Swami Dayananda Education Foundation Scholarship: ಒಂದು ವೇಳೆ ನೀವು ಇಂಜಿನಿಯರಿಂಗ್, ಮೆಡಿಕಲ್, ಅಥವಾ ಇನ್ನಿತರ ಡಿಗ್ರಿ ಓದುತ್ತಿದ್ದು, ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿದ್ದರೆ, ನಿಮಗಾಗಿ ಒಂದು ಒಳ್ಳೆಯ ಅವಕಾಶ ಇಲ್ಲಿದೆ. ಸ್ವಾಮಿ ದಯಾನಂದ ಎಜುಕೇಶನ್ ಟ್ರಸ್ಟ್ ವತಿಯಿಂದ ನೀಡುವ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತಿ ಇರುವವರು ಇದಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿ ಹಾಕಲು ಬೇಕಾಗುವ ಅರ್ಹತೆಗಳು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇದೆಲ್ಲದರ ಬಗ್ಗೆ ಪೂರ್ತಿಯಾಗಿ ಮಾಹಿತಿ ತಿಳಿಸಿಕೊಡುತ್ತೇವೆ ನೋಡಿ..
ಈ ಸ್ಕಾಲರ್ಶಿಪ್ ನ ಹೆಸರು ಸ್ವಾಮಿ ದಯಾನಂದ ಎಜುಕೇಶನ್ ಫೌಂಡೇಶನ್ ಸ್ಕಾಲರ್ಶಿಪ್. ಈ ಸ್ಕಾಲರ್ಶಿಪ್ ವೃತ್ತಿಪರ ಕೋರ್ಸ್ ಮಾಡುತ್ತಿರುವವರಿಗೆ, ಬಿಎ, ಬಿಎಸ್ಸಿ, ಬಿಇ, ಬಿಟೆಕ್, ಬಿ.ಆರ್ಕ್, ಎಂಬಿಬಿಎಸ್, ಬಿಫಾರ್ಮ ಸೇರಿದಂತೆ 4 ವರ್ಷಗಳ ಕೋರ್ಸ್ ಅನ್ನು ಸರ್ಕಾರಿ ಅಥವಾ ಪ್ರೈವೇಟ್ ಕಾಲೇಜ್ ಗಳಲ್ಲಿ ಮಾಡುತ್ತಿರುವವರು ಕೂಡ ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು. ಸ್ಕಾಲರ್ಶಿಪ್ ಗೆ ಅರ್ಜಿ ಹಾಕಲು ಅಗತ್ಯವಿರುವ ಅರ್ಹತೆಗಳು ಏನೇನು ಎಂದು ನೋಡುವುದಾದರೆ..
ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್ ಗಳು, ಅಂಡರ್ ಗ್ರಾಜುಯೆಟ್ ಕೋರ್ಸ್ ಗಳಿಗೆ ಅಡ್ಮಿಷನ್ ಪಡೆದಿರಬೇಕು. ಹಾಗೆಯೇ ಪಿಯುಸಿಯಲ್ಲಿ ವಿದ್ಯಾರ್ಥಿಗಳು 75% ಮಾರ್ಕ್ಸ್ ಅಥವಾ 7.5 CGPA ಮಿನಿಮಮ್ ಸ್ಕೋರ್ ಪಡೆದಿರಬೇಕು. ಹಾಗೆಯೇ ವಿದ್ಯಾರ್ಥಿಯ ಮನೆಯವರ ವಾರ್ಷಿಕ ಆದಾಯ 6 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇರಬೇಕು.. ಸ್ಕಾಲರ್ಶಿಪ್ ನಲ್ಲಿ ಸಿಗುವ ಹಣ ಎಷ್ಟು ಎಂದು ನೋಡುವುದಾದರೆ, NEET ಅಥವಾ JEE ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವವರ Rank 1 ರಿಂದ 500ರವರೆಗೆ ಇದ್ದರೆ, ವರ್ಷಕ್ಕೆ 2 ಲಕ್ಷದ ಹಾಗೆ, 4 ವರ್ಷದವರೆಗು ಸ್ಕಾಲರ್ಶಿಪ್ ಸಿಗುತ್ತದೆ.
