Gruha jyoti Scheme New Updates: ಸರ್ಕಾರ ನಮ್ಮ ರಾಜ್ಯದ ಎಲ್ಲಾ ಜನರಿಗೆ ಉಚಿತ ವಿದ್ಯುತ್ ಸೌಲಭ್ಯ ನೀಡುತ್ತಿದೆ. ಆದರೆ ಹಲವು ಜನರು ಈ ಸೌಲಭ್ಯ ಪಡೆದು ಸರ್ಕಾರಕ್ಕೆ ಮೋಸ ಮಾಡಿದ್ದಾರೆ, ಅಂಥ ಜನರಿಗೆ ಈಗ ಸರ್ಕಾರ ಬುದ್ಧಿ ಕಲಿಸುವ ನಿರ್ಧಾರ ಮಾಡಿದೆ. ಇಂಥವರಿಗೆ ಒಂದು ಸ್ಟ್ರಿಕ್ಟ್ ಆಗಿರುವ ಆದೇಶ ಸರ್ಕಾರದಿಂದ ಬಂದಿದೆ. ಸರ್ಕಾರಕ್ಕೆ ಮೋಸ ಮಾಡಿರುವವರ ಮನೆಯ ವಿದ್ಯುತ್ ಅನ್ನು ಕಟ್ ಮಾಡಲಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ.

ಸರ್ಕಾರವು ರಾಜ್ಯದ ಜನರ ಒಳತಿಗಾಗಿ ತಂದಿರುವ ಯೋಜನೆ ಇದಾಗಿದೆ, ಜನರಿಗೆ ಉಚಿತ ವಿದ್ಯುತ್ ನೀಡುವ ಸಲುವಾಗಿ ಸರ್ಕಾರವು ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದಿದೆ. ರಾಜ್ಯದಲ್ಲಿ ಸ್ವಂತ ಮನೆಯಲ್ಲಿ ವಾಸ ಮಾಡುವವರಿಗೆ ಮತ್ತು ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ಎಲ್ಲರಿಗೂ ಕೂಡ 200 ಯೂನಿಟ್ ವರೆಗು ಉಚಿತ ವಿದ್ಯುತ್ ನೀಡಲಾಗುತ್ತಿದೆ..200 ಯೂನಿಟ್ ವರೆಗು ಫ್ರೀ ವಿದ್ಯುತ್ ಬಳಸಬಹುದು.

ಒಂದು ವೇಳೆ 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸಿದರೆ, ಆಗ ಹಣ ಪಾವತಿ ಮಾಡಬೇಕಾಗಿ ಬರುತ್ತದೆ. ಈ ಸೌಲಭ್ಯವನ್ನು ಮನೆಯ ಓನರ್ ಗಳು ಮತ್ತು ಬಾಡಿಗೆಗೆ ಇರುವವರು ಎಲ್ಲರೂ ಪಡೆಯುತ್ತಿದ್ದಾರೆ.. ಆದರೆ ಕೆಲವು ಜಿಲ್ಲೆಯ ಜನರು ಗೃಹಲಕ್ಷ್ಮಿ ಯೋಜನೆ ವಿಚಾರದಲ್ಲಿ, ಸರ್ಕಾರಕ್ಕೆ ಶಾಕ್ ನೀಡಿದ್ದಾರೆ. ಗೃಹಜ್ಯೋತಿ ಯೋಜನೆ ಲಾಂಚ್ ಆಗುವ ವೇಳೆಯಲ್ಲೇ, ಸರ್ಕಾರ ಎಲ್ಲಾ ಜನರಿಗೆ ಒಂದು ಆದೇಶ ನೀಡಿತ್ತು.

Gruha jyoti Scheme New Updates

ಎಲ್ಲರೂ ಕೂಡ ಸೆಪ್ಟೆಂಬರ್ 30ರ ಒಳಗೆ ಬಾಕಿ ಉಳಿದಿರುವ ವಿದ್ಯುತ್ ಬಿಲ್ ಅನ್ನು ಪಾವತಿ ಮಾಡಿಬಿಡಬೇಕು, ಇಲ್ಲದೆ ಹೋದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ ಎಂದು ಸರ್ಕಾರ ಆದೇಶ ನೀಡಿತ್ತು. ಆದರೆ ಇಂದು ಕೂಡ ರಾಜ್ಯದ ಹಲವು ಜನರು ಇಂದಿಗೂ ಕೂಡ ವಿದ್ಯುತ್ ಬಿಲ್ ಅನ್ನು ಬಾಕಿ ಉಳಿಸಿಕೊಂಡಿದ್ದಾರೆ. ಆದರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಎಲ್ಲರೂ ಕೂಡ ಇನ್ನು ವಿದ್ಯುತ್ ಬಿಲ್ ಕ್ಲಿಯರ್ ಮಾಡಿಲ್ಲ.

