Akrama Sakrama Yojane 2023: ಸರ್ಕಾರಕ್ಕೆ ಸೇರಿದ ಜಾಗದಲ್ಲಿ ವಾಸ ಮಾಡುತ್ತಿರುವವರಿಗೆ ಮತ್ತು ವ್ಯವಸಾಯ ಮಾಡುತ್ತಿರುವವರಿಗೆ ಗುಡ್ ನ್ಯೂಸ್, ಜಾಗವನ್ನು ನಿಮ್ಮ ಸ್ವಂತವಾಗಿ ಮಾಡಿಕೊಳ್ಳಲು ಇಂದೇ ಅರ್ಜಿ ಸಲ್ಲಿಸಿ
ಸಾಕಷ್ಟು ವರ್ಷಗಳಿಂದ ಸರ್ಕಾರದ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿರುವವರಿಗೆ ಇನ್ನು ಆ ಭೂಮಿ ಸಕ್ರಮವಾಗಿಲ್ಲ..ಈ ವಿಚಾರದ ಬಗ್ಗೆ ವಿಕಾಸಸೌಧದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಜೊತೆಗೆ ಚರ್ಚೆ ನಡೆದಲಾಗಿದ್ದು, ಬಗರ್ ಹುಕುಂ ತಂತ್ರಾಂಶದ ಬಗ್ಗೆ ಮಾತನಾಡಲಾಗಿದೆ.
Akrama Sakrama Yojane 2023
ಬಗರ್ ಹುಕುಂ ಮೂಲಕ ಪ್ರಸ್ತುತ ರೈತರು ಕೃಷಿ ಮಾಡುತ್ತಿರುವ ಭೂಮಿಯನ್ನು ಆದಷ್ಟು ಬೇಗ ಸಕ್ರಮ ಮಾಡಿಸಿಕೊಡಬೇಕು ಎಂದು ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರು ಆದೇಶ ನೀಡಿದ್ದಾರೆ. ರಾಜ್ಯದ ಎಲ್ಲಾ ರೈತರಿಗೆ ಇದು ಒಂದು ರೀತಿಯಲ್ಲಿ ಬಹಳ ಒಳ್ಳೆಯ ಸುದ್ದಿ. ಕೃಷಿ ಕೆಲಸಕ್ಕೆ ಕಷ್ಟ ಅನುಭವಿಸುತ್ತಿರುವ ರೈತರಿಗೆ ಇದು ಅವರ ಬದುಕನ್ನು ಹಸನು ಮಾಡಿಕೊಳ್ಳಲು ಉತ್ತಮವಾದ ಅವಕಾಶ ಎಂದು ಹೇಳಿದರೆ ತಪ್ಪಲ್ಲ.
ಅಧಿಕಾರಿಗಳು ನೀಡಿರುವ ಸೂಚನೆ ಏನು ಎಂದರೆ, ಕೃಷಿ ಭೂಮಿಯನ್ನು ಸಕ್ರಮ ಮಾಡುವ ಬಗ್ಗೆ ಭೂಮಿಯ ಪರಿಶೀಲನೆ ಮಾಡಲು ಬಗರ್ ಹುಕುಂ ತಂತ್ರಾಂಶ ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಬೇಕು. ರೈತರಿಗೆ ಅಧಿಕೃತ ಅಲ್ಲದ ವ್ಯವಸಾಯ ಭೂಮಿಯನ್ನು ಬಗರ್ ಹುಕುಂ ತಂತ್ರಾಂಶದ ಮೂಲಕ ಸಕ್ರಮ ಮಾಡುವ ಕೆಲಸವನ್ನು ಕಂದಾಯ ಇಲಾಖೆ ಶೀಘ್ರದಲ್ಲರ್ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.
ಪ್ರಸ್ತುತ ನಮೂನೆ ಸಂಖ್ಯೆ 50, 53 ಮತ್ತು 57 ಈ ನಮೂನೆಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಜಾಸ್ತಿ ಆಗುತ್ತಿದ್ದು, ಇವುಗಳನ್ನು ನ್ಯಾಯವಾಗಿ ವಿಲೇವಾರಿ ಮಾಡಬೇಕು. ಒಂದು ವೇಳೆ ಕೃಷಿಕರು ಅನಧಿಕೃತವಾಗಿ ವ್ಯವಸಾಯ ಮಾಡುತ್ತಿದ್ದರೆ, ಅಂಥವರಿಗೆ ಅಕ್ರಮ ಸಕ್ರಮ, ಬಗರ್ ಹುಕುಂ ತಂತ್ರಾಂಶದ ಅಡಿಯಲ್ಲಿ ಸಾಗುವಳಿ ಚೀಟಿ ನೀಡಬೇಕು ಎಂದು ಕಂದಾಯ ಇಲಾಖೆ ನಿರ್ಧಾರ ಮಾಡಿದೆ. ಈ ರೀತಿಯಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಲಾಗಿದೆ. ಇದನ್ನೂ ಓದಿ Anna Bhagya Money: ಇನ್ಮುಂದೆ ಅನ್ನಭಾಗ್ಯ ಯೋಜನೆಯ ಹಣ ಸಿಗಲ್ವಾ? ಸರ್ಕಾರದ ಹೊಸ ಅಪ್ಡೇಟ್ ಇಲ್ಲಿದೆ