Chanakaya Niti Kannada: ಚಾಣಕ್ಯನಾ ನೀತಿಗಳಲ್ಲಿ ಮಾನವ ಸಮಾಜದ ಕಲ್ಯಾಣಕ್ಕೆ ಸಂಬಂಧಿಸಿದಂತೆ ಅನೇಕ ವಿಷಯಗಳನ್ನು ತಿಳಿಸಿದ್ದಾರೆ. ಚಾಣುಕ್ಯನ (Chanakaya Niti) ನೀತಿಯಲ್ಲಿ ಜೀವನದ ಹೆಚ್ಚು ವಿಷಯಗಳ ಬಗ್ಗೆ ಸಲಹೆಗಳನ್ನು ಕೊಟ್ಟಿದ್ದಾರೆ. ವೈವಾಹಿಕ ಜೀವನಕ್ಕೆ ಸಂಬಂಧಿಸಿದ ವಿಷಯವೆ ಆಗಲಿ ಅಥವಾ ಹಣದ ವಿಷಯವೆ ಆಗಲಿ ಹಾಗೂ ಇನ್ನಿತರ ವಿಷಯಗಳ ಬಗೆಗೆ ವಿಸ್ತರವಾಗಿ ತಿಳಿ ಹೇಳಿದ್ದಾರೆ. ಈ ನೀತಿಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ವ್ಯಕ್ತಿಯು ಎಂದಿಗೂ ಯಾವ ಸಮಸ್ಯೆಗಳನ್ನು ಕೂಡ ಎದೆ ಗುಂದದೆ ಎದುರಿಸಬಲ್ಲ .

ಗಂಡ ತಾನೂ ದುಡಿದು ಸಂಪಾದಿಸಿದ ಹಣವನ್ನು ಅಥವಾ ಸಂಪಾದನೆಯನ್ನು ಯಾವತ್ತೂ ತನ್ನ ಹೆಂಡತಿಗೆ ಹೇಳಬಾರದು ಎಂದು ಚಾಣಕ್ಯರು ತಮ್ಮ ನೀತಿಯಲ್ಲಿ ತಿಳಿಸಿದ್ದಾರೆ. ನಿಮ್ಮ ಸಂಪಾದನೆ ಅಥವಾ ನಿಮ್ಮ ಉಳಿತಾಯದ ಬಗ್ಗೆ ಆಕೆಗೆ ತಿಳಿದಿದ್ದರೆ, ಅದರ ಮೇಲೆ ಹಕ್ಕುಗಳನ್ನು ಚಲಾಯಿಸುವ ಮೂಲಕ ಅವಳು ನಿಮ್ಮ ಹಣವನ್ನು ಖರ್ಚು ಮಾಡಲು ಪ್ರಾರಂಭಿಸುತ್ತಾಳೆ.ಹಾಗೂ ಇನ್ನೂ ನೀವು ಮಾಡುವ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸಿಸುತ್ತಾಳೆ.ಆದ್ದರಿಂದ ಚಾಣಕ್ಯನ ನೀತಿಯನ್ನು ಪಾಲಿಸುವುದು ಒಳಿತು.

ಗಂಡನಿಗೆ ಏನಾದರೂ ತೊಂದರೆ ಅಥವಾ ದೌರ್ಬಲ್ಯಗಳು ಇದ್ದರೆ ಆ  ದೌರ್ಬಲ್ಯವನ್ನು ಪತಿಯಾದವನು ತನ್ನಲ್ಲಿಯೇ ಮುಚ್ಚಿಟ್ಟುಕೊಳ್ಳಬೇಕು ಎನ್ನುತ್ತಾರೆ ಚಾಣಕ್ಯರು.ನಿಮ್ಮ ದೌರ್ಬಲ್ಯವನ್ನು ನಿಮ್ಮ ಪತ್ನಿಗು ತಿಳಿಸಬೇಡಿ, ಯಾಕಂದರೆ ನಿಮ್ಮ ದೌರ್ಬಲ್ಯದ  ಬಗ್ಗೆ ನಿಮ್ಮ ಪತ್ನಿಗೆ ತಿಳಿದರೆ ಅವರು ತಮ್ಮ ಅಭಿಪ್ರಾಯಗಳನ್ನು ತಿಳಿಸುವಾಗ ನಿಮ್ಮ ದೌರ್ಬಲ್ಯದ ಮೇಲೆ ದಾಳಿ ಮಾಡುತ್ತಾರೆ.

ನಿಮಗೆ ಅಂದರೆ ಪತಿಯಾದವರಿಗೆ ಎಲ್ಲಿಯಾದರೂ ಅವಮಾನವಾದರೆ, ನೋವಾದರೆ ಅದನ್ನೇ ಪಾಠವಾಗಿ ತೆಗದುಕೊಳ್ಳಿ ಯಾರಿಗೂ ಹೇಳಬೇಡಿ. ನಿಮ್ಮ ಹೆಂಡತಿಯ ಬಳಿಯೂ ಕೂಡ ಹೇಳಬೇಡಿ ಇದರಿಂದ ನೀವು ಅಪಹಾಸ್ಯಕ್ಕೆ ಗುರಿಯಾಗಬಹುದು ಅಥವ ನಿಮಗೆ ಅವಮಾನವಾದ ವಿಷಯವನ್ನು ನೆನೆದು ನಿಮ್ಮ ಹೆಂಡತಿಯು ನಿಮಗೆ ನೋವುಂಟು ಮಾಡಬಹುದು ಅದರಿಂದ ಚಾಣಕ್ಯರು ಈ ವಿಷಯವನ್ನು ತಿಳಿಸಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!