Aries Horoscope September Month 2023: ದ್ವಾದಶ ರಾಶಿಗಳಲ್ಲಿ ಪ್ರಮುಖ ರಾಶಿಯಾದ ಹಾಗೂ ಮೊದಲ ರಾಶಿಯಾದ ಮೇಷ ರಾಶಿಯಲ್ಲಿ ಜನಿಸಿರುವವರಿಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಯಾವೆಲ್ಲಾ ವಿಚಾರಗಳಲ್ಲಿ ಲಾಭ ನಷ್ಟ ಕಂಡು ಬರುತ್ತದೆ, ಆರೋಗ್ಯದ ವಿಚಾರದಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಹಾಗೂ ಸಮಸ್ಯೆಗಳಿಗೆ ಪರಿಹಾರವನ್ನು ಹೇಗೆ ಕಂಡುಕೊಳ್ಳಬೇಕು ಎಂಬಿತ್ಯಾದಿ ಉಪಯುಕ್ತ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಅಶ್ವಿನಿ ನಕ್ಷತ್ರದ 4ನೆ ಚರಣ, ಭರಣಿ ನಕ್ಷತ್ರದ ನಾಲ್ಕನೆ ಚರಣ, ಕೃತ್ತಿಕಾ ನಕ್ಷತ್ರದ ಒಂದನೆ ಚರಣದಲ್ಲಿ ಜನಿಸಿರುವವರು ಮೇಷ ರಾಶಿಯವರಾಗಿರುತ್ತಾರೆ. ಮೇಷ ರಾಶಿಯವರ ಅದೃಷ್ಟದ ಬಣ್ಣ ಬಿಳಿ ಹಾಗೂ ಕೆಂಪು ಬಣ್ಣವಾಗಿರುತ್ತದೆ. ಈ ರಾಶಿಯವರ ಅದೃಷ್ಟ ದೇವತೆ ಶಿವ ಹಾಗೂ ಆಂಜನೇಯ ಆಗಿರುತ್ತಾರೆ. ಮೇಷ ರಾಶಿಯವರಿಗೆ ಸಿಂಹ, ತುಲಾ, ಧನಸ್ಸು ರಾಶಿಗಳು ಮಿತ್ರ ರಾಶಿಗಳಾಗಿರುತ್ತಾರೆ, ಮಿಥುನ ಹಾಗೂ ಕನ್ಯಾ ರಾಶಿಗಳು ಶತ್ರು ರಾಶಿಗಳಾಗಿರುತ್ತಾರೆ. ಸಪ್ಟೆಂಬರ್ ತಿಂಗಳಿನ ಒಂದು, ಮೂರು, ಏಳು, ಒಂಭತ್ತು, ಹತ್ತು, ಇಪ್ಪತ್ತು ಇಪ್ಪತ್ತೊಂದು ದಿನಾಂಕಗಳು ಮೇಷ ರಾಶಿಯವರಿಗೆ ಶುಭ ಫಲ ತರುವ ದಿನಗಳಾಗಿರುತ್ತದೆ ಜೊತೆಯಲ್ಲಿ ಲಾಭ ತರುವ ದಿನಗಳೂ ಆಗಿರುತ್ತದೆ.
ಮೇಷ ರಾಶಿಯವರು ಕಷ್ಟಪಟ್ಟು ಮಾಡುವ ಕೆಲಸದಲ್ಲಿ ಬೇರೆಯವರು ಮೂಗು ತೂರಿಸುತ್ತಾರೆ, ಮೇಷ ರಾಶಿಯವರಿಗೆ ಬಹಳ ದಿನಗಳಿಂದ ಮಾಡುವ ಕೆಲಸದಲ್ಲಿ ತೃಪ್ತಿ ದೊರೆಯುತ್ತಿಲ್ಲ ಮನಸ್ಸಿನಲ್ಲಿ ಅಂತರ್ ಯುದ್ಧ ನಡೆಯುತ್ತಿರುತ್ತದೆ, ಮಾನಸಿಕ ನೆಮ್ಮದಿಗೆ ಧಕ್ಕೆ ತರುವಂತ ಸಮಸ್ಯೆಗಳು ಮೇಷ ರಾಶಿಯವರಿಗೆ ಕಾಡುತ್ತಿರುತ್ತದೆ. ಸುಲಭದ ಕೆಲಸವು ಮೇಷ ರಾಶಿಯವರಿಗೆ ಕಠಿಣವಾಗಿ ಪರಿಣಮಿಸುತ್ತದೆ ಇದರಿಂದ ಸಮಯ ವ್ಯರ್ಥವಾಗುತ್ತದೆ ಜೊತೆಗೆ ಮಾನಸಿಕ ನೆಮ್ಮದಿ ಹಾಳಾಗುತ್ತದೆ.
