Awanish Sharan IAS: ಹುಟ್ಟುವ ಪ್ರತಿ ಮಗು ಕೈಗೂಸಾಗಿದ್ದಾಗ ತಾಯಿಯ ಆರೈಕೆ ಮತ್ತು ಅಗತ್ಯ ಬಹಳ ಮುಖ್ಯ. ತಾಯಿ ಆದವಳಿಗೆ ಮಗುವಿನ ಬೇಕು ಬೇಡಗಳು, ಮಗುವಿಗೆ ಏನು ಕೊಡಬೇಕು ಎಂದು ಕೊಡಬಾರದು ಎನ್ನುವ ಈ ಎಲ್ಲಾ ವಿಚಾರಗಳು ಸೂಕ್ಷ್ಮತೆಗಳು ಗೊತ್ತಿರುತ್ತದೆ. ಮಗುವಿನ ಜೊತೆಗೆ 24 ಗಂಟೆಗಳ ಕಾಲ ಇದ್ದು ಮಗುವಿನ ಕುರಿತ ಈ ವಿಚಾರಗಳನ್ನು ನೋಡಿಕೊಳ್ಳುವಳು ತಾಯಿ. ಆದರೆ ತಂದೆಯ ವಿಚಾರದಲ್ಲಿ ಹಾಗಲ್ಲ. ತಂದೆಯಾದವನು ಮಗುವಿನ ಜೊತೆಗೆ ಸಮಯ ಕಳೆಯುವುದು ಕಡಿಮೆ.
ಮಗುವಿನ ಜೊತೆಗೆ ಅಷ್ಟೇನು ಅಟ್ಯಾಚ್ಮೆಂಟ್ ಕೂಡ ತಂದೆಗೆ ಇರುವುದಿಲ್ಲ. ಇದು ಸಾಮಾನ್ಯವಾಗಿ ನಾವು ನೋಡುವ ಘಟನೆಗಳು ಆದರೆ ಇಂದು ನಾವು ನಿಮಗೆ ಒಬ್ಬ ಅಪರೂಪದ ತಂದೆಯ ಬಗ್ಗೆ ಹೇಳಲಿದ್ದೇವೆ. ಈ ತಂದೆ ತನ್ನ ಮಗುವನ್ನು ಪ್ರತಿಕ್ಷಣವೂ ಕಾಳಜಿ ವಹಿಸಿ ನೋಡಿಕೊಳ್ಳುತ್ತಿದ್ದಾರೆ. ಮಗುವಿನ ಬೇಕು ಬೇಡಗಳ ಬಗ್ಗೆ ಅತ್ಯಂತ ಕಾಳಜಿ ವಹಿಸುತ್ತಿದ್ದಾರೆ. ಈ ಮಗುವಿನ ತಂದೆ ಒಂದು ಕಾಲೇಜಿನಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಕಾಲೇಜಿನಲ್ಲಿ ಪಾಠ ಮಾಡುವುದರ ಜೊತೆಗೆ ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿ ಕೂಡ ಇವರ ಮೇಲಿದೆ.
ಹಾಗಾಗಿ ಇವರು ತಾವು ಕೆಲಸ ಮಾಡುತ್ತಿರುವ ಜಾಗಕ್ಕೆ ಮಗುವನ್ನು ಕೂಡ ಕರೆದುಕೊಂಡು ಹೋಗುತ್ತಾರೆ. ಪಾಠ ಮಾಡುವ ಜೊತೆಗೆ ಮಗುವನ್ನು ಕೂಡ ನೋಡಿಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ತಾಯಿಯರು ಈ ರೀತಿ ಮಾಡುತ್ತಾರೆ, ಕೆಲಸ ಮಾಡುವ ಜಾಗಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ, ಆದರೆ ಇಲ್ಲಿ ತಂದೆ ಈ ರೀತಿ ಮಾಡಿದ್ದಾರೆ. ತಾಯಿಯ ಹಾಗೆ ಮಗುವಿನ ಪ್ರತಿ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಿದ್ದಾರೆ.
Awanish Sharan IAS
ಈ ತಂದೆ ಕಾಲೇಜಿನಲ್ಲಿ ಮಗುವನ್ನು ಎತ್ತಿಕೊಂಡು ಜೊತೆಗೆ ಕ್ಲಾಸ್ ನಲ್ಲಿ ಪಾಠ ಮಾಡುತ್ತಿರುವ ಫೋಟೋಗಳು ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ಈ ತಂದೆಯನ್ನು ನೋಡಿ ಭಾವುಕರಾಗಿದ್ದಾರೆ. ಇನ್ನು ಹಲವರು ಇವರಿಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಆದರೆ ಈ ತಂದೆ ಯಾಕೆ ಹೀಗೆ ಮಾಡುತ್ತಿದ್ದಾರೆ? ಮಗುವನ್ನು ಕಾಲೇಜಿಗೆ ಯಾಕೆ ಕರೆದುಕೊಂಡು ಬಂದಿದ್ದಾರೆ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದರ ಹಿಂದೆಯೂ ಒಂದು ಭಾವನಾತ್ಮಕ ಕಥೆಯಿದೆ.
ಅಸಲಿ ವಿಷಯ ಏನು ಎಂದರೆ, ಈಗ ಈ ಮಗುವಿನ ತಾಯಿ ಬದುಕಿಲ್ಲ. ಮಗು ಹುಟ್ಟಿದ ನಂತರ ತಾಯಿ ತೀರಿಹೋದರು, ಹಾಗಾಗಿ ಮಗುವಿನ ಪೂರ್ತಿ ಜವಾಬ್ದಾರಿ ತಂದೆಯ ಮೇಲಿದ್ದು, ಈ ತಂದೆ ತಾಯಿಯ ಹಾಗೆ ತಮ್ಮ ಮಗುವನ್ನು ಜೋಪಾನವಾಗಿ ನೋಡಿಕೊಳ್ಳುತ್ತಿದ್ದಾರೆ. ಕೆಲಸದ ಜೊತೆಗೆ ಮಗುವನ್ನು ನೋಡಿಕೊಂಡು ಜೀವನ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಕೂಡ ಒಬ್ಬ ದೊಡ್ಡ ವ್ಯಕ್ತಿಯೇ ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಈ ವಿಡಿಯೋವನ್ನು ಶೇರ್ ಮಾಡಿದರು.
“ಮಗುವಿಗೆ ಜನ್ಮ ನೀಡುತ್ತಲೇ ತಾಯಿಯ ನಿಧನವಾಯಿತು. ಇಂಥ ಪರಿಸ್ಥಿತಿಯಲ್ಲಿ ತಂದೆಯು ತನ್ನ ಮಗುವಿನ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ, ಅದರ ಜೊತೆಗೆ ಕಾಲೇಜ್ ಮಕ್ಕಳ ಅಭ್ಯಾಸ ಸಹ ತೆಗೆದುಕೊಳ್ಳುತ್ತಿದ್ದಾರೆ” ಎಂದು ಅವರು ಕ್ಯಾಪ್ಶನ್ ಬರೆದಿದ್ದರು. ಇದೀಗ ಈ ವಿಡಿಯೋ ಮತ್ತು ಫೋಟೋ ನೋಡಿದ ನೆಟ್ಟಿಗರು, ಇವರೇ ನಿಜವಾದ ಹೀರೋ ಎನ್ನುತ್ತಿದ್ದಾರೆ. ಮನಕಲುಕುವ ಈ ವಿಡಿಯೋ ಜನರ ಮನಸ್ಸು ಗೆದ್ದಿದೆ.