Electricity Bill: ಕಾಂಗ್ರೆಸ್ ತಾನು ನೀಡಿರುವಂತಹ ಐದು ಯೋಜನೆಗಳ ಬಗ್ಗೆ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ನಡೆಸದೆ. ಜನತೆ ನಮ್ಮ ಮೇಲೆ ನಂಬಿಕೆ ಇಟ್ಟು ಪಕ್ಷಕ್ಕೆ ಪೂರ್ಣ ಬಹುಮತ ನೀಡಿದ್ದರಿಂದ ಇಂದು ನಾನು ರಾಜ್ಯದ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಕಾಂಗ್ರೆಸ್ನ ಮೊದಲ ಗ್ಯಾರಂಟಿ (Grihajoti Yojana) ಗೃಹಜೋತಿ ಯೋಜನೆ. ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ (200 units of electricity) ಉಚಿತವಾಗಿ ನೀಡುತ್ತೇವೆ ಎಂದು ಸರ್ಕಾರ ಆಶ್ವಾಸನೆ ಕೊಟ್ಟಿತ್ತು ಅದರಂತೆ ಈಗ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಕೂಡ ನಡೆದಿದೆ. ನಮ್ಮ ಮೊದಲ ಯೋಜನೆಯಿಂದಾಗಿ ಪ್ರತಿ ಮನೆಯನ್ನು ಬೆಳಕಿನಿಂದ ಬೆಳಗಿಸಲು ಬಯಸುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಬೆಳಗಾವಿಯಲ್ಲಿ ಹೇಳಿದ್ದಾರೆ.

ಈ ಗ್ರಹ ಜ್ಯೋತಿ ಯೋಜನೆಯು ದಲಿತ ಒಬಿಸಿ ಮತ್ತು ಅಲ್ಪಸಂಖ್ಯಾತರಿಗೆ ಅಷ್ಟೇ ಸೀಮಿತವಲ್ಲದೆ ಪ್ರತಿಯೊಂದು ಮನೆಗೂ 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡುತ್ತೇವೆ ಎಂದು ಹೇಳಿದ್ದಾರೆ ಆದರೆ 200 ಯೂನಿಟ್ ಗಿಂತ ಹೆಚ್ಚು ಬಳಸಿದ್ದಲ್ಲಿ ಆ ಯೂನಿಟ್ ದರವನ್ನು ಪಾವತಿಸಬೇಕಾಗುತ್ತದೆ ಅಥವಾ 200 ಯೂನಿಟ್ ಗಿಂತ ಕಮ್ಮಿ ಬಳಸಿದವರಿಗೆ ಮಾತ್ರ ಉಚಿತ ಭರವಸೆ ಅನ್ವಯವಾಗುತ್ತದೆ ಎಂಬುದನ್ನ ಪಕ್ಷ ಇನ್ನು ಸ್ಪಷ್ಟಪಡಿಸಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!