ಮೇಷ ರಾಶಿಯವರಿಗೆ ಆತ್ಮವಿಶ್ವಾಸದ ಕೊರತೆ ಕಂಡು ಬರುತ್ತಿರುತ್ತದೆ. ಕೆಲವು ಸಂದರ್ಭದಲ್ಲಿ ಮನಸ್ಸು ನಿಯಂತ್ರಣದಲ್ಲಿ ಇರುವುದಿಲ್ಲ ಅಸಹಾಯಕ ಸ್ಥಿತಿಯನ್ನು ತಲುಪುತ್ತದೆ. ಈ ರಾಶಿಯವರು ಮಾಡದಿರುವ ತಪ್ಪಿಗೆ ಮನೆಯಲ್ಲಿ ಮನಸ್ತಾಪಕ್ಕೆ ಒಳಗಾಗಬೇಕಾಗುತ್ತದೆ. ಕುಟುಂಬದಲ್ಲಿ ಚಿಕ್ಕ ಚಿಕ್ಕ ವಿಷಯಕ್ಕೆ ಕಿರಿಕಿರಿ, ಮನಸ್ತಾಪ ಹೆಚ್ಚಾಗುತ್ತದೆ. ಮೇಷ ರಾಶಿಯ ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಇದ್ದರೂ ಓದು ತಲೆಗೆ ಹತ್ತುತ್ತಿರುವುದಿಲ್ಲ ಎಷ್ಟೆ ಓದಿದರು ಉತ್ತಮ ಅಂಕಗಳು ಬರದೆ ಇರುವುದು ಕಂಡು ಬರುತ್ತದೆ.
ಮೇಷ ರಾಶಿಯವರಿಗೆ ಸಪ್ಟೆಂಬರ್ ತಿಂಗಳಿನಲ್ಲಿ ವಾಹನ ಅಥವಾ ಭೂಮಿ ಖರೀದಿಗೆ ಸೂಕ್ತ ಸಮಯವಲ್ಲ. ಮುಂದಿನ ದಿನಗಳಲ್ಲಿ ಹಣವನ್ನು ಸಂಗ್ರಹಿಸಿಕೊಂಡು ಭೂಮಿ ಮನೆ ಖರೀದಿಯಂತಹ ಕೆಲಸಗಳಿಗೆ ಕೈ ಹಾಕುವುದು ಒಳ್ಳೆಯದು. ವ್ಯಾಪಾರ ಉದ್ಯೋಗಸ್ಥರಿಗೆ ಅಂತಹ ಸಮಸ್ಯೆ ಕಾಡುವುದಿಲ್ಲ ಹಣದ ಒಳಹರಿವು ಉತ್ತಮವಾಗಿದ್ದು ಆದಾಯದ ಸಮಸ್ಯೆ ಕಂಡು ಬರುವುದಿಲ್ಲ. ವ್ಯಾಪಾರಿಗಳು ಹಿರಿಯರ ಮಾರ್ಗದರ್ಶನ ಸಲಹೆ ಸೂಚನೆಗಳನ್ನು ಅನುಸರಿಸುವುದರಿಂದ ಅನುಕೂಲತೆಯ ಫಲವನ್ನು ಪಡೆಯಬಹುದು.
ಮೇಷ ರಾಶಿಯವರು ಈ ತಿಂಗಳಿನಲ್ಲಿ ಹೆಚ್ಚು ಶ್ರಮ ವಹಿಸುವ ಬದಲು ಬುದ್ಧಿ ಉಪಯೋಗಿಸಿ ಕೆಲಸ ಮಾಡುವುದರಿಂದ ಲಾಭ ಪಡೆಯಬಹುದು. ಮೇಷ ರಾಶಿಯ ವಕೀಲರಿಗೆ ವೈದ್ಯರಿಗೆ ಉತ್ತಮ ಸಮಯವಾಗಿದೆ ಲಾಭ ಹಾಗೂ ಜನಪ್ರಿಯತೆಯನ್ನು ಗಳಿಸುತ್ತಾರೆ. ಮೇಷ ರಾಶಿಯ ರಾಜಕಾರಣಿಗಳು ಈ ತಿಂಗಳಿನಲ್ಲಿ ಪೈಪೋಟಿಯನ್ನು ಎದುರಿಸಬೇಕಾಗುತ್ತದೆ. ಮೇಷ ರಾಶಿಯ ಕಲಾವಿದರಿಗೆ ಅವಕಾಶದ ಕೊರತೆ ಕಂಡು ಬರುವ ಸಂಭವವಿದೆ. ಮೇಷ ರಾಶಿಯ ಶಿಕ್ಷಣ ಸಂಸ್ಥೆಯನ್ನು ನಡೆಸಿಕೊಂಡು ಹೋಗುತ್ತಿರುವವರಿಗೆ ಈ ತಿಂಗಳಿನಲ್ಲಿ ಚೇತರಿಕೆ ಕಂಡು ಬರುತ್ತದೆ.
