmi) ಯೋಜನೆಯ ಹಣ ಸಿಕ್ಕಿಲ್ಲ. ಅದಕ್ಕೆ ಕಾರಣ ಎಂದು ಸರ್ಕಾರಕ್ಕೆ ಕೇಳಿದರೆ, ಆಧಾರ್ ಕಾರ್ಡ್ ಸೀಡಿಂಗ್ ಆಗಿಲ್ಲ, ekyc ಆಗಿಲ್ಲ ಎಂದು ಕಾರಣ ನೀಡುತ್ತಾರೆ.
ಒಂದು ವೇಳೆ ನಿಮಗೂ ಇದೇ ರೀತಿ ಕಾರಣದಿಂದ ಹಣ ಬಂದಿಲ್ಲ ಎಂದರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡಿ, ಸ್ಟೇಟಸ್ ಚೆಕ್ ಮಾಡಿ ಹಣ ಬರುವ ಹಾಗೆ ಮಾಡಿಕೊಳ್ಳಬಹುದು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ. ಹಾಗೆಯೇ ನಿಮಗೆ ಹತ್ತಿರ ಇರುವ ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡಿ, ನಿಮ್ಮ ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಇದಿಷ್ಟನ್ನು ತೆಗೆದುಕೊಂಡು ಹೋಗಿ.
https://ahara.kar.nic.in/Home/EServices ಈ ಲಿಂಕ್ ಗೆ ಭೇಟಿ ನೀಡಿ, ಅದರಲ್ಲಿ E Ration Card ಆಯ್ಕೆಯನ್ನು ಸೆಲೆಕ್ಟ್ ಮಾಡಿ, ನಂತರ Show Village List ಆಯ್ಕೆಯನ್ನು ಸೆಲೆಕ್ಟ್ ಮಾಡಿ, ಇಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು ಮತ್ತು ಹಳ್ಳಿಯ ಹೆಸರನ್ನು ಸೆಲೆಕ್ಟ್ ಮಾಡಿದರೆ ಫಲಾನುಭವಿಗಳ ಲಿಸ್ಟ್ ಬರುತ್ತದೆ. ಆ ಲಿಸ್ಟ್ ನಲ್ಲಿರುವ ಎಲ್ಲಾ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆಯಲು ಅರ್ಹತೆ ಪಡೆಯುತ್ತಾರೆ. ಈ ಎಲ್ಲಾ ಮಹಿಳೆಯರಿಗೆ ಖಂಡಿತವಾಗಿ ಹಣ ಸಿಗಲಿದೆ.
ಗೃಹಲಕ್ಷ್ಮಿ ಯೋಜನೆಯ ಹಣ ಸಿಗದೆ ಚಿಂತೆಗೆ ಒಳಗಾಗಿದ್ದ ಎಲ್ಲಾ ಮಹಿಳೆಯರಿಗೆ ಇದು ನೆಮ್ಮದಿಯ ವಿಚಾರ ಆಗಿದ್ದು, ಒಂದು ವೇಳೆ ನೀವು ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಿದ್ದು, ನಿಮಗೆ ಹಣ ಸಿಕ್ಕಿಲ್ಲ ಎಂದರೆ ಈ ರೀತಿ ಮಾಡುವ ಮೂಲಕ ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳಬಹುದು.