Gruhalakshmi Scheme List: ಕರ್ನಾಟಕ ರಾಜ್ಯವನ್ನು ಆಳುತ್ತಿದ್ದ ಕಾಂಗ್ರೆಸ್ ಸರ್ಕಾರ ನುಡಿದಂತೆ ಮಹಿಳೆಯರಿಗೆ ಅವರ ಸ್ವಾವಲಂಬನೆಗೆ ಗ್ರಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿದೆ ಆದರೆ ಕೆಲವು ಮಹಿಳೆಯರಿಗೆ ಮಾತ್ರ ಗ್ರಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮಾ ಆಗಿದ್ದು ಉಳಿದ ಮಹಿಳೆಯರಿಗೆ ಹಣ ಬಂದಿಲ್ಲ. ಸರ್ಕಾರ ಬಿಟ್ಟಿರುವ ಲೀಸ್ಟ್ ನಲ್ಲಿ ಇರುವ ಹೆಸರಿನ ಮಹಿಳೆಯರಿಗೆ ತಪ್ಪದೆ ಹಣ ಬರುತ್ತದೆ ಲೀಸ್ಟ್ ನಲ್ಲಿ ಇಲ್ಲದೆ ಇರುವವರಿಗೆ ಹಣ ಬರುವುದಿಲ್ಲ ಹಾಗಾದರೆ ಲೀಸ್ಟ್ ನಲ್ಲಿ ನಮ್ಮ ಹೆಸರು ಇದೆಯೊ ಇಲ್ಲವೋ ಎಂಬುದನ್ನು ತಿಳಿದಿಕೊಳ್ಳುವ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಬಹಳಷ್ಟು ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ ಆದರೆ ಕೆಲವೆ ಕೆಲವು ಮಹಿಳೆಯರಿಗೆ ಮಾತ್ರ ಅವರ ಖಾತೆಗೆ 2,000 ರೂಪಾಯಿ ಹಣ ಬಂದಿದೆ. ಸರ್ಕಾರದ ಲೀಸ್ಟ್ ನಲ್ಲಿ ಯಾರ ಹೆಸರು ಇರುತ್ತದೆಯೊ ಅವರಿಗೆ ತಡವಾದರೂ ಎರಡು ಸಾವಿರ ರೂಪಾಯಿ ಹಣ ಬರುತ್ತದೆ ಲೀಸ್ಟ್ ನಲ್ಲಿ ಇಲ್ಲದೆ ಇರುವವರು ಗ್ರಹಲಕ್ಷ್ಮೀಯೋಜನೆಯ ಹಣ ಬರುವುದಿಲ್ಲ ಲೀಸ್ಟ್ ನಲ್ಲಿ ಹೆಸರು ಇದೆಯೊ ಇಲ್ಲವೊ ಎಂದು ಮೊಬೈಲ್ ನಲ್ಲಿ ನೋಡಿಕೊಳ್ಳಬಹುದು. ಮೊಬೈಲ್ ನಲ್ಲಿ ಗೂಗಲ್ ಅಥವಾ ಕ್ರೋಮ್ ಗೆ ಹೋಗಿ ಆಹಾರ ಎಂದು ಟೈಪ್ ಮಾಡಿದರೆ ಇ ಸರ್ವಿಸ್ ಎಂದು ಬರುತ್ತದೆ ಅದರ ಕೆಳಗೆ ದ ಡಿಪಾರ್ಟ್ಮೆಂಟ್ ಆಫ್ ಫುಡ್ ಸಿವಿಲ್ ಸಪ್ಲೈಸ್ ಎಂದು ಇದೆ ಅದನ್ನು ಕ್ಲಿಕ್ ಮಾಡಬೇಕು.
