Divorce law Information In Kannada: ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲಿ ಜೀವನದ ಮೊದಲ ಹೆಜ್ಜೆ ಅಂತ ಭಾವಿಸುತ್ತೇವೆ. ಎಷ್ಟು ಕನಸುಗಳನ್ನು ಕಾಣುತ್ತಾ ಸಪ್ತಪದಿಯನ್ನ ತುಳಿಯಲು ತಯಾರಾಗಿರುತ್ತೇವೆ. ಮದುವೆ ಎಂದರೆ ಒಬ್ಬರನ್ನು ಒಬ್ಬರು ಸರಿಯಾಗಿ ಅರ್ಥ ಮಾಡಿಕೊಂಡು ಜೀವನವನ್ನು ನಡೆಸಬೇಕು. ಈ ದಿನ ಕಾಲದಲ್ಲಿ ಮದುವೆ ಎಂದರೆ ಅದಕ್ಕೆ ಅರ್ಥವೇ ಇಲ್ಲದಂತೆ ಆಗಿಬಿಟ್ಟಿದೆ. ಮದುವೆ ಎನ್ನುವುದು ಮಕ್ಕಳ ಆಟಿಕೆಯಂತೆ ಆಗಿದೆ. ಸ್ವಲ್ಪ ದಿನ ಜೀವನ ಮಾಡಿ ಆಮೇಲೆ ಗಂಡ ಹೆಂಡತಿ ಬೇರೆಯಾಗುವುದು ಸರ್ವೆ ಸಾಮಾನ್ಯವಾಗಿ ಬಿಟ್ಟಿದೆ ಪಾಶ್ಚಾತ್ಯ ರೂಢಿಯನ್ನು ರೂಢಿಸಿಕೊಂಡಿದ್ದಾರೆ.
ಇತ್ತೀಚಿಗಂತೂ ವಿವಾಹಕ್ಕೆ ಬೆಲೆಯೇ ಇಲ್ಲ ವಿವಾಹ ಅನ್ನೋದು ಕೇವಲ ಶೋಕಿಯಾಗಿಬಿಟ್ಟಿದೆ. ಯಾವಾಗಲೂ ಹೊಂದಿಕೊಂಡು ಬಾಳುವುದನ್ನು ಬಿಟ್ಟು ಬೇರೆಯಾಗುವುದನ್ನೇ ಯೋಚಿಸುತ್ತಾರೆ. ಹೆಂಡತಿ ಗಂಡ ಇದ್ದುಕೊಂಡೆ ಎರಡನೆಯ ಮದುವೆಯ ಪ್ರಸ್ತಾಪನೆಯನ್ನ ಮಾಡುತ್ತಾರೆ. ಅ-ನೈತಿಕ ಸಂಬಂಧಗಳನ್ನು ಇಟ್ಟುಕೊಳ್ಳುತ್ತಾರೆ. ಮೊದಲನೆಯ ಹೆಂಡತಿ ಮತ್ತು ಗಂಡ ಇದ್ದುಕೊಂಡೆ ಬೇರೆಯವರನ್ನ ಮದುವೆಯಾದರೆ ಕಾನೂನು ಏನು ಹೇಳುತ್ತೆ ಅಂತ ನೋಡೋಣ ಬನ್ನಿ.
Divorce law Information In Kannada
ಒಂದು ವೇಳೆ ಗಂಡ ಹಾಗೂ ಹೆಂಡತಿ ಇಬ್ಬರಲ್ಲಿ ಒಬ್ಬರು ಏಳು ವರ್ಷಗಳ ವರೆಗೆ ಕಾಣದಿದ್ದಲ್ಲಿ ಅಥವಾ ಏಳು ವರ್ಷಗಳ ವರೆಗೆ ಒಬ್ಬರಿಗೊಬ್ಬರು ಸಂಪರ್ಕ ಇಲ್ಲದೆ ಇದ್ದಲ್ಲಿ ಎರಡನೇ ಮದುವೆಯನ್ನು ಕೂಡ ಆಗಬಹುದು ಅಂತ ಕಾನೂನು ಹೇಳುತ್ತದೆ ಹಾಗೂ ಒಬ್ಬರ ಆಸ್ತಿಯಲ್ಲಿ ಇನ್ನೊಬ್ಬರು ಪಾಲು ಕೇಳುವ ಹಾಗಿಲ್ಲ ಇದು ಈಗಿನ ಕಾನೂನಾಗಿದೆ. ಒಂದು ವೇಳೆ ಎರಡನೇ ಮದುವೆ ಆದ ನಂತರ ಗಂಡ ಹೇಳು ವರ್ಷದ ನಂತರ ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ಕಾಣಿಸಿದರೆ ಈ ಎರಡನೇ ಮದುವೆ ಅಸಿಂದು ಆಗುತ್ತದೆ.
ಒಂದು ವೇಳೆ ಗಂಡ ಮತ್ತು ಹೆಂಡತಿ ಇಬ್ಬರಲ್ಲಿ ಒಬ್ಬರು ಸಂಗಾತಿ ಇದ್ದು ಕೂಡ ಇನ್ನೊಬ್ಬರನ್ನು ಮದುವೆಯಾದರೆ ಕಾನೂನು ಪ್ರಕಾರ ಆ ಅಪರಾಧಿಗೆ ತಕ್ಕ ಶಿಕ್ಷೆಯಾಗುತ್ತದೆ ಹಾಗೂ ಅವನ ಆಸ್ತಿಯಲ್ಲಿ ಸಮಪಾಲು ಈ ಸಂಗಾತಿಗೆ ದೊರಕುತ್ತದೆ. ನಮ್ಮ ಕಾನೂನಿನ ಪ್ರಕಾರ ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಸಂಗಾತಿ ಬದುಕಿದ್ದು ಕೂಡ ವಿಚ್ಛೇದನ ತೆಗೆದುಕೊಳ್ಳದೆ ಬೇರೆ ಮದುವೆಯಾಗೋ ಹಾಗಿಲ್ಲ ಆ ರೀತಿ ಆದಲ್ಲಿ ಅವರಿಗೆ ಕಠಿಣ ಶಿಕ್ಷೆ ಆಗುತ್ತದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ. ಇದನ್ನೂ ಓದಿ Ration Card: ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಹಾಕಿದ್ದೀರಾ? ಹಾಗಿದ್ರೆ ಸ್ಟೇಟಸ್ ಏನಾಗಿದೆ ಎಂದು ಈಗಲೇ ಚೆಕ್ ಮಾಡಿ