Stamp Duty Charges: ಬಹುತೇಕ ಎಲ್ಲಾ ಜನರು ಕೂಡ ಗಣ ಸಂಪಾದನೆ ಮಾಡುವುದು ಮುಂದಿನ ಭವಿಷ್ಯ ಚೆನ್ನಾಗಿರಬೇಕು ಎಂದು. ಅದಕ್ಕಾಗಿ ಸಂಪಾದನೆ ಮಾಡುವ ಹಣವನ್ನು ತಮ್ಮ ಭವಿಷ್ಯಕ್ಕಾಗಿ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಕೂಡಿಡುತ್ತಾರೆ. ಹೆಚ್ಚಿನ ಜನರು ಆಸ್ತಿ ಖರೀದಿ, ಬಂಗಾರ ಖರೀದಿ ಮಾಡಿ ಹಣವನ್ನು ಹೂಡಿಕೆ ಮಾಡುತ್ತಾರೆ. ಈ ಎರಡು ಕೂಡ ಮುಂದಿನ ಭವಿಷ್ಯಕ್ಕೆ ಒಳ್ಳೆಯ ಹೂಡಿಕೆ ಆಗಿರುತ್ತದೆ ಎನ್ನುವ ನಂಬಿಕೆ ಜನರಲ್ಲಿ ಇರುತ್ತದೆ. ಹೆಚ್ಚಿನ ಜನರು ಆಸ್ತಿ ಮೇಲೆ ಹೂಡಿಕೆ ಮಾಡಲು ಬಯಸುತ್ತಾರೆ.
ಏಕೆಂದರೆ ಭೂಮಿಗೆ ಒಂದಷ್ಟು ವರ್ಷಗಳ ಲಾಭ ನೀಡುವಂಥ ಬೆಲೆ ಬರುತ್ತದೆ. ಹಾಗಾಗಿ ಹೆಚ್ಚಿನ ಜನರು ಭೂಮಿ ಮೇಲೆ ಇನ್ವೆಸ್ಟ್ ಮಾಡುತ್ತಾರೆ. ಕೆಲವರು ಖಾಲಿ ಸೈಟ್ ಖರೀದಿ ಮಾಡಿದರೆ, ಇನ್ನು ಕೆಲವರು ಕಟ್ಟಿರುವ ಮನೆಗಳು ಅಥವಾ ಕೃಷಿ ಭೂಮಿಯನ್ನು ಖರೀದಿ ಮಾಡುತ್ತಾರೆ. ಇಂದು ಭೂಮಿ ಖರೀದಿ ಮಾಡಿ, ಮುಂದೊಂದು ದಿನ ಮಾರಾಟ ಮಾಡಿದರೆ ಉತ್ತಮ ಲಾಭ ಬರುತ್ತದೆ ಎನ್ನುವ ಉದ್ದೇಶದಿಂದ ಹೆಚ್ಚು ಜನರು ಖರೀದಿ ಮಾಡುತ್ತಾರೆ. ಈಗಿನ ಕಾಲದಲ್ಲಿ ಜನರ ಮೈಂಡ್ ಸೆಟ್ ಈ ರೀತಿ ಇದೆ.
ನೀವು ಯಾವುದೇ ಕಾರಣಕ್ಕೆ ಆಸ್ತಿ ಖರೀದಿ ಮಾಡಬಹುದು, ಅಥವಾ ಆಸ್ತಿ ನಿಮಗೆ ಪಿತ್ರಾರ್ಜಿತವಾಗಿ ಬಂದಿರಲುಬಹುದು, ಗಿಫ್ಟ್ ಆಗಿಯೂ ಬಂದಿರಬಹುದು. ಆದರೆ ಆ ಆಸ್ತಿಯನ್ನು ಪಡೆಯುವ ಮೊದಲು, ನಿಮ್ಮ ಹೆಸರಿಗೆ ರಿಜಿಸ್ಟರ್ ಮಾಡಿಸಿಕೊಳ್ಳುವ ಮೊದಲು ನೀವು ಕೆಲವು ವಿಚಾರಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಆಸ್ತಿ ಮಾರಾಟ, ಆಸ್ತಿ ಖರೀದಿ, ಆಸ್ತಿಯನ್ನು ನಿಮ್ಮ ಹೆಸರಿಗೆ ಮಾಡಿಕೊಳ್ಳುವುದು ಇದೆಲ್ಲದಕ್ಕೂ ಸರ್ಕಾರದ ಕೆಲವು ಕಾನೂನಿನ ನಿಯಮಗಳಿದ್ದು ಅವುಗಳನ್ನು ನೀವು ತಿಳಿದುಕೊಂಡಿರುವುದು ಒಳ್ಳೆಯದು.
ಏಕೆಂದರೆ ಈಗಿನ ಕಾಲದಲ್ಲಿ ಆಸ್ತಿ ಮಾರಾಟ ಮಾಡುತ್ತಿರುವವರು ಸುಳ್ಳು ದಾಖಲೆಗಳ ಮೂಲಕ ಸುಲಭವಾಗಿ ಮೋಸ ಮಾಡುತ್ತಾರೆ. ಇಂಥ ಪ್ರಕರಣಗಳು ಸಾಕಷ್ಟು ಕೇಳಿಬರುತ್ತಲೇ ಇರುತ್ತದೆ. ಹಗತಿ ಈ ರೀತಿಯ ಮೋಸ ಆಗುವುದನ್ನು ತಪ್ಪಿಸುವ ಸಲುವಾಗಿಯೇ ಆಸ್ತಿ ಖರೀದಿ ಮತ್ತು ಮಾರಾಟ ವಿಚಾರದಲ್ಲಿ ಸರ್ಕಾರ ಕೆಲವು ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮಗಳನ್ನು ಎಲ್ಲರೂ ತಿಳಿದುಕೊಂಡರೆ, ಆಸ್ತಿ ವಿಚಾರಕ್ಕೆ ಆಗುವ ಮೋಸದಿಂದ ಪಾರಾಗಬಹುದು.
