Scorpio Horoscope on august month 2023: ವೃಶ್ಚಿಕ ರಾಶಿಯವರ ಅಗಸ್ಟ್ ತಿಂಗಳ ಭವಿಷ್ಯ ಮತ್ತು ತೊಂದರೆಗೆ ಪರಿಹಾರವನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ. ವೃಶ್ಚಿಕ ರಾಶಿಯವರಿಗೆ ಆಗಸ್ಟ್ ತಿಂಗಳು 70% ಒಳ್ಳೆಯದಾಗುತ್ತದೆ. ಈ ವೃಶ್ಚಿಕ ರಾಶಿಯವರು 3-4 ತಿಂಗಳಿಂದ ತೊಂದರೆಯನ್ನು ಎದುರಿಸುತ್ತಿದ್ದಾರೆ ಆದರೆ ಹಣದ ಬಲ ಚೆನ್ನಾಗಿದೆ. ಗುರು ಬದಲಾವಣೆ ಆದಮೇಲೆ ಏಪ್ರಿಲ್, ಮೇ, ಜೂನ್, ಜುಲೈ ತಿಂಗಳಲ್ಲಿ ತೊಂದರೆಯನ್ನು ಅನುಭವಿಸಿದ್ದಾರೆ. ಅಷ್ಟೇ ಅಲ್ಲದೆ ಆಗಸ್ಟ್ ನಲ್ಲೂ ಕೂಡ ಸ್ವಲ್ಪ ತೊಂದರೆಯನ್ನು ಅನುಭವಿಸಿದ್ದಾರೆ.
ಖಾಸಗಿ ನೌಕರಿಯಲ್ಲಿ ಇರುವಂತವರಿಗೆ ಸ್ವಲ್ಪ ಕಿರಿಕಿರಿ ಉಂಟಾಗುವ ಸಾಧ್ಯತೆಗಳು ಜಾಸ್ತಿ ಆಗಿರುತ್ತದೆ ಹಾಗಾಗಿ ಸ್ವಲ್ಪ ಹುಷಾರಾಗಿ ಕೆಲಸ ಮಾಡಬೇಕಾಗುತ್ತದೆ. ಬಿಸ್ನೆಸ್ ಮಾಡುವಂತವರಿಗೆ ಯಾವುದೇ ರೀತಿ ತೊಂದರೆ ಬರುವುದಿಲ್ಲ, ಒಳ್ಳೆಯ ಲಾಭ ಕೂಡ ಆಗುತ್ತದೆ. ಯಾವುದೇ ರೀತಿ ಹಣಕಾಸಿನ ನಷ್ಟವಾಗುವುದಿಲ್ಲ ಶತ್ರು ಸಂಹಾರ ಆಗುತ್ತದೆ ಮತ್ತು ಹಣದ ಬಲ ಇರುತ್ತದೆ.
Scorpio Horoscope on august month 2023
ಅಗಸ್ಟ್ ತಿಂಗಳಲ್ಲಿ ವೃಶ್ಚಿಕ ರಾಶಿಯವರಿಗೆ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆಗಳು ಜಾಸ್ತಿಯಾಗಿದೆ. ವೃಶ್ಚಿಕ ರಾಶಿಯ ಗಂಡು ಮಕ್ಕಳಿಗೆ ಸ್ವಲ್ಪ ಆರೋಗ್ಯದಲ್ಲಿ ಹೆಚ್ಚಿನ ತೊಂದರೆ ಕಾಣಿಸಿಕೊಳ್ಳಬಹುದು. ಸಂಬಂಧಗಳಲ್ಲಿ ಸ್ವಲ್ಪ ಮನಸ್ತಾಪಗಳು ಬರಬಹುದು ಅಥವಾ ಆಸ್ತಿ ವಿಷಯವಾಗಿ ತಂದೆ ತಾಯಿ ಅಣ್ಣತಮ್ಮಂದಿರ ಜೊತೆಗೆ ಜಗಳ ಆಗುವ ಸಾಧ್ಯತೆ ಇದೆ ಈ ತರಹದ ವಿಷಯಗಳಿಂದ ನಿಮ್ಮ ಮನಸ್ಥಿತಿ ಹಾಳಾಗಬಹುದು.
ವಾಹನವನ್ನು ಚಲಾಯಿಸುವಾಗ ಸ್ವಲ್ಪ ಹುಷಾರಾಗಿರುವುದು ಒಳ್ಳೆಯದು. ಯಾವುದೇ ರೀತಿಯ ಹೆಚ್ಚಿನ ಬೆಲೆಯ ವಸ್ತುಗಳನ್ನು ಈ ತಿಂಗಳಲ್ಲಿ ತೆಗೆದುಕೊಳ್ಳಬೇಡಿ ಮತ್ತು ಮದುವೆ ವಿಷಯವೂ ಕೂಡ ನೀವು ಮುಂದೆ ಹಾಕುವುದು ಒಳ್ಳೆಯದು.
ನಿಮ್ಮ ತೊಂದರೆಗಳಿಗೆ ಪರಿಹಾರವೇನೆಂದರೆ ಷಣ್ಮುಖ ನ ದೇವಸ್ಥಾನಕ್ಕೆ ಹೋಗಬೇಕು ಅದರಲ್ಲೂ ಮಂಗಳವಾರ ಹೋಗಿ ಸೇವೆ ಮಾಡಿದರೆ ಬಹಳ ಶ್ರೇಷ್ಠ. ಸ್ವಲ್ಪ ದಾನ ಧರ್ಮವನ್ನು ಮಾಡಿ ಹಾಗೂ ನವಿಲು ಮತ್ತು ಹಾವಿಗೆ ಆಹಾರ ನೀಡಿ. ಇದನ್ನೂ ಓದಿ ಈ ರಾಶಿಯ ಹುಡುಗರು ಅಂದ್ರೆ, ಹುಡುಗಿಯರಿಗೆ ಬಲು ಇಷ್ಟವಂತೆ ಬೇಗ ಪಿಧಾ ಆಗ್ತಾರೆ