Gruhalakshmi Scheme List
ನಂತರ ಒಂದು ಪೇಜ್ ಓಪನ್ ಆಗುತ್ತದೆ ಪೇಜ್ ನ ಬಲಗಡೆ ಸಣ್ಣ ಬಾಕ್ಸ್ ಇದೆ ಅದನ್ನು ಕ್ಲಿಕ್ ಮಾಡಿದಾಗ ಕೆಲವು ಆಪ್ಷನ್ಸ್ ಗಳು ಬರುತ್ತದೆ ಅವುಗಳಲ್ಲಿ ಈ ಸೇವೆಗಳು ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು ಅದೊಂದು ಪೇಜ್ ಓಪನ್ ಆಗುತ್ತದೆ ಸೈಡ್ ನಲ್ಲಿ ಮೂರು ಡಾಟ್ ಇದೆ ಅದನ್ನು ಕ್ಲಿಕ್ ಮಾಡಿ ಮತ್ತೆ ಒಂದಷ್ಟು ಆಪ್ಷನ್ಸಗಳು ಬರುತ್ತವೆ ಅವುಗಳಲ್ಲಿ ಇ ಪಡಿತರ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು ನಂತರ ಕೆಳಗಡೆ ಸ್ಕ್ರೋಲ್ ಮಾಡುತ್ತಾ ಹೋದಂತೆ ಹಳ್ಳಿಪಟ್ಟಿ ಎಂಬ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಬೇಕು ಆಗ ಒಂದು ಪಟ್ಟಿ ಓಪನ್ ಆಗುತ್ತದೆ ಅದರಲ್ಲಿ ಜಿಲ್ಲೆ ತಾಲೂಕು ಪಂಚಾಯತ್ ಯಾವ ಹಳ್ಳಿ ಎಂಬುದನ್ನು ನಾವು ನಮ್ಮ ಜಿಲ್ಲೆ ತಾಲೂಕು ಹಳ್ಳಿಗಳನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು ನಂತರ ಕೆಳಗೆ ಗೊ ಎಂಬ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿದಾಗ ಒಂದು ಲೀಸ್ಟ್ ಓಪನ್ ಆಗುತ್ತದೆ, ಆ ಲೀಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೊ ಇಲ್ಲವೊ ಎಂಬುದನ್ನು ನೋಡಿಕೊಳ್ಳಬೇಕು ಸುಮಾರು ಲೀಸ್ಟ್ ಗಳು ಇರುತ್ತವೆ ಕೆಳಗಡೆ ಒಂದು ಎರಡು ಮೂರು ನಾಲ್ಕು ಎಂದು ಸಂಖ್ಯೆ ಇರುತ್ತದೆ.
ಒಂದಾದ ಮೇಲೆ ಒಂದನ್ನು ಕ್ಲಿಕ್ ಮಾಡುತ್ತಾ ಹೋದಂತೆ ಪೇಜ್ ಗಳು ಓಪನ್ ಆಗುತ್ತಾ ಹೋಗುತ್ತದೆ ಯಾವ ಪೇಜ್ ನಲ್ಲಿ ನಿಮ್ಮ ಹೆಸರು ಇದೆ ಎಂದು ನೋಡಿಕೊಳ್ಳಬಹುದು. ಈ ಲೀಸ್ಟ್ ನಲ್ಲಿ ಹೆಸರು ಇರುವ ಮಹಿಳೆಯರಿಗೆ ತಪ್ಪದೆ ಹಣ ಬರುತ್ತದೆ ಆದರೆ ಈ ಲೀಸ್ಟ್ ನಲ್ಲಿ ಹೆಸರು ಇಲ್ಲದೆ ಇರುವವರ ಖಾತೆಗೆ ಹಣ ಬರುವುದಿಲ್ಲ. ಒಟ್ಟಿನಲ್ಲಿ ಸುಲಭವಾಗಿ ಮನೆಯಲ್ಲಿಯೆ ಮೊಬೈಲ್ ನಲ್ಲಿ ಲೀಸ್ಟ್ ಅನ್ನು ನೋಡಿಕೊಳ್ಳಬಹುದು ಹೆಸರು ಇಲ್ಲವೆಂದರೆ ಮುಂದಿನ ಕ್ರಮಗಳ ಬಗ್ಗೆ ಯೋಚಿಸಬಹುದು. ಈ ಮಾಹಿತಿಯನ್ನು ನೀವು ಓದಿ ಓದಿದ ನಂತರ ತಪ್ಪದೆ ನಿಮ್ಮ ಸ್ನೇಹಿತರಿಗೆ, ಸಂಬಂಧಿಕರಿಗೆ ತಿಳಿಸಿ.