Leo Horoscope Life Style: ಸಿಂಹ ರಾಶಿಯನ್ನು (Leo Horoscope) ಅಗ್ನಿ ತತ್ವದ ರಾಶಿ ಎಂದು ಕರೆಯಲಾಗುತ್ತದೆ. ಈ ರಾಶಿಯ ಅಧಿಪತಿ ಸೂರ್ಯ. ಇವರು ಯಾವಾಗಲೂ ವಿಶಾಲ ಮನೋಭಾವದವರಾಗಿರುತ್ತಾರೆ. ಎಲ್ಲರಿಗೂ ಸಹಾಯ ಮಾಡುವವರಾಗಿರುತ್ತಾರೆ ಬಡವರನ್ನು ಕಂಡರೆ ದಯೆ ಮತ್ತು ಕರುಣೆ ಇವರಲ್ಲಿ ಎದ್ದು ಕಾಣಿಸುತ್ತದೆ. ಇವರು ಏನೇ ಕಷ್ಟ ಬಂದರೂ ಕೂಡ ಧೈರ್ಯದಿಂದ ಎದುರಿಸುತ್ತಾರೆ.

ಯಾವುದೇ ಕೆಲಸದಲ್ಲಿಯೂ ಕೂಡ ಹಿಂಜರಿಯುವಂತಹ ಸ್ವಭಾವ ಇವರದ್ದಲ್ಲ. ಇವರಿಗೆ ತಮ್ಮ ಮಿತ್ರರನ್ನು ಮತ್ತು ಸಂಬಂಧಿಕರನ್ನು ಕಂಡರೆ ತುಂಬಾ ಪ್ರೀತಿ. ಇವರು ಆದರ್ಶವಾದಿಗಳು ಹಾಗೂ ಬುದ್ಧಿವಂತರು ಕೂಡ ಆಗಿರುತ್ತಾರೆ ತಮ್ಮ ಬಂಧು-ಬಳಗದ ಮೇಲೆ ಹೆಚ್ಚು ವಿಶ್ವಾಸವನ್ನು ಇಡುತ್ತಾರೆ. ಬೇರೆಯವರಿಗೆ ತುಂಬಾ ಸಹಾಯ ಮಾಡುತ್ತಾರೆ. ಇವರು ನೋಡಲು ತುಂಬಾ ಕಠಿಣವಾಗಿ ಕಾಣಿಸಿಕೊಂಡರೂ ಕೂಡ ಒಳಗಡೆಯಿಂದ ಮೃದು ಸ್ವಭಾವದವರಾಗಿರುತ್ತಾರೆ.

ಸಂಗಾತಿಯೊಂದಿಗೆ ಬಹಳ ರೋಮ್ಯಾಂಟಿಕ್ ಆಗಿ ಇರುವ ಇವರು, ತಮ್ಮ ಕೌಟುಂಬಿಕ ಜೀವನವನ್ನು ಕಾಳಜಿಯೊಂದಿಗೆ ನೋಡಿಕೊಳ್ಳುತ್ತಾರೆ.ಇವರು ತಮ್ಮ ಗುರಿಗಳನ್ನು ಸಾಧಿಸಲು ಬಹಳ ಪ್ರಯತ್ನಿಸುತ್ತಾರೆ. ಬಹಳ ಎತ್ತರಕ್ಕೆ ಬೆಳೆಯಬೇಕೆಂಬ ಆಸೆ ಇವರಲ್ಲಿ ಪ್ರಬಲವಾಗಿರುತ್ತದೆ. ಅದಕ್ಕಾಗಿ ಹಗಲು ಇರುಳು ಶ್ರಮಿಸುತ್ತಾರೆ. ಇತರರ ಎದುರಿಗೆ ಬಹಳ ಗಟ್ಟಿಮುಟ್ಟಾಗಿ ಕಂಡರೂ ಕೂಡ ಆಂತರ್ಯದಿಂದ ಇವರು ಸೂಕ್ಷ್ಮಜೀವಿಗಳಾಗಿರುತ್ತಾರೆ.

ಯಾವಾಗಲೂ ಕೂಡ ತಮ್ಮ ಕುಟುಂಬದ ಚಿಂತೆಯಲ್ಲೇ ಇರುತ್ತಾರೆ ಕುಟುಂಬಕ್ಕಾಗಿ ಬಹಳ ಶ್ರಮವನ್ನು ವಹಿಸುತ್ತಾರೆ. ಅದೇ ರೀತಿ ತಮ್ಮ ಸಂಗಾತಿಯು ಕೂಡ ತನ್ನನ್ನು ಹೆಚ್ಚು ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದು ಬಯಸುತ್ತಾರೆ ಬೇರೆಯವರಲ್ಲಿ ಬೇಗ ನಂಬಿಕೆ ಇಡುತ್ತಾರೆ. ಒಮ್ಮೆ ಯಾರಾದರೂ ಸಿಂಹ ರಾಶಿಯವರ ನಂಬಿಕೆಯನ್ನು ಕಳೆದುಕೊಂಡರು ಎಂದರೆ ಪುನಹ ಗಳಿಸುವುದು ಕಷ್ಟ. ಒಂದು ಬಾರಿ ನಂಬಿಕೆಯನ್ನು ಕಳೆದುಕೊಂಡವರ ಜೊತೆ ಎಂದೆಂದಿಗೂ ಮತ್ತೆ ಸೇರುವುದಿಲ್ಲ.

ಇವರು ತಮ್ಮ ಪ್ರೀತಿ ಪಾತ್ರರ ಒಳ್ಳೆಯ ಗುಣವನ್ನು ಯಾವಾಗಲೂ ಒಪ್ಪಿಕೊಳ್ಳುವುದಿಲ್ಲ ಇವರಿಗೆ ತಾವೇ ಶ್ರೇಷ್ಠ ಎಂಬುದು ಮನಸ್ಸಿನಲ್ಲಿದೆ. ಹೊರಗಡೆ ಎಷ್ಟೇ ಕಠಿಣವಾಗಿ ಕಂಡರೂ ಕೂಡ ಮನಸ್ಸಿನ ಒಳಗಡೆ ಯಾವ ಕಲ್ಮಶವನ್ನು ಇಟ್ಟುಕೊಳ್ಳುವುದಿಲ್ಲ. ಇನ್ನೊಬ್ಬರ ಕಷ್ಟಕ್ಕೆ ನೆರವಾಗುವಂತಹ ವ್ಯಕ್ತಿತ್ವ ಇವರದ್ದು. ಯಾವುದೇ ನಿರೀಕ್ಷೆಯಿಲ್ಲದೆ ಬೇರೆಯವರಿಗೆ ಸಹಾಯ ಮಾಡುತ್ತಾರೆ. ಒಟ್ಟಿನಲ್ಲಿ ಸಿಂಹ ರಾಶಿಯವರು ಪರಿಶ್ರಮ ಜೀವಿಗಳು ಎಂದು ಹೇಳಬಹುದು ತಮ್ಮ ಉನ್ನತಮಟ್ಟದ ಸಾಧನೆಗಾಗಿ ಬಹಳಷ್ಟು ಶ್ರಮಿಸುತ್ತಾರೆ.

Leave a Reply

Your email address will not be published. Required fields are marked *