Sewing machine scheme 2023: ಕರ್ನಾಟಕದಲ್ಲಿ ಬಹುಮತದಿಂದ ಆಯ್ಕೆಗೊಂಡಂತಹ ಕಾಂಗ್ರೆಸ್ ಸರ್ಕಾರ ಹಲವಾರು ವಿಶಿಷ್ಟ ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ ಇದೀಗ ಮಹಿಳೆಯರಿಗಾಗಿ ಇನ್ನೊಂದು ಯೋಜನೆಯ ಜಾರಿಗೆ ತಂದಿದೆ. ಅದೇನೆಂದರೆ, ರಾಜ್ಯದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ವಿತರಿಸುವುದು. ಹೌದು. ರಾಜ್ಯ ಸರ್ಕಾರವು ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಡಿಯಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ನೀಡುವ ಯೋಜನೆಯನ್ನು ಪ್ರಾರಂಭಿಸಲಿದೆ ಹಾಗಾದರೆ ಈ ಯೋಜನೆಗೆ ಅರ್ಜಿಯನ್ನ ಸಲ್ಲಿಸಲು ಅರ್ಹರು ಹಾಗೂ ಅರ್ಜಿಯನ್ನ ಸಲ್ಲಿಸುವ ವಿಧಾನಗಳನ್ನು ಈ ಕೆಳಗಿನ ಲೇಖನದಲ್ಲಿ ನಾವು ತಿಳಿದುಕೊಳ್ಳೋಣ.

ಮಹಿಳಾ ಸಬಲೀಕರಣದ ನೆಟ್ಟಿನಲ್ಲಿ ರಾಜ್ಯ ಸರ್ಕಾರವು ಮಹಿಳೆಯರಿಗೆ ಉಪಯೋಗವಾಗುವಂತೆ ಅನೇಕ ಸೌಲಭ್ಯಗಳನ್ನು ಒದಗಿಸಿ ಕೊಡುತ್ತಿದೆ ಪ್ರತಿಯೊಬ್ಬ ಮಹಿಳೆಯು ಮನೆಯಲ್ಲಿ ಕೂತು ದುಡಿಯುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಉಚಿತ ಹೊಲಿಗೆ ಯಂತ್ರ ಯೋಜನೆಯ ಸರ್ಕಾರವು ಪ್ರಾರಂಭಿಸಿದೆ ಈ ಯೋಜನೆಯಿಂದ ಲಾಭ ಪಡೆದುಕೊಂಡ ಮಹಿಳೆಯರು ತಮ್ಮ ಆರ್ಥಿಕ ಪರಿಸ್ಥಿತಿಯನ್ನ ಸುಧಾರಿಸಿಕೊಳ್ಳಲು ಸರ್ಕಾರವು ಒಂದು ದಾರಿ ಮಾಡಿಕೊಟ್ಟಂತೆ. ಹಾಗೂ ಮಹಿಳೆಯರು ಇತರರ ಮೇಲೆ ಅವಲಂಬಿತರಾಗದೆ ತಮ್ಮ ಅಗತ್ಯತೆಗಳನ್ನ ಪೂರೈಸಿಕೊಳ್ಳುವಲ್ಲಿ ಸಮರ್ಥರಾಗುತ್ತಾರೆ ಎಂಬುದು ಈ ಯೋಜನೆಯ ಮುಖ್ಯ ಉದ್ದೇಶ ವಾಗಿರುತ್ತದೆ.

ಈ ಯೋಜನೆಯ ಅಡಿಯಲ್ಲಿ ಪ್ರತಿ ವರ್ಷವೂ ಐವತ್ತಕ್ಕೂ ಹೆಚ್ಚು ಹೊಲಿಗೆ ಯಂತ್ರಗಳನ್ನು ಸರ್ಕಾರ ನೀಡುತ್ತಿದೆ ಈ ಯೋಜನೆಯ ಭಾರತದಾದ್ಯಂತ ಮಹಿಳೆಯರಿಗೆ ಉಪಯುಕ್ತವಾಗಿದೆ ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗೆ ನೀಡಲಾಗಿದೆ.

Sewing machine scheme 2023

ಸರ್ಕಾರದಿಂದ ಉಚಿತ ಸೀಲಿಂಗ್ ಮಷೀನ್ ಪಡೆಯಲು ಸರ್ಕಾರದ ಅಧಿಕೃತ ವೆಬ್ಸೈಟ್ ಆದ https://www.india.gov.in/ ಗೆ ಭೇಟಿ ನೀಡುವುದರ ಮೂಲಕ ಅರ್ಜಿಯನ್ನ ಸಲ್ಲಿಸಬೇಕಾಗುತ್ತದೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯರು ಹೊಂದಿರಬೇಕಾದ ಕೆಲವು ದಾಖಲೆಗಳು ಯಾವುವು ಎಂದರೆ ಅವು ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ, ಹಾಗೂ ವಯಸ್ಸಿನ ಪ್ರಮಾಣ ಪತ್ರ ಒಂದು ವೇಳೆ ಅಂಗವಿಕಲರಾಗಿದ್ದರೆ ವೈದ್ಯಕೀಯ ಪ್ರಮಾಣ ಪತ್ರ ಅಥವಾ ವಿಧವೆಯಾಗಿದ್ದರೆ ವಿಧವಾ ಪ್ರಮಾಣ ಪತ್ರ ಪಾಸ್ಪೋರ್ಟ್ ಸೈಜ್ ಫೋಟೋ ಮೊಬೈಲ್ ನಂಬರ್ ಹೀಗೆ ಕೆಲವು ದಾಖಲೆಗಳನ್ನು ನೀಡಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಹಿಳೆಯರು ಈ ಯೋಜನೆಯನ್ನ ಸದುಪಯೋಗ ಪಡಿಸಿಕೊಳ್ಳಬಹುದು ಏಕೆಂದರೆ ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿಯೇ ಮಹಿಳೆಯರು ಇತರರ ಮೇಲೆ ಅವಲಂಬಿತವಾಗಿರುತ್ತಾರೆ ಮತ್ತು ಆರ್ಥಿಕ ಪರಿಸ್ಥಿತಿಯನ್ನ ಸುಧಾರಿಸಿಕೊಳ್ಳಲು ಕಷ್ಟ ಪಡುತ್ತಿರುತ್ತಾರೆ. ಕೇಂದ್ರ ಸರ್ಕಾರದ ಈ ಸಹಾಯದಿಂದ ಉಚಿತ ಹೊಲಿಗೆ ಯಂತ್ರವನ್ನು ಪಡೆದುಕೊಂಡು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!