Stamp Duty Charges
ಆಸ್ತಿ ಮಾರಾಟ ಮತ್ತು ಖರೀದಿ ವಿಚಾರಕ್ಕೆ ಸಂಬಂಧಿಸಿದ ಹಾಗೆ ನಮ್ಮ ದೇಶದಲ್ಲಿ ಮತ್ತು ರಾಜ್ಯದಲ್ಲಿ ಈಗಾಗಲೇ ಬಹಳಷ್ಟು ಕಾನೂನಿನ ನಿಯಮಗಳನ್ನು ಜಾರಿಗೆ ತರಲಾಗಿದೆ. ನಮ್ಮ ರಾಜ್ಯದಲ್ಲಿ ಕೂಡ ಈ ಥರ ಪ್ರಕರಣಗಳು ಅಂದರೆ ಸುಳ್ಳು ಹೆಸರಿನ ದಾಖಲೆ ನೀಡಿ ಆಸ್ತಿ ಮಾರಾಟ ಮಾಡುವ ಪ್ರಕರಣಗಳು ಜಾಸ್ತಿ ಆಗುತ್ತಿರುವ ಕಾರಣ, ಇದೆಲ್ಲದಕ್ಕೂ ಬ್ರೇಕ್ ಹಾಕಲು ಹೊಸ ನಿಯಮಗಳನ್ನು ಜಾರಿಗೆ ತರುವುದಾಗಿ ಹೊಸ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರು ಹೇಳಿದ್ದರು. ಹೀಗೆ ವಂಚನೆಯಿಂದ ಮಾರಾಟ ಮಾಡುತ್ತಿರುವುದು ರಿಜಿಸ್ಟ್ರೇಶನ್ ವೇಳೆ ಗೊತ್ತಾದರೆ ತಕ್ಷಣವೇ ಆ ರಿಜಿಸ್ಟ್ರೇಶನ್ ಕ್ಯಾನ್ಸಲ್ ಮಾಡಲಾಗುತ್ತದೆ ಎಂದು ಹೇಳಿದ್ದರು.
ಈ ನಿಯಮದ ಜೊತೆಗೆ ಈಗ ಮತ್ತೊಂದು ಹೊಸ ನಿಯಮವನ್ನು ಜಾರಿಗೆ ತರಲಾಗಿದೆ..ಪ್ರಸ್ತುತ ಈ ನಿಯಮದ ಬಗ್ಗೆ ಹೆಚ್ಚು ಸುದ್ದಿಯಾಗುತ್ತಿದ್ದು, ಇನ್ನುಮುಂದೆ ಆಸ್ತಿ ಮಾರಾಟ ಮತ್ತು ಖರೀದಿಗೆ ತಗಲುವ ಮುದ್ರಾಂಕ ಶುಲ್ಕ ಅಂದರೆ Stamp Duty Charges ಜಾಸ್ತಿ ಆಗುತ್ತದೆ ಎಂದು ಹೇಳಲಾಗುತ್ತಿದೆ. ಆಸ್ತಿ ರಿಜಿಸ್ಟ್ರೇಶನ್ ಸರ್ಕಾರದ ನಿಯಮಗಳ ಅನುಸಾರ ನಡೆಯಬೇಕಿರುವುದರಿಂದ ನೀವು ಈ ನಿಯಮಗಳನ್ನು ಪಾಲಿಸಲೇಬೇಕು, ಆದರೆ ಇನ್ನುಮುಂದೆ ಇದಕ್ಕಾಗಿ ಪಾವತಿ ಮಾಡುವ ಶುಲ್ಕದ ಮೊತ್ತ ಜಾಸ್ತಿ ಆಗಬಹುದು ಎಂದು ಸರ್ಕಾರ ಮಾಹಿತಿ ನೀಡಿದೆ.
2023ರ ವರ್ಷ ಮುಗಿಯುವ ವೇಳೆಗೆ ಹೊಸ ಶುಲ್ಕದ ಮೊತ್ತದ ಬಗ್ಗೆ ಪೂರ್ತಿ ಡೀಟೇಲ್ಸ್ ಸಿಗಲಿದೆ. ಈ ಹಿಂದೆ ಇದ್ದ ಶುಲ್ಕಕ್ಕಿಂತ 30 ಅಥವಾ 40% ಜಾಸ್ತಿ ಆಗಬಹುದು ಎಂದು ಹೇಳಲಾಗುತ್ತಿದೆ. ಹೊಸದಾಗಿ ಆಸ್ತಿ ಖರೀದಿ ಮಾಡುವವರಿಗೆ ಈ ಶುಲ್ಕ ಹೊರೆ ಆಗಬಹುದು, ಹಾಗಾಗಿ ನೀವು ಆಸ್ತಿ ಖರೀದಿ ವಿಷಯಕ್ಕೆ ಸಂಬಂಧಿಸಿದ ಕೆಲಸಗಳನ್ನು ಮುಗಿಸಿಕೊಳ್ಳುವುದು ಒಳ್ಳೆಯದು.