ಸರ್ಕಾರ ಆಸ್ತಿ ರಿಜಿಸ್ಟ್ರೇಷನ್ ನಿಯಮವನ್ನ ಬದಲಾಯಿಸಿದ್ದು ಎಲ್ಲಾ ದಾಖಲೆಯನ್ನ ನೀಡಿ ಆಸ್ತಿಯನ್ನು ತಮ್ಮ ಹೆಸರಿಗೆ ರಿಜಿಸ್ಟರ್ ಮಾಡಿಸಿಕೊಂಡರು ಸಹ ರಿಜಿಸ್ಟ್ರೇಷನ್ ಕ್ಯಾನ್ಸಲ್ ಆಗುವ ಸಾಧ್ಯತೆ ಇದೆ. ಇತ್ತೀಚಿಗೆ ಅಷ್ಟೇ ಕಲ್ಬುರ್ಗಿ ಜಿಲ್ಲೆಯಲ್ಲಿ ನಡೆದಿದ್ದ ಪ್ರಗತಿ ಪರಿಶೀಲರ ಸಭೆಯಲ್ಲಿ ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಅವರು ಭಾಗಿಯಾಗಿದ್ದರು ಇವರು ರಾಜ್ಯದಲ್ಲಿ ತಿದ್ದುಪಡಿ ಮಾಡಿರುವಂತಹ ಹೊಸ ರಿಜಿಸ್ಟ್ರೇಷನ್ ನಿಯಮದ ಕುರಿತು ವಿವರಣೆಯನ್ನ ಸಾರ್ವಜನಿಕರಿಗೆ ಈ ಸಭೆಯಲ್ಲಿ ನೀಡಿದ್ದಾರೆ.
ಇನ್ನೂ ಅನೇಕ ವಿಷಯಗಳ ಬಗ್ಗೆ ಮಾತನಾಡಿದ ಕಂದಾಯ ಸಚಿವರು ರಾಜ್ಯದಲ್ಲಿ ಪ್ರಮುಖವಾಗಿ ಹೆಚ್ಚಿನ ರೈತರಿಗೆ ಸಮಸ್ಯೆ ಆಗಿರುವ ಆಸ್ತಿ ವಿವಾದದ ಕುರಿತು ಸರ್ಕಾರ ನಿರ್ಧಾರಕ್ಕೆ ಬಂದಿರುವುದಾಗಿ ಮಾಹಿತಿ ನೀಡಿದ್ದಾರೆ ಅಷ್ಟೇ ಅಲ್ಲದೆ ಅನೇಕ ಸುಳ್ಳು ದಾಖಲೆಗಳನ್ನ ಸೃಷ್ಟಿ ಮಾಡಿ ಸರ್ಕಾರದ ಇಲಾಖೆಯನ್ನ ವಂಚಿಸಿ ಆಸ್ತಿಯನ್ನು ಅಕ್ರಮವಾಗಿ ತಮ್ಮದಾಗಿಸಿಕೊಳ್ಳುತ್ತಿದ್ದಂತಹ ಜನರ ಅಕ್ರಮ ಚಟುವಟಿಕೆಗಳಿಗೆ ಬರೆ ಎಳೆಯುವುದಾಗಿ ಈ ಮೂಲಕ ಹೇಳಿದ್ದಾರೆ. ಇತ್ತೀಚಿಗೆ ಸುಳ್ಳು ದಾಖಲೆ ಸೃಷ್ಟಿ ಮಾಡಿ ಸರ್ಕಾರದ ಅಥವಾ ಯಾವುದೇ ವ್ಯಕ್ತಿಯ ಆಸ್ತಿಯನ್ನು ಅಕ್ರಮವಾಗಿ ರಿಜಿಸ್ಟರ್ ಮಾಡಿಸಿಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ ಇಂತಹ ಕೇಸು ಹೆಚ್ಚಾದ ಕಾರಣದಿಂದ ಆಸ್ತಿಯ ನಿಜವಾದ ಮಾಲೀಕರು ಕಚೇರಿಗೆ ಅಲೆದಾಡುವುದು ಹೆಚ್ಚಾಗಿದೆ.
