New Motor Vehicle Rules from 1st Oct 2023: ಯಾವೆಲ್ಲಾ ಜನರ ಹತ್ತಿರ ಸ್ವಂತ ಕಾರ್ ಮತ್ತು ಬೈಕ್ ಇದೆಯೋ, ಆ ಎಲ್ಲಾ ಬೈಕ್ ಮತ್ತು ಕಾರ್ ಗಳ ವಿಚಾರದಲ್ಲಿ ಸರ್ಕಾರ ಆಗಾಗ ಹೊಸ ನಿಯಮಗಳನ್ನು ಜಾರಿಗೆ ತರುತ್ತಲೇ ಇರುತ್ತದೆ.. ಟ್ರಾಫಿಕ್ ತಡೆಗಟ್ಟುವಿಕೆ, ಡ್ರೈವ್ ಮಾಡುವವರ ರಕ್ಷಣೆ, ಪರಿಸರದ ಸಂರಕ್ಷಣೆ ಇದೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತದೆ. ಈ ಮೊದಲೇ ಬಹಳಷ್ಟು ನಿಯಮ ಬದಲಾವಣೆ ಆಗಿದ್ದು, ಇದೀಗ ಮತ್ತೊಂದು ಹೊಸ ನಿಯಮ ಜಾರಿಯಾಗಿದೆ. ಅದನ್ನು ಕೂಡ ಜನರು ಪಾಲಿಸಲೇಬೇಕಿದೆ.
ಈಗ ಜಾರಿಗೆ ತಂದಿರುವ ಹೊಸ ನಿಯಮ ಏನು ಎಂದರೆ, 2019ರ ಏಪ್ರಿಲ್ 1ಕ್ಕಿಂತ ಮೊದಲು ಹೊಸ ವಾಹನ ಕೊಂಡುಕೊಂಡು ರಿಜಿಸ್ಟರ್ ಮಾಡಿಸಿರುವವರಿಗೆ ಈ ಹೊಸ ನಿಯಮ ಆಗಿದ್ದು, ಇವರೆಲ್ಲರೂ ನವೆಂಬರ್ 17ರ ಒಳಗೆ High Security Registration Plate (HSRP) ಅನ್ನು ವಾಹನಕ್ಕೆ ಹಾಕಿಸಬೇಕು ಎಂದು ನಿಯಮವನ್ನು ಜಾರಿಗೆ ತರಲಾಗಿದೆ, ಈ ದಿನದ ಒಳಗೆ ನಿಮ್ಮ ವಾಹನಗಳಿಗೆ HSRP ಅಳವಡಿಸಬೇಕು. HSRP ಇಲ್ಲದೇ ವಾಹನಗಳು ರಸ್ತೆಗೆ ಬಂದರೆ 1000 ರೂಪಾಯಿಯವರೆಗು ದಂಡ ವಿಧಿಸಲಾಗುತ್ತದೆ..
HSRP ಅಳವಡಿಸುವುದರಿಂದ ವಾಹನ ಚಲನೆ ಮಾಡುವವರಿಗೆ ಹೆಚ್ಚಿನ ಅನುಕೂಲ ಆಗುತ್ತದೆ. HSRP ಇಂದ ಒಂದು ವಾಹನ ಕಾನೂನಿಗೆ ವಿರುದ್ಧವಾದ ಚಟುವಟಿಕೆ ಇಂದ ರಕ್ಷಿಸುವುದು ಮಾತ್ರವಲ್ಲದೆ, ವಾಹನ ಕಳೆದು ಹೋದರೆ ಟ್ರ್ಯಾಕ್ ಮಾಡುವುದಕ್ಕೂ ಸಹಾಯ ಮಾಡುತ್ತದೆ. ರಾಷ್ಟ್ರೀಯ ಭದ್ರತೆಯಲ್ಲಿ ಸಹ ಪ್ರಯೋಜನ ನೀಡುತ್ತದೆ. ರಾಷ್ಟ್ರೀಯ ಡೇಟಾ ಬೇಸ್ ನಲ್ಲಿ ವಾಹನದ ನಂಬರ್ ಇರುವುದರಿಂದ ಹೆಚ್ಚು ಅನುಕೂಲ ಆಗುತ್ತದೆ.
