Free Bus Pass Karnataka: ಮಹಿಳೆಯರು ಫ್ರೀ ಬಸ್ ಸೌಲಭ್ಯ ಪಡೆಯಲು ಏನು ಮಾಡಬೇಕೆಂದು ಇಲ್ಲಿ ನಾವು ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ ನಿಮಗೂ ಉಚಿತ ಬಸ್ ಸೌಲಭ್ಯ ಸಿಗಬೇಕೆಂದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ.
ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಹೇಳಿದೆ. ಉಚಿತ ಬಸ್ ಸೌಲಭ್ಯ ಪಡೆಯಲು ಒಂದು ಸ್ಮಾರ್ಟ್ ಕಾರ್ಡ್ ಅನ್ನು ತೆಗೆದುಕೊಳ್ಳಬೇಕಾಗುತ್ತದೆ. ಉಚಿತ ಬಸ್ ಸೌಲಭ್ಯ ಪಡೆಯಲು ಯಾವ ಯಾವ ಶರತ್ತು ಹೇಳಿದ್ದಾರೆಂದು ನೋಡೋಣ, ರಾಜ್ಯದ ಒಳಗೆ ಪ್ರಯಾಣ ಮಾಡಲು ಮಾತ್ರ ಉಚಿತ ಬಸ್ ಸೌಲಭ್ಯವಿರುತ್ತದೆ.
ಯಾವುದೇ ಖಾಸಗಿ ಬಸ್ ಹಾಗೂ ಶ್ರೀಕುಮಾರ್ ರಾಜಹಂಸ ಐರಾವತ ಅಂಬಾರಿ ಎಸಿ ಸ್ಲೀಪರ್ ಇತ್ಯಾದಿ ಖಾಸಗಿ ಬಸ್ಸುಗಳಲ್ಲಿ ಈ ಯೋಜನೆ ಅನ್ವಯವಾಗುವುದಿಲ್ಲ. ಶೇಕಡ 50ರಷ್ಟು ಆಸನಗಳು ಪುರುಷರಿಗೆ ಮೀಸಲಾಗಿರುತ್ತದೆ. ಶಕ್ತಿ ಸ್ಮಾರ್ಟ್ ಕಾರ್ಡ್ ಸಿಗುವುದಕ್ಕಿಂತ ಮುಂಚೆ ಸರ್ಕಾರದ ಐಡಿ ಕಾರ್ಡ್ ತೋರಿಸಿ ಮಹಿಳೆಯರು ಉಚಿತವಾಗಿ ಬಸ್ನಲ್ಲಿ ಸಂಚರಿಸಬಹುದು.
ಸ್ಮಾರ್ಟ್ ಕಾರ್ಡ್ ಪಡೆಯುವುದು ಹೇಗೆ ?
ಸ್ಮಾರ್ಟ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಬೇಕಾಗುತ್ತದೆ. ಸರ್ಕಾರ ಅರ್ಜಿ ಆಹ್ವಾನ ಮಾಡಿದ ನಂತರ ಸೇವಾ ಸಿಂಧು ವೆಬ್ ಸೈಟ್ ಗೆ ಹೋಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಜೂನ್ 11 ರಿಂದ ಉಚಿತ ಬಸ್ ಯೋಜನೆ ಪ್ರಾರಂಭಗೊಳ್ಳುತ್ತದೆ ಆದರೆ ಸ್ಮಾರ್ಟ್ ಕಾರ್ಡ್ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಆದ ಕಾರಣ ಜೂನ್ 11ರ ನಂತರ ಮಹಿಳೆಯರು ಬಸ್ಸಲ್ಲಿ ಸಂಚರಿಸುವಾಗ ನಿಮ್ಮ ಗುರುತಿನ ಚೀಟಿಯನ್ನು ತೋರಿಸಿಕೊಂಡು ಮಹಿಳೆಯರು ಉಚಿತವಾಗಿ ಸಂಚರಿಸಬಹುದು.