Appu Bodyguard Chalapathi: ಅಭಿಮಾನಿಗಳ ಪಾಲಿನ ಪ್ರೀತಿಯ ಅಪ್ಪು ಪವರ್ ಸ್ಟಾರ್ ಪುನೀತ್ ರಾಜ್ ಅವರ ಬಗ್ಗೆ ಎಷ್ಟೇ ಹೇಳಿದರು ಕಡಿಮೆಯೇ. ಸದಾ ನಗುನಗುತ್ತಲೇ ಇದ್ದ ಅವರ ಆ ನಿಷ್ಕಲ್ಮಶ ನಗುವನ್ನ ಇಂದಿಗೂ ಯಾವುದೇ ಅಭಿಮಾನಿಗಳು ಮರೆತಿಲ್ಲ. ಅಪ್ಪು ಅವರು ಇಂದು ದೈಹಿಕವಾಗಿ ಪ್ರಪಂಚದಲ್ಲಿ ಇಲ್ಲದೆ ಹೋದರು ಕೂಡ ಅವರು ಹಾಕಿಕೊಟ್ಟ ಮಾರ್ಗ, ಅವರ ಒಳ್ಳೆತನ, ಅವರ ಸನ್ಮಾರ್ಗದಲ್ಲಿ ಅಭಿಮಾನಿಗಳು ನಡೆಯುತ್ತಿದ್ದಾರೆ.

ಮೊನ್ನೆಯಷ್ಟೇ ಅಪ್ಪು ಅವರ 2ನೇ ವರ್ಷದ ಪುಣ್ಯಸ್ಮರಣೆ ನಡೆದಿದೆ. ಈ ದಿನ ದೊಡ್ಮನೆ ಕುಟುಂಬ, ಅಪ್ಪು ಅವರ ಅಭಿಮಾನಿಗಳು, ಎಲ್ಲರೂ ಬಂದು ಅಪ್ಪು ಅವರಿಗೆ ಪೂಜೆ ಸಲ್ಲಿಸಿದ್ದಾರೆ. ಅಭಿಮಾನಿಗಳು ಅಪ್ಪು ಅವರ ಹೆಸರಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಈ ಎಲ್ಲದರ ಮೂಲಕ ಅಪ್ಪು ಅವರು ನಮ್ಮನ್ನು ಬಿಟ್ಟು ಹೋಗಿಲ್ಲ ಎಂದು ಅನ್ನಿಸುವ ರೀತಿ ಎಲ್ಲವೂ ಇದೆ.

ಅಪ್ಪು ಅವರ ಸಿನಿಮಾಗಳು ಅಷ್ಟೇ, ಅವರನ್ನು ನೆನಪಿಸುತ್ತಿವೆ. ಇನ್ನು ಅಪ್ಪು ಅವರ ಸಮಾಧಿ ಬಳಿ ಸದಾ ಜನರು ಇದ್ದೇ ಇರುತ್ತಾರೆ. ಪ್ರತಿದಿನ ಸಾವಿರಾರು ಜನ ಬಂದು ಅಪ್ಪು ಅವರ ದರ್ಶನ ಪಡೆದು ಹೋಗುತ್ತಿದ್ದಾರೆ. ಇದರಿಂದ ಅಕ್ಕಪಕ್ಕದಲ್ಲಿ ತಿಂಡಿಗಳನ್ನು ಮಾರುವ ಜನರ ಬದುಕಿಗೆ ಕೂಡ ಒಂದು ದಾರಿ ಸಿಕ್ಕಿದೆ. ಹೀಗೆ ಹೋದಮೇಲು ಕೂಡ ಅಪ್ಪು ಅವರು ಬಹಳಷ್ಟು ಜನರ ಬದುಕಿಗೆ ಬೆಳಕಾಗಿದ್ದಾರೆ..

ಅಪ್ಪು ಅವರು ಇದ್ದಾಗ ಅವರೊಡನೆ ಯಾವಾಗಲೂ ಇರುತ್ತಿದ್ದವವರು ಅವರ ಬಾದಿಗಾರ್ಡ್ ಚಲಪತಿ. ಅಪ್ಪು ಅವರು ಎಲ್ಲೇ ಹೋದರು ಅವರೊಡನೆ ಚಲಪತಿ ಇರುತ್ತಿದ್ದರು. ಹೆಚ್ಚಿನ ಸಮಯವನ್ನು ಅಪ್ಪು ಅವರೊಡನೆ ಕಳೆಯುತ್ತಿದ್ದರು. ಈಗ ಚಲಪತಿ ಅವರು ಯಾವ ಕೆಲಸ ಮಾಡುತ್ತಿದ್ದಾರೆ ಗೊತ್ತಾ? ಅಪ್ಪು ಅವರ ಪುಣ್ಯಸ್ಮರಣೆ ದಿನ ಈ ವಿಚಾರ ಬೆಳಕಿಗೆ ಬಂದಿದೆ..

ಮಾಧ್ಯಮದವರು ಚಲಪತಿ ಅವರನ್ನು ಮಾತನಾಡಿಸಿದ್ದು, ಅವರು ಹೇಳಿರುವ ಪ್ರಕಾರ, ಹೊಸಪೇಟೆಯಲ್ಲಿರುವ ಅಪ್ಪು ಅವರ ಅಭಿಮಾನಿಯೊಬ್ಬರು, ಮುಂದಿನ ದಿನಗಳಲ್ಲಿ ಅಪ್ಪು ಅವರ ಹೆಸರಿನಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವ ಪ್ಲಾನ್ ಮಾಡಿದ್ದು, ಚಲಪತಿ ಅವರು ತಮ್ಮೊಡನೆ ಇದ್ದರೆ, ಅಪ್ಪು ಅವರ ಆಶೀರ್ವಾದ ಸಿಕ್ಕ ಹಾಗೆ ಎಂದು ತಮ್ಮೊಡನೆ ಬಂದು ಇರಿ ಎಂದು ಕೇಳಿದರಂತೆ. ಹಾಗಾಗಿ ಚಲಪತಿ ಅವರು ಈಗ ಅಲ್ಲೇ ಇರುವುದಾಗಿ ತಿಳಿಸಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!