ಮೇಷ ರಾಶಿಯವರ ಆರೋಗ್ಯದ ವಿಷಯಕ್ಕೆ ಬರುವುದಾದರೆ ಸಪ್ಟೆಂಬರ್ ತಿಂಗಳಿನಲ್ಲಿ ಈ ರಾಶಿಯವರ ತಂದೆ ತಾಯಿ ಅಥವಾ ಅತ್ತೆಯ ಆರೋಗ್ಯದಲ್ಲಿ ಏರುಪೇರು ಕಂಡುಬರುವ ಸಾಧ್ಯತೆ ಇದೆ. ಈ ರಾಶಿಯವರು ಸೆಪ್ಟೆಂಬರ್ ತಿಂಗಳಿನಲ್ಲಿ ನರರೋಗದ ಸಮಸ್ಯೆಯಿಂದ ಬಳಲುವ ಸಾಧ್ಯತೆ ಇದೆ. ಮೇಷ ರಾಶಿಯ ಪ್ರೇಮಿಗಳಲ್ಲಿ ಹೊಂದಾಣಿಕೆ ಇದ್ದರೂ ಕೆಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗುತ್ತದೆ. ಸೆಪ್ಟೆಂಬರ್ ತಿಂಗಳಿನ 16ನೆ ತಾರೀಖಿನಿಂದ 30ನೆ ತಾರೀಖಿನವರೆಗೆ ಈ ರಾಶಿಯ ಪ್ರೇಮಿಗಳಲ್ಲಿ ಅನುಮಾನ ಅಸಮಾಧಾನ ಕಂಡು ಬರುತ್ತದೆ. ಈ ರಾಶಿಯ ಪತಿ ಪತ್ನಿಯರಲ್ಲಿಯೂ ಸಹ ಭಿನ್ನಾಭಿಪ್ರಾಯ ಆಗಾಗ ಕಂಡು ಬರುತ್ತದೆ.
ಈ ರಾಶಿಯವರಿಗೆ ಹಿರಿಯರಿಂದ ಬಂದ ಪಿತ್ರಾರ್ಜಿತ ಆಸ್ತಿಯಿಂದ ಬಹಳ ಅನುಕೂಲವಾಗುತ್ತದೆ. ಸೆಪ್ಟೆಂಬರ್ ತಿಂಗಳ ಮೊದಲಾರ್ಧದಲ್ಲಿ ಹಣಕಾಸಿನ ಸಮಸ್ಯೆ ಇರುವುದಿಲ್ಲ. ಈ ರಾಶಿಯವರು ಹಣದ ಕೊಡುವಿಕೆಯನ್ನ ರೂಡಿಸಿಕೊಂಡರೆ ನೆಮ್ಮದಿ ದೊರೆಯುತ್ತದೆ. ಈ ರಾಶಿಯವರಿಗೆ ಸಪ್ಟೆಂಬರ್ ತಿಂಗಳಿನಲ್ಲಿ ಅನಿರೀಕ್ಷಿತ ಮಾನ-ಸಮ್ಮಾನಗಳು ಸಿಗಲಿವೆ. ಸಪ್ಟೆಂಬರ್ ತಿಂಗಳಿನಲ್ಲಿ ಮೇಷ ರಾಶಿಯವರ ಮನಸ್ಸಿನ ಎಲ್ಲೊ ಒಂದು ಮೂಲೆಯಲ್ಲಿ ಭಯ, ಗೊಂದಲ ಕಾಡುತ್ತಿರುತ್ತದೆ ತಾಳ್ಮೆ ಹಾಗೂ ಧೈರ್ಯದಿಂದ ಮೇಷ ರಾಶಿಯವರು ಈ ಸಮಸ್ಯೆಯನ್ನು ಎದುರಿಸಬೇಕು.
