Gruhalakshmi scheme about DBT Status Check: ಕರ್ನಾಟಕದಲ್ಲಿ ಸರ್ಕಾರ ನಡೆಸುತ್ತಿರುವ ಸಿದ್ದರಾಮಯ್ಯನವರ ಸರ್ಕಾರ ಚುನಾವಣೆಯ ಸಮಯದಲ್ಲಿ ಹೇಳಿದ ಮಾತಿನ ಪ್ರಕಾರ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಎನ್ನುವ ಯೋಜನೆ ಮೂಲಕ ತಿಂಗಳಿಗೆ 2000 ರೂಪಾಯಿ ಹಣವನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುತ್ತೇವೆ ಎಂದು ಹೇಳಿದ್ದರು ಅದರಂತೆ ಗ್ರಹಲಕ್ಷ್ಮಿ ಯೋಜನೆಗೆ ಚಾಲನೆ ದೊರೆತಿದ್ದು ಕೆಲವು ಮಹಿಳೆಯರಿಗೆ ಮಾತ್ರ ಖಾತೆಗೆ ಹಣ ಬಂದಿದ್ದು ಉಳಿದ ಮಹಿಳೆಯರಿಗೆ ಹಣ ಬಂದಿಲ್ಲ ಕೋಟಿ ಸಂಖ್ಯೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಗಳು ಹರಿದು ಬಂದಿವೆ ಮುಂದಿನ ದಿನಗಳಲ್ಲಿ ಗ್ರಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹಣ ದೊರೆಯಬಹುದು ಅದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ಗ್ರಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಮಹಿಳೆಯರಲ್ಲಿ 69 ಲಕ್ಷ ಮಹಿಳೆಯರಿಗೆ ಹಣ ಜಮಾ ಆಗಬೇಕಾಗಿದೆ. ಈಗಾಗಲೆ ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಪ್ರತಿದಿನ ಬೆಳಗಾದರೆ ಬ್ಯಾಂಕ್ ಮುಂದೆ ಸಾಲಾಗಿ ನಿಲ್ಲುತ್ತಿದ್ದಾರೆ ತಮ್ಮ ಖಾತೆಗೆ ಹಣ ಬಂತೊ ಇಲ್ಲವೊ ಎಂಬುದನ್ನು ಚೆಕ್ ಮಾಡಲು. 25,000 ಮಹಿಳೆಯರಿಗೆ ಈ ತಿಂಗಳಲ್ಲಿಯೂ ಸಹ ಹಣ ಜಮಾ ಆಗುವುದು ಅನುಮಾನ ಎಂದು ಹೇಳುತ್ತಿದ್ದಾರೆ ಏಕೆಂದರೆ ಅರ್ಜಿ ಸಲ್ಲಿಸಿದ ಯಜಮಾನಿಯ ವಿವರ ಅಪೂರ್ಣವಾಗಿದೆ ಹಾಗೆ ಆಧಾರ ಹಾಗೂ ಬ್ಯಾಂಕ್ ಕೆವೈಸಿ ಲಿಂಕ್ ಮಾಡದೆ ಇರುವುದು ಕೂಡ ಇದಕ್ಕೆ ಕಾರಣವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿಯನ್ನು ಕೊಟ್ಟಿದೆ.
ಇಲಾಖೆಯ ಮಾಹಿತಿಯ ಪ್ರಕಾರ ಸ್ವಲ್ಪ ದಿನಗಳ ಕಾಲ ಮಹಿಳೆಯರು ಕಾಯುವುದು ಸೂಕ್ತ ಹಾಗೂ ಆಧಾರ್ ಹಾಗೂ ಬ್ಯಾಂಕ್ ಕೆವೈಸಿ ಲಿಂಕ್ ಆಗದೆ ಇರುವವರು ಈಗಲೆ ಲಿಂಕ್ ಮಾಡಿಕೊಳ್ಳುವುದು ಉತ್ತಮ. ಗ್ರಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಮಹಿಳೆಯರಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ಹಣ ಬರುತ್ತದೆ ಎಂದು ಹೇಳುತ್ತಾರೆ ಆದರೆ ಇನ್ನೂ ಬಂದಿಲ್ಲ ಎನ್ನುವುದು ಹಲವರ ಪ್ರಶ್ನೆಯಾಗಿದೆ. ಮನೆಯಲ್ಲಿ ಮೊಬೈಲ್ ನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಅರ್ಜಿಯ ಸ್ಟೇಟಸ್ ಅನ್ನು ನೋಡಬಹುದು.