ಪ್ರಸ್ತುತ ನಮ್ಮ ದೇಶದ ಹಲವು ರಾಜ್ಯಗಳು ಈ ನಿಯಮವನ್ನು ಅನುಸರಿಸುತ್ತಾ ಬರುತ್ತಿದೆ. ನಮ್ಮ ರಾಜ್ಯದಲ್ಲಿ ಕೂಡ ಆಗಸ್ಟ್ ಇಂದ ಈ ನಿಯಮವನ್ನು ಜಾರಿಗೆ ತರಲಾಗಿದ್ದು, ಹೊಸ HSRP ಅಳವಡಿಸಬೇಕು ಎಂದು ಆದೇಶ ಹೊರಡಿಸಲಾಗಿದೆ. HSRP ಅಳವಡಿಸಲು ಸುಮಾರು 400 ರೂಪಾಯಿ ಖರ್ಚಾಗುತ್ತದೆ. ಒಂದು ವೇಳೆ ನೀವು ಇನ್ನು ಕೂಡ ನಿಮ್ಮ ವಾಹನಕ್ಕೆ HSRP ಹಾಕಿಸಿಲ್ಲ ಎಂದರೆ, ಆದಷ್ಟು ಬೇಗ ಹಾಕಿಸಿ..
ಮೊದಲಿಗೆ ನೀವು https://transport.karnataka.gov.in/ ಅಥವಾ
https://www.siam.in/ ಈ ವೆಬ್ಸೈಟ್ ಗೆ ಭೇಟಿ ನೀಡಿ. ಇಲ್ಲಿ HSRP ಆಪ್ಶನ್ ಸೆಲೆಕ್ಟ್ ಮಾಡಿ.
ಈಗ ನಿಮ್ಮ ವಾಹನಕ್ಕೆ ಸಂಬಂಧಪಟ್ಟ ಎಲ್ಲಾ ಮಾಹಿತಿಯನ್ನು ನೀಡಿ, ಜೊತೆಗೆ ನಿಮಗೆ ಸರಿಹೊಂದುವಂಥ ಡೀಲರ್ ಅನ್ನು ಆಯ್ಕೆ ಮಾಡಿ.
ಇದಕ್ಕಾಗಿ ನೀವು ಆನ್ಲೈನ್ ಮೂಲಕ ಹಣ ಪಾವತಿ ಮಾಡಬೇಕು. ಬಳಿಕ ನಿಮ್ಮ ಮೊಬೈಲ್ ನಂಬರ್ ಗೆ OTP ಬರುತ್ತದೆ. OTP ಎಂಟರ್ ಮಾಡಿದ ನಂತರ, ನಿಮಗೆ ಸರಿಹೊಂದುವ ದಿನಾಂಕ, ಸಮಯ ಮತ್ತು ಜಾಗ ಇಷ್ಟನ್ನು ಆಯ್ಕೆ ಮಾಡಿ, ಆ ದಿನ ಸ್ಥಳಕ್ಕೆ ಹೋಗಿ HSRP ಅಳವಡಿಸಿ.
ಶೋರೂಮ್ ಅಥವಾ ಡೀಲರ್ ಗಳ ಬಳಿ ಕೂಡ ನೀವು HSRP ಅಳವಡಿಸಿಕೊಳ್ಳಬಹುದು. ಇದರ ಲಿಸ್ಟ್ ಸಹ ವೆಬ್ಸೈಟ್ ಗಳಲ್ಲಿ ಸಿಗಲಿದ್ದು, ನೀವು ಆಯ್ಕೆ ಮಾಡಿಕೊಳ್ಳಬಹುದು.
HSRP ಹಾಕಿಸಿಕೊಳ್ಳಲಿಲ್ಲ ಎಂದರೆ, ಮುಂದೊಂದು ದಿನ ವಾಹನ ಮಾರಾಟ ಮಾಡುವಾಗ ಕೂಡ ನಿಮಗೆ ತೊಂದರೆ ಆಗಬಹುದು. ಹಾಗಾಗಿ ಎಲ್ಲಾ ಬೈಕ್ ಮತ್ತು ಕಾರ್ ಗಳ ನಂಬರ್ ಪ್ಲೇಟ್ ಬದಲಾಯಿಸಿ, HSRP ಅಳವಡಿಸಿ.