Gruhalakshmi Scheme How apply SMS: ಕರ್ನಾಟಕ ಸರ್ಕಾರವು ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಚಾಲನೆ ಮಾಡಿದೆ. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಯೋಜನೆಯನ್ನು ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ಆವರಣದಲ್ಲಿ ಉದ್ಘಾಟನೆ ಮಾಡಿದರು. ಅರ್ಜಿ ಸಲ್ಲಿಸುವುದು ಹೇಗೆ ಎನ್ನುವ ಮಾರ್ಗಸೂಚಿಯನ್ನು ಕೂಡ ನೀಡಿದ್ದಾರೆ.
ಜನರಿಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ತೊಂದರೆ ಆಗಬಾರದು ಮತ್ತು ಸರ್ವರ್ ತೊಂದರೆಯನ್ನು ಎದುರಿಸಿದ ಕಾರಣ ಈ sms ನ ಮಾಹಿತಿಯ ಪ್ರಕಾರ ನೀವು ಅರ್ಜಿ ಸಲ್ಲಿಸಲು ಹೋದರೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ.
ಗೃಹಲಕ್ಷ್ಮಿ ಯೋಜನೆಯಿಂದ ಮನೆಯ ಯಜಮಾನಿಗೆ 2,000ರೂ ಸಿಗುತ್ತದೆ .ಈಗ ಅರ್ಜಿ ಪ್ರಾರಂಭವಾಗಿದ್ದು ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಹಾಗೂ ಸರ್ಕಾರ ನೀಡಿರುವಂತಹ ಸಂಖ್ಯೆಯನ್ನು sms ಕಳಿಸುವುದು ಹೇಗೆ ಮತ್ತು ಅದರಿಂದ ಆಗುವ ಉಪಯೋಗಗಳನ್ನು ತಿಳಿಸುತ್ತೇವೆ.
Gruhalakshmi Scheme How apply SMS
ಯಜಮಾನಿಯ ಆಧಾರ್ ಕಾರ್ಡಿಗೆ ಫೋನ್ ನಂಬರ್ ಕಡ್ಡಾಯವಾಗಿ ಲಿಂಕ್ ಆಗಿರಬೇಕು, ಲಿಂಕ್ ಆಗಿರುವಂತಹ ನಂಬರ್ ನಿಂದ ಈ 8147500500 ನಂಬರ್ ಗೆ ನೀವು ರೇಷನ್ ಕಾರ್ಡ್ RC number ಅನ್ನು sms ಮಾಡಬೇಕಾಗುತ್ತದೆ. SMS ಕಳುಹಿಸಿದ ತಕ್ಷಣ ನಿಮಗೆ VM-SEVSIN ದಿಂದ ರಿಪ್ಲೈ ಬರುತ್ತದೆ.
ಆ ರಿಪ್ಲೈ ನಲ್ಲಿ ಗೃಹಲಕ್ಷ್ಮಿ ಯೋಜನೆ ವೇಳಾಪಟ್ಟಿ ಎಂದು ಬರೆದು ನಿಮ್ಮ RC ಸಂಖ್ಯೆ ಜೊತೆ ಅರ್ಜಿ ಸಲ್ಲಿಸಬೇಕಾದ ಸ್ಥಳ, ಕೇಂದ್ರ, ಸಮಯ ಮತ್ತು ದಿನಾಂಕವನ್ನು ಅಲ್ಲಿ ನಿಗದಿಪಡಿಸಿರುತ್ತಾರೆ. ಅಲ್ಲಿ ನೀಡಿರುವಂತಹ ಮಾಹಿತಿಯ ಪ್ರಕಾರ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ. ಪೂರಕ ದಾಖಲೆಯ ಜೊತೆಗೆ ನೀವು ಅಲ್ಲಿ ಹೋಗಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಸೂಚಿಸುವ ಕಚೇರಿಗಳು ಯಾವುದೆಂದರೆ ಬಾಪೂಜಿ ಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳನ್ನೇ SMS ಅಲ್ಲಿ ಸೂಚಿಸಲಾಗಿರುತ್ತದೆ. ದಿನಕ್ಕೆ 60 ಜನರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ, ಒಂದು ವೇಳೆ ಆ ಸಮಯಕ್ಕೆ ಅರ್ಜಿ ಸಲ್ಲಿಸಲು ಹೋಗಲು ಸಾಧ್ಯವಾಗದೆ ಇದ್ದರೆ 5:00 – 7:00ರವರೆಗೆ ಅವಕಾಶ ನೀಡಲಾಗುತ್ತದೆ.
ಬೇಕಾಗುವಂತಹ ದಾಖಲಾತಿಗಳು : ಪತಿ ಮತ್ತು ಪತ್ನಿಯ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾಸ್ ಬುಕ್ ವಿವರ (ಆಧಾರ್ ಕಾರ್ಡ್ ಲಿಂಕ್ ಆಗಿರದ ಪಾಸ್ ಬುಕ್ ಕೊಡಲು ಇಚ್ಚಿಸಿದ್ದಲ್ಲಿ ಅದಕ್ಕೂ ಅನುಮತಿ ಇದೆ) ಮತ್ತು ಮೊಬೈಲ್ ಸಂಖ್ಯೆ. (ಇದನ್ನೂ ಓದಿ) Govt Housing Scheme: ಸ್ವಂತ ಮನೆ ಇಲ್ಲದವರಿಗೆ ಗುಡ್ ನ್ಯೂಸ್, ಸರ್ಕಾರದಿಂದ ಮನೆ ಪಡೆಯಲು ಕೂಡಲೇ ಅರ್ಜಿಹಾಕಿ