3 lakh vehicle subsidy: ಈಗ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರುವ ಮೊದಲೇ ಜನರಿಹೇ 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರುವ ಭರವಸೆ ನೀಡಿತ್ತು. ಡ್ಸ್ ರೀತಿ ಐದು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. 4 ಯೋಜನೆಗಳು ಜಾರಿಗೆ ಬಂದಿದ್ದು, 5ನೇ ಯೋಜನೆ ಈ ವರ್ಷಾಂತ್ಯಕ್ಕೆ ಜಾರಿಗೆ ಬರಲಿದೆ. ಈ 5 ಯೋಜನೆಗಳು ಮಾತ್ರವಲ್ಲದೆ ಇನ್ನು ಕೆಲವು ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತರುತ್ತಿದೆ.

ಗೃಹ ಆರೋಗ್ಯ ಯೋಜನೆಯನ್ನು ಜಾರಿಗೆ ತರುವುದಾಗಿ ಕಾಂಗ್ರೆಸ್ ಸರ್ಕಾರ ತಿಳಿಸಿದೆ..ಅದು ಮಾತ್ರವಲ್ಲದೆ ಇದೀಗ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಜನರಿಗೆ ವಾಹನ ಖರೀದಿ ಮಾಡುವುದಕ್ಕಾಗಿ ಬರೋಬ್ಬರಿ 3 ಲಕ್ಷ ರೂಪಾಯಿಯವರೆಗು ಸಬ್ಸಿಡಿ ನೀಡುವುದಾಗಿ ಸರ್ಕಾರ ಮಾಹಿತಿ ನೀಡಿದೆ. ಸರ್ಕಾರದಿಂದಲೇ ಅಧಿಕೃತ ಮಾಹಿತಿ ಸಿಕ್ಕಿದೆ.

ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು, ಉದ್ಯೋಗದ ಕಾರಣಕ್ಕೆ ಆಟೋ, ಟ್ಯಾಕ್ಸಿ, ಅಥವಾ ಗೂಡ್ಸ್ ಗೆ ಸಂಬಂಧಿಸಿದ ಹಾಗೆ 4 ಚಕ್ರದ ವಾಹನಗಳು ಅಥವಾ 3 ಚಕ್ರದ ವಾಹನಗಳನ್ನು ಖರೀದಿ ಮಾಡಬೇಕು ಎಂದುಕೊಂಡಿದ್ದರೆ, ಅಂಥವರಿಗೆ ಖರೀದಿ ಮಾಡುವ ವಾಹನದ ಮೇಲೆ 50% ಸಬ್ಸಿಡಿ ಅಥವಾ 3 ಲಕ್ಷದವರೆಗು ಸಬ್ಸಿಡಿ ಸಿಗುತ್ತದೆ. ಇದನ್ನು ಸರ್ಕಾರವೇ ಕೊಡಲಿದೆ.

ಇನ್ನು ಬೇಕಾಗುವ ಹಣಕ್ಕಾಗಿ ಯಾವ ಬ್ಯಾಂಕ್ ಇಂದ ಲೋನ್ ಪಡೆಯಬಹುದು ಎಂದು ಸರ್ಕಾರವೇ ಆ ವ್ಯಕ್ತಿಗೆ ಸಹಾಯ ಮಾಡುತ್ತದೆ. ಈ ಸೌಲಭ್ಯ ಪಡೆಯುವುದಕ್ಕಾಗಿ ನೀವು ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು ಏನು ಎನ್ನುವುದನ್ನು ಈಗ ತಿಳಿಸಿಕೊಡುತ್ತೇವೆ ನೋಡಿ..

*ಅರ್ಜಿ ಹಾಕುವವರು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವ್ಯಕ್ತಿಯೇ ಆಗಿರಬೇಕು
*ಕರ್ನಾಟಕದಲ್ಲಿ ವಾಸ ಮಾಡುವವರೇ ಆಗಿರಬೇಕು
*ವಯಸ್ಸು 18 ರಿಂದ 55 ವರ್ಷಗಳ ಒಳಗೆ ಇರಬೇಕು
*ಇವರ ವಾರ್ಷಿಕ ಆದಾಯ 4.5 ಲಕ್ಷಕ್ಕಿಂತ ಕಡಿಮೆ ಇರಬೇಕು
*ಇವಫ್ ಕುಟುಂಬದಲ್ಲಿರುವ ಯಾರು ಕೂಡ ಸರ್ಕಾರಿ ಕೆಲಸದಲ್ಲಿ ಇರಬಾರದು.