ಹಾಗಾಗಿ ಸರ್ಕಾರ ಈಗ ಮತ್ತೊಂದು ಸುತ್ತೋಲೆ ನೀಡಿದ್ದು, ಯಾರೆಲ್ಲಾ ಇನ್ನು ವಿದ್ಯುತ್ ಬಿಲ್ ಕಟ್ಟಿಲ್ಲವೋ, ಅವರಿಗೆಲ್ಲಾ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ ಎಂದು ತಿಳಿಸಿದೆ. ಈಗ ಸರ್ಕಾರದಿಂದ ಸಿಕ್ಕಿರುವ ಮಾಹಿತಿಯ ಅನುಸಾರ, ಮೈಸೂರು, ಕೊಡಗು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಹೆಚ್ಚಿನ ಜನರು ವಿದ್ಯುತ್ ಬಿಲ್ ಪಾವತಿ ಮಾಡಿಲ್ಲ, ಉತ್ತರ ಕರ್ನಾಟಕದ ಭಾಗದಿಂದಲು ಕೂಡ ಕೋಟಿಗಟ್ಟಲೇ ಹಣ ವಿದ್ಯುತ್ ಬಿಲ್ ಪಾವತಿ ಆಗಬೇಕಿದೆ ಎಂದು ಮಾಹಿತಿ ಸಿಕ್ಕಿದೆ.

ಜನರಿಂದ ಆಗಿರುವ ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರದ ಹೊಸ ನಿರ್ಧಾರ ಜಾರಿಗೆ ಬರಲಿದೆ, ಇನ್ನು ಯಾರು ವಿದ್ಯುತ್ ಬಿಲ್ ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿದ್ದಾರೋ ಅಂಥವರ ಮನೆಯ ವಿದ್ಯುತ್ ಕಡಿತಗೊಳಿಸಿ, ಅವರಿಗೆಲ್ಲಾ ಗೃಹಜ್ಯೋತಿ ಯೋಜನೆಯ ಸೌಲಭ್ಯ ನೀಡುವುದಿಲ್ಲ ಎಂದು ಮಾಹಿತಿ ಸಿಕ್ಕಿದೆ. ಈಗ ನಮ್ಮ ರಾಜ್ಯದಲ್ಲಿ ಮಳೆ ಇಲ್ಲದ ಕಾರಣ ಜನರಿಗೆ ಬೇಕಾಗುವಷ್ಟು ವಿದ್ಯುತ್ ಪೂರೈಕೆ ಮಾಡಲು ಆಗುತ್ತಿಲ್ಲ.

ಜನರಿಗೆ ಅಗತ್ಯ ಇರುವಷ್ಟು ವಿದ್ಯುತ್ ಇಲ್ಲದೆ, ಹಳ್ಳಿಗಳಲ್ಲಿ ಈಗಾಗಲೇ ಲೋಡ್ ಶೆಡ್ಡಿಂಗ್ ಸಮಸ್ಯೆ ಶುರುವಾಗಿದೆ. ಇದರಿಂದ ವಿದ್ಯುತ್ ನಿಗಮಕ್ಕೆ ನಷ್ಟ ಉಂಟಾಗುತ್ತಿದೆ. ಜೊತೆಗೆ ಜನರಿಂದಲು ಈ ರೀತಿ ಆಗುತ್ತಿರುವುದು ಸರ್ಕಾರಕ್ಕೆ ಹೆಚ್ಚಿನ ನಷ್ಟವಾಗುತ್ತಿದೆ. ಹಾಗಾಗಿ ಸರ್ಕಾರ ಈ ಥರದ ನಿರ್ಧಾರ ಮಾಡಿದೆ, ಈ ಪರಿಣಾಮವನ್ನು ಜನರು ಹೇಗೆ ಎದುರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ

ಇದನ್ನೂ ಓದಿ.. Property Law:ಮಗನ ಆಸ್ತಿಯಲ್ಲಿ ಪತ್ನಿಗೆ ಮಾತ್ರವಲ್ಲ ತಾಯಿಗೂ ಇದೆ ಪಾಲು, ಇಲ್ಲಿದೆ ಹೊಸ ಕಾನೂನು ಮಾಹಿತಿ

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!