DA Hike Govt Employees: ಹಬ್ಬಗಳು ಬಂತು ಎಂದರೆ ಸರ್ಕಾರವು ಸರ್ಕಾರಿ ನೌಕರರಿಗೆ ಯಾವುದಾದರೂ ಒಂದು ಕೊಡುಗೆಗಳನ್ನು ನೀಡುತ್ತದೆ. ಇನ್ನೇನು ಮುಂದಿನ ವಾರ ದೀಪಾವಳಿ ಹಬ್ಬ ಬರಲಿದ್ದು, ಈ ಹಬ್ಬಕ್ಕೆ ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ, ಡಿಎ ದರವನ್ನು ಹೆಚ್ಚಿಸುವ ನಿರ್ಧಾರ ಮಾಡಲಾಗಿದ್ದು, 46% ಹೆಚ್ಚಾಗಿದ್ದು, 4% ಡಿಎ ದರ ಹೆಚ್ಚಾಗಲಿದೆ.
ಡಿಎ ಮಾತ್ರ ಜಾಸ್ತಿ ಆಗುತ್ತಿಲ್ಲ, ಅದರ ಜೊತೆಗೆ ಇನ್ನು ಹೆಚ್ಚಿನ ಲಾಭ ಸಿಗಲಿದ್ದು, ಜುಲೈ 1ರಿಂದ ಈ ದರ ಜಾರಿಗೆ ಬಂದಿದೆ. ಎಲ್ಲರಿಗೂ ಈ ದಿನದಿಂದ ಬಾಕಿ ಸಿಗಲಿದೆ. ಸೆಂಟ್ರಲ್ ಗವರ್ನಮೆಂಟ್ ನೌಕಕರಿಗೆ ಜುಲೈ ಇಂದ ಜಾರಿಗೆ ಬಂದಿದೆ, ಹಾಗಾಗಿ ಎಲ್ಲಾ ನೌಕರರಿಗೆ ಜುಲೈ ಇಂದ ಸೆಪ್ಪ್ಟೆಂಬರ್ ವರೆಗು ಬಾಕಿ ಇರುವ ಡಿಎ ಹಣವನ್ನು ಡಿಎ ಪೇ ಬಾಂಡ್ ದರ್ಜೆಯ ವೇತನದ ಆಧಾರದ ಮೇಲೆ ನಿಗದಿ ಮಾಡಲಾಗುತ್ತದೆ.
ಈ ವೇತನ ಜಾಸ್ತಿ ಆಗಿರುವುದು ರಾಜ್ಯದ 7ನೇ ವೇತನ ಆಯೋಗದ ದರ್ಜೆಯನ್ನಿ ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರ ಗ್ರೇಡ್ ಪೇ ಮಟ್ಟ 1 ರಿಂದ 18ರವರೆಗು ಇರುತ್ತದೆ. ಗ್ರೇಡ್ ಪೇ ಇಂದ ಟಿಎ ಆಧಾರದ ಮೇಲೆ ಡಿಎ ಅನ್ನು ಕೂಡ ಲೆಕ್ಕ ಮಾಡಲಾಗಿದೆ. ಇದರ ಮೊದಲ ಸ್ಟೇಜ್ ನಲ್ಲಿ ಕನಿಷ್ಠ ಸಂಬಳ 18,000 ಗರಿಷ್ಠ ಸಂಬಳ 56,900 ಆಗಿದೆ. ಇಲ್ಲಿ ಸಂಬಳವು ಗ್ರೇಡ್ ಪೇ ಆಧಾರದ ಮೇಲೆ 2 ರಿಂದ 14 ಹಂತಗಳಲ್ಲಿ ಚೇಂಜ್ ಆಗಲಿದೆ. ಇದರ ಅರ್ಥ 15, 17, 18 ಈ ಹಂತಗಳಲ್ಲಿ ಗ್ರೇಡ್ ಪೇ ಇರುವುದಿಲ್ಲ.
ಇದರಲ್ಲಿ ಸಂಬಳವನ್ನು ನಿಗದಿ ಮಾಡಲಾಗಿರುತ್ತದೆ, ಇದರ 15ನೇ ಸ್ಟೇಜ್ ನಲ್ಲಿ ಕನಿಷ್ಠ ಸಂಬಳ 1,82,200 ಹಾಗೆಯೇ ಗರಿಷ್ಠ ಸಂಬಳ 2,24,100 ರೂಪಾಯಿ ಆಗಿದೆ. ಹಾಗೆಯೇ 17ನೇ ಸ್ಟೇಜ್ ನ ಸಂಬಳದಲ್ಲಿ ಕನಿಷ್ಠ ಸಂಬಳ 2,25,000 ರೂಪಾಯಿಗಳು, ಹಾಗೆಯೇ 18ನೇ ಸ್ಟೇಜ್ ನಲ್ಲಿ ಸಂಬಳ ವನ್ನು ನಿಗದಿ ಮಾಡಲಾಗಿದೆ. ಇದಕ್ಕೆ ಒಂದು ಉದಾಹರಣೆ ಕೊಡುವುದಾದರೆ, ಮೊದಲ ಹಂತದ ಕೆಲಸದಲ್ಲಿ ಮೂಲ ಸಂಬಳ 18ಸಾವಿರ ಇರುತ್ತದೆ.
ಇವರಿಗೆ ಡಿಎ 720 ರೂಪಾಯಿ ಜಾಸ್ತಿ ಮಾಡಲಾಗಿದ್ದು, ಮೂರು ತಿಂಗಳ ಡಿಎ ಈಗ ಬಾಕಿ ಉಳಿದಿದೆ, ಟಿಎ ಡಿಎ ಸೇರಿದ ಹಾಗೆ 2300 ರೂಪಾಯಿ ಸಿಗುತ್ತದೆ. 18 ಸಾವಿರ ರೂಪಾಯಿಯ 2,50,000 ರೂಪಾಯಿ ಸಂಬಳ ಇರುತ್ತದೆ, ಇವರಿಗೆ 10,000 ರೂಪಾಯಿ ಡಿಎ ಸಿಗಲಿದೆ. ಮೂರು ತಿಂಗಳ ಡಿಎ ಒಟ್ಟಿಗೆ 30,000 ಸಿಗಲಿದೆ. ಟಿಎ ಕೂಡ ಸೇರಿಸಿ 30,864 ರೂಪಾಯಿ ಬರಲಿದೆ. ಸಂಬಳ ಎಷ್ಟು ಇರುತ್ತದೆ ಎನ್ನುವುದರ ಮೇಲೆ ಡಿಎ ಕೂಡ ಬದಲಾಗುತ್ತದೆ.