Government Solar Scheme: ಭಾರತ ಕೃಷಿ ಪ್ರಧಾನವಾದ ರಾಷ್ಟ್ರ ಈ ಕೃಷಿಗೆ ನೀರು ಅವಿಭಾಜ್ಯ ಅಂಗ ನೀರಿಲ್ಲದೆ ಕೃಷಿ ಅಸಾಧ್ಯವಾದುದು ಬೆಳೆಗಳಿಗೆ ನೀರಿಲ್ಲದೆ ಇದ್ದರೆ ಮನುಷ್ಯನಿಗೆ ಗಾಳಿ ಇಲ್ಲದೆ ಇದ್ದಂತೆ ಆಧುನೀಕರಣ ಮತ್ತು ಹೊಸ ತಂತ್ರಜ್ಞಾನಗಳ ಯುಗದಲ್ಲಿ ಕೃಷಿಯ ಆವಿಷ್ಕಾರಗಳು ಹುಟ್ಟಿಕೊಂಡಿವೆ
ಇದರ ಜೊತೆಗೆ ವಿದ್ಯುತ್ ಗಳು ಸಹ ಬೆಳಗಳಿಗೆ ನೀರು ಉಳಿಸಲು ತುಂಬಾ ಅವಶ್ಯಕವಾದ ಅಂಗವಾಗಿದೆ ಆದ್ದರಿಂದ ಸಾಂಪ್ರದಾಯಿಕ ವಿದ್ಯುತ್ ಮೇಲಿರುವ ರೈತರ ಅವಲಂಬನೆಯನ್ನು ಕಡಿಮೆ ಮಾಡುವುದಕ್ಕೋಸ್ಕರ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಸೋಲಾರ್ ಪಂಪ್ ನ್ನು (Govt Solar Pump) ಬಳಸುವುದಾಗಿ ರೈತರನ್ನು ಉತ್ತೇಜಿಸಲು ಪ್ರಾರಂಭಿಸಿದೆ ಇದಕ್ಕಾಗಿ ಹಲವಾರು ಯೋಜನೆಗಳನ್ನು ಸಹ ರೂಪಿಸಲಾಗುತ್ತಿದ್ದು ಇದೀಗ ಪ್ರಧಾನಮಂತ್ರಿ ಕುಸುಮ್ ಸೋಲಾರ್ ಯೋಜನೆ, ರೈತರಿಗೆ ಸೋಲಾರ್ ಪಂಪ್ ಗಳನ್ನು ಒದಗಿಸುವ ಕಾರ್ಯಕ್ಕೆ ಮುಂದಾಗಿದೆ.
ಪ್ರಧಾನ ಮಂತ್ರಿ ಕುಸುಮ್ ಸೋಲಾರ್ ಯೋಜನೆಯ ಅಡಿಯಲ್ಲಿ ರೈತರಿಗೆ ಸೋಲಾರ್ ಪಂಪ್ ಗಳನ್ನು ಒದಗಿಸುವ ಯೋಜನೆಯನ್ನು ಇದೀಗ ಕೇಂದ್ರ ಸರ್ಕಾರ ಹಮ್ಮಿಕೊಂಡಿದ್ದು ಇದರಿಂದ ವಿದ್ಯುತ್ ಉಳಿಕೆ ಹಾಗೂ ಹಗಲಿನಲ್ಲಿಯೂ ನೀರಾವರಿ ಮಾಡಬಹುದು ಪ್ರಧಾನಮಂತ್ರಿ ಕುಸುಮ್ ಸೋಲಾರ್ ಯೋಜನೆಯ ಅಡಿಯಲ್ಲಿ 2 ಲಕ್ಷ ಕೃಷಿ ಪಂಪ್ ಗಳನ್ನು ನೀಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಾಹಿತಿಯನ್ನು ನೀಡಿದ್ದಾರೆ.