Swami Dayananda Education Foundation Scholarship
Ranking 501 ರಿಂದ 1500ರವರೆಗು ಇದ್ದರೆ, 1.6 ಲಕ್ಷ ರೂಪಾಯಿ 4 ವರ್ಷಗಳವರೆಗು ಸಿಗುತ್ತದೆ. Ranking 1501 ರಿಂದ 3000 ವರೆಗು ಇದ್ದರೆ, 1.2ಲಕ್ಷ 4 ವರ್ಷದ ವರೆಗು ಸಿಗುತ್ತದೆ. ಇನ್ನುಳಿದ ವೃತ್ತಿಪರ ಡಿಗ್ರಿ ಕೋರ್ಸ್ ಮಾಡುತ್ತಿರುವವರಿಗೆ ವರ್ಷಕ್ಕೆ 80 ಸಾವಿರ ರೂಪಾಯಿ 4 ವರ್ಷದವರೆಗು ಸಿಗುತ್ತದೆ. ರೆಗ್ಯುಲರ್ ಡಿಗ್ರಿ ಓದುತ್ತಿರುವವರಿಗೆ ವರ್ಷಕ್ಕೆ 10 ಸಾವಿರ ಸ್ಕಾಲರ್ಶಿಪ್ ಸಿಗುತ್ತದೆ.
ಇಲ್ಲಿ ನೀವು ಗಮನಿಸಬೇಕಾದ ಮುಖ್ಯ ವಿಚಾರ ಏನು ಎಂದರೆ, ಸ್ಕಾಲರ್ಶಿಪ್ ಹಣವನ್ನು ವಿದ್ಯಾರ್ಥಿ ಓದುತ್ತಿರುವ ಕಾಲೇಜಿಗೆ ಕ್ರೆಡಿಟ್ ಮಾಡಲಿದ್ದು, ವಿದ್ಯಾರ್ಥಿಗಳು ಅಲ್ಲಿಂದ ಪಡೆಯಬೇಕು. ಅರ್ಜಿ ಹಾಕಲು ಬೇಕಾದ ಡಾಕ್ಯುಮೆಂಟ್ ಗಳು, 10ನೇ ತರಗತಿ ಮಾರ್ಕ್ಸ್ ಕಾರ್ಡ್, ದ್ವಿತೀಯ ಪಿಯುಸಿ ಮಾರ್ಕ್ಸ್ ಕಾರ್ಡ್, ಈಗ ಮಾಡುತ್ತಿರುವ ಡಿಗ್ರಿ ಕೋರ್ಸ್ ಸೆಮಿಸ್ಟರ್ ಮಾರ್ಕ್ಸ್ ಕಾರ್ಡ್, ಎಂಟ್ರೆನ್ಸ್ ಎಕ್ಸಾಂ ನಲ್ಲಿ ಸೀಟ್ ಸಿಕ್ಕಿರುವ ರೆಸಿಪ್ಟ್, ಅಡ್ಮಿಷನ್ ರೆಸಿಪ್ಟ್, ಕಾಲೇಜ್ ಡೀಟೇಲ್ಸ್, ಬೇರೆ ಸ್ಕಾಲರ್ಶಿಪ್ ಪಡೆಯುತ್ತಿದ್ದರೆ ಅದರ ಡೀಟೇಲ್ಸ್, ಎಜುಕೇಶನ್ ಲೋನ್ ಪಡೆದಿದ್ದರೆ ಅದರ ಡೀಟೇಲ್ಸ್, ಐಡೆಂಟಿಟಿ ಕಾರ್ಡ್, ಹಾಗೂ ಇನ್ನಿತರ ಮಾಹಿತಿಗಳು.
ಈ ಸ್ಕಾಲರ್ಶಿಪ್ ಗೆ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. https://www.swamidayanand.org/india-scholarship-2023-24 ಇದು ಸ್ಕಾಲರ್ಶಿಪ್ ಗೆ ಅರ್ಜಿ ಹಾಕುವ ಲಿಂಕ್ ಆಗಿದೆ. ಇಲ್ಲಿ ಕೇಳುವ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ, ಅರ್ಜಿ ಸಲ್ಲಿಸಿ.