ಇಂತಹ ಅನೇಕ ದೂರುಗಳನ್ನು ನಾನು ಈ ಹಿಂದೆಯೂ ಕೇಳಿದ್ದು ಇದಕ್ಕೆಲ್ಲ ಅಂತ್ಯವನ್ನ ಹಾಡಬೇಕಿದೆ ಆದ್ದರಿಂದ ನಾನು ಹೊಸ ನಿರ್ಧಾರಕ್ಕೆ ಬಂದಿದ್ದೇನೆ ಎನ್ನುವ ಮಾಹಿತಿಯನ್ನ ಕಂದಾಯ ಸಚಿವರು ಈ ಮೂಲಕ ತಿಳಿಸಿದ್ದಾರೆ.
ಇನ್ನೂ ರಿಜಿಸ್ಟರ್ ಆಫೀಸ್ ಗಳಲ್ಲಿ ಈ ರೀತಿಯ ಯಾವುದೇ ಅನುಮಾನಗಳು ಕಂಡು ಬಂದಲ್ಲಿ ರಿಜಿಸ್ಟರ್ ಗಳನ್ನ ತಕ್ಷಣವೇ ರದ್ದು ಮಾಡಲಾಗುವುದು ಯಾವುದೇ ಸುಳ್ಳು ದಾಖಲೆ ಅಥವಾ ಮೋಸ ವಂಚನೆಗೆ ಅವಕಾಶವನ್ನು ನೀಡುವುದಿಲ್ಲ ಎಂದು ಕಂದಾಯ ಸಚಿವರು ಸಾರ್ವಜನಿಕರಲ್ಲಿ ತಿಳಿಸಿದ್ದಾರೆ ಈ ವಿಷಯವನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸುತ್ತಿದ್ದೇನೆ ಎಂಬ ಕುರಿತು ಮಾಹಿತಿಯನ್ನು ನೀಡಿದ್ದಾರೆ. ಈ ಕುರಿತು ಬೇರೆಯವರ ಆಸ್ತಿಯ ಮೇಲೆ ಆಸೆ ಇಟ್ಟುಕೊಂಡವರು ಈಗಲೇ ಆ ವಿಚಾರಗಳನ್ನ ಕೈಬಿಡಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಈ ವಿಷಯದ ಕುರಿತು ರಾಷ್ಟ್ರಪತಿಗಳ ಒಪ್ಪಿಗೆ ಕೂಡ ಸಿಕ್ಕಿದ್ದು ಮುಂಬರುವ ನಾಲ್ಕು ತಿಂಗಳ ಒಳಗಾಗಿ ಇದಕ್ಕೆ ಅಧಿಕೃತವಾದ ಆದೇಶ ಪತ್ರವೂ ಹೊರಬೀಳಲಿದೆ ಆದ್ದರಿಂದ ಇನ್ನು ಮುಂದೆ ಕಾಲಹರಣ ಮಾಡದೆ ಮೋಸ ಆಗಿದೆ ಎಂದು ಗೊತ್ತಾದ ತಕ್ಷಣವೇ ರಿಜಿಸ್ಟರ್ ನ ರದ್ದು ಮಾಡಿ ನ್ಯಾಯ ಕೊಡಿಸುವ ಪ್ರಯತ್ನವನ್ನು ಮಾಡಲಾಗುತ್ತದೆ ಹಿಂದೆ ಈ ರೀತಿ ಮೋಸ ಹೋದವರಿಗೂ ಸಹ ಈ ಮೂಲಕ ನ್ಯಾಯವನ್ನು ಕೊಡಿಸಲು ಪ್ರಯತ್ನಿಸಲಾಗುತ್ತದೆ ಎಂಬುದಾಗಿ ಕೃಷ್ಣಬೈರೇಗೌಡ ತಿಳಿಸಿದ್ದಾರೆ. ಇನ್ನಾದರೂ ಇಂತಹ ಅಕ್ರಮ ಚಟುವಟಿಕೆಗಳಿಗೆ ತಡೆ ಬಿದ್ದು ಈ ಕಾಯ್ದೆಯ ಜಾರಿಯಿಂದಾಗಿ ಮೋಸಗಾರರು ಹಾಗೂ ಮಧ್ಯವರ್ತಿಗಳ ಹಾವಳಿ ಕಡಿಮೆಗೊಳ್ಳಲಿದ್ದು ಈ ನಿಯಮ ಅನೇಕರಿಗೆ ಅನುಕೂಲಕರವಾಗಲಿದೆ.