Anna Bhagya money: ರಾಜ್ಯ ಸರ್ಕಾರವು ನಮ್ಮ ರಾಜ್ಯದ ಜನರಿಗಾಗಿ ತಂದಿರುವ ಪ್ರಮುಖ ಯೋಜನೆಗಳಲ್ಲಿ ಒಂದು ಅನ್ನಭಾಗ್ಯ ಯೋಜನೆ ಆಗಿದೆ. ಈ ಯೋಜೆನೆಯ ಮೂಲಕ ಬಿಪಿಎಲ್ ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಎಲ್ಲಾ ಫಲಾನುಭವಿಗಳಿಗೆ ತಿಂಗಳಿಗೆ 10 ಕೆಜಿ ಅಕ್ಕಿ ಒದಗಿಸುವ ಭರವಸೆ ನೀಡಿತ್ತು, ಬಳಿಕ 10 ಕೆಜಿ ಅಕ್ಕಿ ಒದಗಿಸಲು ಸಾಧ್ಯವಾಗದ ಕಾರಣ 5 ಕೆಜಿ ಅಕ್ಕಿ ನೀಡಿ, ಇನ್ನು 5 ಕೆಜಿ ಅಕ್ಕಿಯ ಬದಲಾಗಿ ಹಣ ನೀಡುವ ಭರವಸೆ ನೀಡಲಾಗಿತ್ತು.
ಅನ್ನಭಾಗ್ಯ (Anna Bhagya) ಯೋಜನೆಯ ಎರಡು ಕಂತಿನ ಹಣ ಜನರನ್ನು ತಲುಪಿದೆ. ಆದರೆ ಮೂರನೇ ಕಂತಿನ ಹಣ ಬಿಡುಗಡೆ ಬಿಡುಗಡೆ ಆಗುವುದಕ್ಕೆ ಕೆಲವು ಗೊಂದಲಗಳು ಶುರುವಾಗಿದೆ. ಜುಲೈ ಮತ್ತು ಆಗಸ್ಟ್ ತಿಂಗಳ ಹಣ ಜನರನ್ನು ತಲುಪಿದ್ದು, ಸೆಪ್ಟೆಂಬರ್ ತಿಂಗಳ ಹಣ ಇನ್ನು ಎಲ್ಲರಿಗು ಸಿಕ್ಕಿಲ್ಲ, ಕೆಲವರಿಗೆ ಮಾತ್ರ ಸೆಪ್ಟೆಂಬರ್ ತಿಂಗಳ ಹಣ ತಲುಪಿದೆ ಎಂದು ಹೇಳಲಾಗುತ್ತಿದ್ದು, ಹಲವರಿಗೆ ಸಿಕ್ಕಿಲ್ಲ, ಇತ್ತ ಜನರು ಕೂಡ ತಮಗೆ ಹಣ ಬೇಡ ಅಕ್ಕಿ ಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯದ ಎಲ್ಲಾ ಜನರಿಗೆ 10ಕೆಜಿ ಒದಗಿಸಿ ಕೊಡಲು ಆಗುತ್ತಿಲ್ಲ ಎನ್ನುವ ಕಾರಣಕ್ಕೆ ಫಲಾನುಭವಿಗಳಿಗೆ ಒಂದು ಕೆಜಿ ಅಕ್ಕಿಗೆ 34 ರೂಪಾಯಿಯ ಹಾಗೆ 5 ಕೆಜಿ ಅಕ್ಕಿಗೆ 170 ರೂಪಾಯಿಗಳನ್ನು ಜನರ ಬ್ಯಾಂಕ್ ಖಾತೆಗೆ ತಲುಪಿಸುವ ಪ್ಲಾನ್ ಸರ್ಕಾರದ್ದಾಗಿತ್ತು, ಸಚಿವರಾದ ಚೆಲುವರಾಯಸ್ವಾಮಿ ಅವರು ವಿಧಾನಸೌಧದಲ್ಲಿ ಈ ಬಗ್ಗೆ ಮಾತನಾಡಿ, ಜನರಿಗೆ ಹಣ ಕೊಡುವುದಕ್ಕಿಂತ ಪೌಷ್ಟಿಕ ಆಹಾರ ಒದಗಿಸುವ ಕೆಲಸ ಮಾಡುವುದು ಒಳ್ಳೆಯದು ಎಂದು ಹೇಳಿದ್ದರು.