ಈ ಯೋಚನೆಯಿಂದ ರೈತರಿಗೆ ಸಬ್ಸಿಡಿಯ (Subsidy for farmers) ಹೊರೆ ಕಡಿಮೆಯಾಗುತ್ತದೆ ಅಷ್ಟೇ ಅಲ್ಲದೆ ನೈಸರ್ಗಿಕ ಸಂಪನ್ಮೂಲದ ಸದುಪಯೋಗ ಕೂಡ ಆಗುತ್ತದೆ. ಈ ಯೋಜನೆ ಅಡಿ 20 ಜಿಲ್ಲೆಗಳಲ್ಲಿ ಈಗಾಗಲೇ ನೋಂದಣಿ ನಡೆಯುತ್ತಿದ್ದು ಈ ಪಂಪ್ ಅಳವಡಿಸಿಕೊಳ್ಳಲು ಇಚ್ಚಿಸುವ ರೈತರು ಆನ್ಲೈನ್ ನಲ್ಲಿ ತಮ್ಮ ಅರ್ಜಿಯನ್ನು ಸಲ್ಲಿಸಬೇಕು ಈ ಮೂಲಕ ಸೋಲಾರ್ ಪಂಪುಗಳನ್ನು ಪಡೆಯಬಹುದು.
ಕುಸುಮ್ ಯೋಜನೆಯಡಿ ಸೋಲಾರ್ ಪಂಪ ಪಡೆಯಲು ಅರ್ಹರಾಗಿರುವ ವ್ಯಕ್ತಿಗಳ ಬಗ್ಗೆ ತಿಳಿಯುವುದಾದರೆ ವೈಯಕ್ತಿಕ ರೈತ ಎಫ್ ಪಿಓ ರೈತರ ಗುಂಪು ಅಥವಾ ಯಾವುದೇ ಇತರ ರೈತ ಉತ್ಪಾದಕ ಸಂಘ ಇದರ ಲಾಭವನ್ನು ಪಡೆಯಬಹುದು ಸಾಂಪ್ರದಾಯಿಕ ವಿದ್ಯುತ್ ಸಂಪರ್ಕವನ್ನು ಹೊಂದಿಲ್ಲದೆ ಇರುವಂತಹ ರೈತರು ಸಹ ಈ ಸೋಲಾರ್ ಪಂಪ್ ನ ಪ್ರಯೋಜನವನ್ನು ಪಡೆದುಕೊಳ್ಳಬಹುದು ಅಷ್ಟೇ ಅಲ್ಲದೆ ಹೊಲಗಳು ಬಾವಿಗಳು ಬೋರ್ವೆಲ್ಗಳು ನದಿಗಳು ಇನ್ನೂ ಇತರ ಸುತ್ತಮುತ್ತಲಿನ ಹೊಂದಿರುವ ರೈತರು ಸಹ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
ಅಟಲ್ ಸೋಲಾರ್ ಪಂಪ್ ಯೋಜನೆ ಮತ್ತು ಮುಖ್ಯಮಂತ್ರಿ ಸೋಲಾರ್ ಕೃಷಿ ಪಂಪ್ ಪ್ರಯೋಜನ ಪಡೆಯದ ರೈತರು ಈ ಯೋಜನೆಯ ಲಾಭವನ್ನು ಪಡೆಯಲಿದ್ದಾರೆ ಈಗ 2026ರ ವೇಳೆಗೆ ರೈತರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಈ ಯೋಜನೆಯ ಅಡಿಯಲ್ಲಿ 2022ರ ವೇಳೆಗೆ 25750 MW ಸೌರ ಮತ್ತು ನವೀಕರಿಸಬಹುದಾದ ಸಾಮರ್ಥ್ಯವನ್ನು ಸೇರಿಸುವ ಗುರಿಯನ್ನು ನಿಗದಿಪಡಿಸಲಾಗಿದ್ದು ಈಗ ಈ ಗಳು ವಿಸ್ತರಣೆ ಯಾಗಿರುವುದರಿಂದ ರೈತರಿಗೆ ಸ್ವಲ್ಪ ಮಟ್ಟಿಗೆ ಸಮಾಧಾನ ಎನಿಸಿದೆ.