3 lakh vehicle subsidy

ಈ ವಿಚಾರದ ರಾಜ್ಯದ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರು ಮಾತನಾಡಿ, “ಒಬ್ಬ ಡ್ರೈವರ್, ಡ್ರೈವರ್ ಆಗಿಯೇ ಇದ್ದುಬಿಡಬಾರದು. ಆತ ಓನರ್ ಕೂಡ ಆಗಬೇಕು. ಆ ವ್ಯಕ್ತಿ ತಮಗೆ ಇಷ್ಟ ಆಗುವ 4 ಚಕ್ರದ ವಾಹನ 8 ಲಕ್ಷದ ಒಳಗೆ ಇರುವಂಥ ವಾಹನವನ್ನು ಖರೀದಿ ಮಾಡಬಹುದು. ಸರ್ಕಾರದಿಂದ 3 ಲಕ್ಷದವರೆಗು ಸಬ್ಸಿಡಿ ಸಿಗುತ್ತದೆ. ಸಾಲ ಪಡೆವುವುದಕ್ಕೆ ಕೂಡ ನಮ್ಮಿಂದ ಸಹಾಯ ಸಿಗುತ್ತದೆ.

ಕಾರ್ ನ ಬೆಲೆ ಎಷ್ಟಿರುತ್ತದೆಯೋ ಅಷ್ಟರಲ್ಲಿ 10% ಹಣವನ್ನು ಮೊದಲೇ ಪಾವತಿ ಮಾಡಬೇಕಾಗುತ್ತದೆ. ಇದಕ್ಕೆ ಉದಾಹರಣೆ, ಕಾರ್ ಬೆಲೆ 8 ಲಕ್ಷ ಎಂದರೆ ₹80,000 ಡೌನ್ ಪೇಮೆಂಟ್ ರೀತಿ ಮಾಡಬೇಕಾಗುತ್ತದೆ. ನಾವು 3 ಲಕ್ಷ ಸಬ್ಸಿಡಿ ಕೊಡುತ್ತೇವೆ. ಇನ್ನುಳಿದ ಹಣಕ್ಕೆ ಬ್ಯಾಂಕ್ ನಲ್ಲಿ ಸಾಲ ಪಡೆಯಲು ಸಹಾಯ ಸಿಗುತ್ತದೆ. ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಇದ್ದಾಗ ಈ ಯೋಜನೆ ಜಾರಿಯಲ್ಲಿತ್ತು, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಈ ಯೋಜನೆಯನ್ನು ನಿಲ್ಲಿಸಲಾಯಿತು..”ಎಂದು ಜಮೀರ್ ಅಹ್ಮದ್ ಖಾನ್ ಅವರು ಹೇಳಿದ್ದಾರೆ.

ಇತ್ತ ಬಿಜೆಪಿ ಸರ್ಕಾರ ಈ ವಿಚಾರವಾಗಿ ಕಾಂಗ್ರೆಸ್ ಸರ್ಕಾರವನ್ನು ಟೀಕೆ ಮಾಡುತ್ತಿದೆ. ತೇಜಸ್ವಿ ಸೂರ್ಯ ಅವರು ಕಾಂಗ್ರೆಸ್ ಸರ್ಕಾರವು ಧರ್ಮದ ಉದ್ದೇಶದಿಂದ ಈ ಥರದ ಯೋಜನೆಯನ್ನು ಜಾರಿಗೆ ತಂದಿದೆ ಎಂದರೆ.. “ನಾಚಿಕೆಗೇಡಿತನಕ್ಕೆ ಹೆಸರಿದ್ದರೆ ಖಂಡಿತಾ ಕಾಂಗ್ರೆಸ್ ಎಂದು ಕರೆಯಬಹುದಿತ್ತು. ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಟಿಪ್ಪು ಸುಲ್ತಾನ್ ಸರ್ಕಾರ ಈಗ ತನ್ನ ಮೂಲ ಮತದಾರರಿಗೆ ದೊಡ್ಡ ಪ್ರಮಾಣದ ಯೋಜನೆ ತರುವ ಮೂಲಕ ತನ್ನ ಕೆಲಸ ಮುಂದುವರೆಸಿದೆ. ಸುಳ್ಳು ಮತ್ತು ಭರವಸೆಗಳನ್ನು ನಂಬಿ ಕೋಮುವಾದಿ ಕಾಂಗ್ರೆಸ್‌ ಗೆ ಮತ ಹಾಕಿದ ಬಹುಸಂಖ್ಯಾತರಿಗೆ ಮಾಡಿದ ದೊಡ್ಡ ಅವಮಾನ.” ಎಂದು ಸಿ.ಟಿ. ರವಿ ಅವರು ಟ್ವೀಟ್ ಮಾಡಿದ್ದಾರೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!