ಅನ್ನಭಾಗ್ಯ ಯೋಜನೆಯ ಹಣ ಇನ್ನು ಜನರ ಬ್ಯಾಂಕ್ ಖಾತೆಗೆ ಬರದೇ ಇರುವುದಕ್ಕೆ ಕಾರಣ ಈಗ ಸಿಕ್ಕಿದ್ದು, ಬಹುಶಃ ರೇಷನ್ ಕಾರ್ಡ್ ಕ್ಯಾನ್ಸಲ್ ಆಗಿದ್ದರೆ, ಈ ಕಾರಣಕ್ಕೆ ಕೂಡ ಅನ್ನಭಾಗ್ಯ ಯೋಜನೆಯ ಹಣ ಬಂದಿರುವುದಿಲ್ಲ ಎಂದು ಹೇಳಲಾಗುತ್ತಿದೆ. ನಿಮ್ಮ ಖಾತೆಗೆ ಅನ್ನಭಾಗ್ಯ ಯೋಜನೆಯ ಹಣ ಬಂದಿದ್ಯಾ ಅಥವಾ ಇಲ್ಲವಾ ಎನ್ನುವುದನ್ನು ನೀವು ಆನ್ಲೈನ್ ಮೂಲಕ ಚೆಕ್ ಮಾಡಿಕೊಳ್ಳಬಹುದು, http://ahara.kar.nic.in/status1/status_of_dbt_new.aspx ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಚೆಕ್ ಮಾಡಬಹುದು.
ಇದು ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿದೆ, ಇದನ್ನು ಚೆಕ್ ಮಾಡುವ ಮೂಲಕ ನೀವು ತಿಳಿದುಕೊಳ್ಳಬಹುದು. ಸರ್ಕಾರ ಇನ್ನುಮುಂದೆ ಹಣದ ಬದಲಾಗಿ ಅಕ್ಕಿ ಅಥವಾ ಪೌಷ್ಟಿಕ ಆಹಾರ ಒದಗಿಸುವ ಪ್ಲಾನ್ ಸಹ ಮಾಡಿಕೊಂಡಿದೆ. ಈ ಕಾರಣಗಳಿಗೆ ಜನರಲ್ಲಿ ಗೊಂದಲ ಶುರುವಾಗಿದೆ. ಈ ತಿಂಗಳು ಮೂರನೇ ಕಂತಿನ ಹಣ ಜನರನ್ನು ತಲುಪಿದರು ಕೂಡ, ನಾಲ್ಕನೇ ಕಂತಿನಿಂದ ಹಣ ಬರುವುದಿಲ್ಲ ಅದರ ಬದಲಾಗಿ ಅಕ್ಕಿ ಅಥವಾ ಪೌಷ್ಟಿಕ ಆಹಾರ ನೀಡಬಹುದು ಎಂದು ಹೇಳಬಹುದು.
ರಾಗಿ, ಜೋಳ, ಕಡಲೆಕಾಯಿ ಎಣ್ಣೆ ಮತ್ತು ಇನ್ನಿತರ ಪೌಷ್ಟಿಕ ಆಹಾರಗಳನ್ನು ಒದಗಿಸಬಹುದು ಎಂದು ಚಿಂತನೆ ನಡೆದಿದ್ದು, ಹಣ ನೀಡಿದರೆ ಅದರಿಂದ ಜನರಿಗೆ ಹೆಚ್ಚಿನ ಪ್ರಯೋಜನ ಆಗುವುದಿಲ್ಲ ಎಂದು ಹೇಳಲಾಗುತ್ತಿದೆ. ಈ ಹೊಸ ಚರ್ಚೆ ಶುರು ಆಗಿರುವುದರಿಂದ ರಾಜ್ಯ ಸಿಎಂ ಸಿದ್ದರಾಮಯ್ಯ ಅವರು ಅಕ್ಕಿ ಬದಲಾಗಿ ಜನರಿಗೆ ಏನನ್ನು ಕೊಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಬಿಡುಗಡೆಗೆ ದಿನಾಂಕ ಫಿಕ್ಸ್! ಮಹಿಳೆಯರಿಗೆ ಚಿಂತೆಬೇಡ