ಮೇಷ ರಾಶಿಯವರಿಗೆ ಸಣ್ಣ ಪುಟ್ಟ ಸಮಾರಂಭಗಳಲ್ಲಿ ಉನ್ನತ ಗೌರವ ಸಿಗುತ್ತದೆ. ಉದ್ಯೋಗದ ಸ್ಥಳದಲ್ಲಿ ಹೊಂದಾಣಿಕೆ ಕಷ್ಟವಾಗಬಹುದು ವಾದ ವಿವಾದಗಳು ನಡೆಯುವ ಸಾಧ್ಯತೆ ಇರುತ್ತದೆ ಆದ್ದರಿಂದ ಈ ರಾಶಿಯವರು ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕಾಗುತ್ತದೆ. ಕಷ್ಟ ಹಾಗೂ ಸುಖ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಅದರಿಂದ ಕಷ್ಟ ಬಂದಾಗ ಕುಗ್ಗದೆ ಸುಖ ಬಂದಾಗ ಹಿಗ್ಗದೆ ಜೀವನ ನಡೆಸುವುದನ್ನು ಪ್ರತಿಯೊಬ್ಬರು ಕಲಿಯಬೇಕಾಗುತ್ತದೆ.
ಸಪ್ಟೆಂಬರ್ ತಿಂಗಳಿನಲ್ಲಿ ಮೇಷ ರಾಶಿಯವರಿಗೆ ಒಳ್ಳೆಯ ಫಲಗಳು ದೊರೆಯಲಿದೆ ಕೆಲವು ಕೆಟ್ಟ ಫಲಗಳೂ ದೊರೆಯಲಿದೆ. ಸಾಧ್ಯವಾದಷ್ಟು ಈ ರಾಶಿಯವರು ಮನಸ್ಸನ್ನು ಸ್ಥಿಮಿತದಲ್ಲಿ ಇಟ್ಟುಕೊಳ್ಳಬೇಕು. ಮೇಷ ರಾಶಿಯವರು ತಾಳ್ಮೆಯನ್ನು ರೂಢಿಸಿಕೊಳ್ಳಬೇಕು ಕೆಲವು ಸಮಸ್ಯೆಗಳಿಗೆ ಕಾಲವೆ ಉತ್ತರ ಕೊಡುತ್ತದೆ ಅಲ್ಲಿಯವರೆಗೂ ತಾಳ್ಮೆಯಿಂದ ಕಾಯಬೇಕಾಗುತ್ತದೆ. ಮೇಷ ರಾಶಿಯವರು ತಾಳ್ಮೆಯ ಜೊತೆ ನಿರಂತರ ಪ್ರಯತ್ನಿಸುವುದರಿಂದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.
ಸಪ್ಟೆಂಬರ್ ತಿಂಗಳಿನಲ್ಲಿ ಮೇಷ ರಾಶಿಯವರು ಕೆಲವು ಸಮಸ್ಯೆಗಳಿಗೆ ಪರಿಹಾರವಾಗಿ ವಾಹನ ಲಕ್ಷ್ಮೀ ಆರಾಧನೆ ಮಾಡುವುದು, ಪ್ರತಿದಿನ ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಒಳ್ಳೆಯದಾಗುತ್ತದೆ. ಶಿವನ ದೇವಾಲಯಕ್ಕೆ ಬಿಲ್ವಪತ್ರೆಗಳನ್ನು ಅರ್ಪಿಸುವುದರಿಂದ ದೇವರ ಕೃಪೆಗೆ ಪಾತ್ರರಾಗುತ್ತೀರಿ. ಅನಾಥರಿಗೆ ಆಹಾರ ಕೊಡುವುದರಿಂದ ಒಳ್ಳೆಯದಾಗುತ್ತದೆ, ವಾಸ್ತು ಪ್ರಕಾರ ನೋಡುವುದಾದರೆ ಬಿದುರಿನ ವಸ್ತುಗಳನ್ನು ಬಳಸಬಾರದು. ನರಸಿಂಹಸ್ವಾಮಿ ಹಾಗೂ ಆಂಜನೇಯ ದೇವರ ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತದೆ.
ಒಟ್ಟಿನಲ್ಲಿ ಮೇಷ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಮಿಶ್ರಫಲ ದೊರೆಯಲಿದ್ದು ಪರಿಹಾರವನ್ನು ತಪ್ಪದೆ ಮಾಡುವುದರಿಂದ ಒಳ್ಳೆಯ ಸಮಯವನ್ನು ನೋಡಬಹುದು. ಈ ಮಾಹಿತಿ ಉಪಯುಕ್ತ ಮಾಹಿತಿಯಾಗಿದ್ದು ನಿಮ್ಮ ಕುಟುಂಬದ ಹಾಗೂ ಪರಿಚಯದ ಮೇಷ ರಾಶಿಯವರಿಗೆ ತಪ್ಪದೆ ತಿಳಿಸಿ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.