Gruhalakshmi scheme about DBT Status Check
ಮೊಬೈಲ್ ನಲ್ಲಿ ಪ್ಲೆ ಸ್ಟೋರ್ ನಲ್ಲಿ ಡಿಬಿಟಿ ಕರ್ನಾಟಕ ಎಂದು ಸರ್ಚ್ ನಲ್ಲಿ ಟೈಪ್ ಮಾಡದರೆ ಆ್ಯಪ್ ಅನ್ನು ಇನ್ ಸ್ಟಾಲ್ ಮಾಡಿಕೊಳ್ಳಬೇಕು ಮೊದಲಿಗೆ ಆಧಾರ್ ನಂಬರ್ ಅನ್ನು ಕೇಳುತ್ತದೆ ಗ್ರಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಮಹಿಳೆಯ ಆಧಾರ್ ನಂಬರ್ ಅನ್ನು ಹಾಕಬೇಕು ನಂತರ ಆಧಾರ್ ನೋಂದಾಯಿತ ಮೊಬೈಲ್ ನಂಬರ್ ಗೆ ಒಟಿಪಿ ಬರುತ್ತದೆ ನಂತರ ಮೊಬೈಲ್ ನಂಬರ್ ಕೇಳುತ್ತದೆ ಮೊಬೈಲ್ ನಂಬರ್ ಅನ್ನು ಎಂಟ್ರಿ ಮಾಡಬೇಕು.
ನಂತರ ಗ್ರಹಲಕ್ಷ್ಮಿ ಯೋಜನೆಗೆ ಸಲ್ಲಿಸಿದ ಅರ್ಜಿ ಸಂಖ್ಯೆಯನ್ನು ಹಾಕಿ ಸ್ಟೇಟಸ್ ನೋಡಬಹುದು. ಇದಲ್ಲದೆ ಸೇವಾಸಿಂಧು ವೆಬ್ಸೈಟ್ ನಲ್ಲಿಯೂ ಪರಿಶೀಲನೆ ಮಾಡಬಹುದು. ಗ್ರಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಹಣ ಬರದೆ ಇರುವವರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆಯೆ ಇಲ್ಲವೆ ಎಂಬುದನ್ನ ನೋಡಿಕೊಳ್ಳಬೇಕು ಏಕೆಂದರೆ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಸರ್ಕಾರ ಎರಡು ಸಾವಿರ ರೂಪಾಯಿ ಹಣವನ್ನು ಜಮಾ ಮಾಡುತ್ತದೆ.
ಇನ್ನು ಈಗಾಗಲೆ ಹೇಳಿದಂತೆ ಮೊಬೈಲ್ ನಲ್ಲಿಯೆ ಸರ್ಕಾರದ ಲೀಸ್ಟ್ ನಲ್ಲಿ ನಮ್ಮ ಹೆಸರು ಇದೆಯೊ ಇಲ್ಲವೊ ಎಂಬುದನ್ನು ನೋಡಬಹುದು. ಒಟ್ಟಿನಲ್ಲಿ ಗ್ರಹಲಕ್ಷ್ಮಿ ಯೋಜನೆಯ ಹಣ ಬರುವುದರ ಬಗ್ಗೆ ಗೂಗಲ್ ನಲ್ಲಿ ಸುಲಭವಾಗಿ ತಿಳಿದುಕೊಳ್ಳಿ ಈ ಮಾಹಿತಿ ಉಪಯುಕ್ತವಾಗಿದೆ ಎಲ್ಲರಿಗೂ ತಿಳಿಸಿ.