BPL Ration Card New Application: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಎಲೆಕ್ಷನ್ ಮಾತು ಕತೆ ಜೋರಾಗಿತ್ತು, ಇದೀಗ ಕಾಂಗ್ರೆಸ್ ಸರ್ಕಾರ ಕೊಟ್ಟಿರುವಂತ 5 ಗ್ಯಾರಂಟಿ ಕುರಿತು ಮನೆ ಮನೆಗಳಲ್ಲಿ ಇದರದ್ದೇ ಮಾತಾಗಿದೆ, ಇದೀಗ ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದು ಕಾಂಗ್ರೆಸ್ ಗ್ಯಾರಂಟಿ (Congress Garentee) ಜಾರಿಯಾಗಿತ್ತ ಅನ್ನೋದನ್ನ ಕಾದು ನೋಡಬೇಕಾಗಿದೆ.
ಕಾಂಗ್ರೆಸ್ ಗ್ಯಾರಂಟಿ ಸೌಲಭ್ಯ ಪಡೆಯಲು ಬಹುತೇಕ ಜನರು ಹೊಸ ರೇಷನ್ ಕಾರ್ಡ್ ಮಾಡಿಸಲು ಮುಗಿಬಿದ್ದಿದಾರೆ. ಈ ಯೋಜನೆ ಬಹುತೇಕ ಬಡವರಿಗೆ ಸೀಮಿತವಾಗಿದ್ದು ಇದರ ಸೌಲಭ್ಯ ಪಡೆಯಲು ರೇಷನ್ ಕಾರ್ಡ್ ಬೇಕಾಗುತ್ತದೆ ಅನ್ನೋ ಕಾರಣಕ್ಕೆ BPL ಕಾರ್ಡ್ ಮೊರೆ ಹೋಗಿದ್ದಾರೆ. ಹೆಚ್ಚು ಜನ ಒಂದೇ ಸಾರಿ ರೇಷನ್ ಕಾರ್ಡ್ ಮಾಡಿಸಲು ಹೋಗುತ್ತಿರುವುದರಿಂದ ಸರ್ವರ್ ಡೌನ್ ಆಗಿದೆ ಹಾಗಾಗಿ ಸದ್ಯಕೆ ರೇಷನ್ ಕಾರ್ಡ್ ಹೊಸ ಅರ್ಜಿ ತಗೆದುಕೊಳ್ಳುವುದು ಸ್ಥಗಿತವಾಗಿದೆ.
ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳು ಯಾವುವು?
1.ಹೌದು ಮೊದಲನೇಯದಾಗಿ ಗೃಹಜ್ಯೋತಿ ಅಡಿಯಲ್ಲಿ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್
2.ಗ್ಯಾರಂಟಿ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ಮನೆಯ ಯಜಮಾನಿಗೆ 2,000/- ರೂಪಾಯಿ
3.ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 10 ಕೆಜಿ ಅಕ್ಕಿ ಉಚಿತವಾಗಿ ನೀಡುವುದು
4.ರಾಜ್ಯಾದ್ಯಂತ ಎಲ್ಲಾ ಮಹಿಳೆಯರಿಗೆ ಉಚಿತವಾಗಿ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ 5.ನಿರುದ್ಯೋಗ ಯುವಕ, ಯುವತಿಯರಿಗೆ ಪ್ರತಿ ತಿಂಗಳಿಗೆ ನಿರುದ್ಯೋಗ ಭತ್ಯೆಯಂತೆ 3,000/- ರೂಪಾಯಿ ಪದವೀಧರರಿಗೆ, ಹಾಗು 1,500/- ಡಿಪ್ಲೋಮ ಪದವೀಧರರಿಗೆ ಇದನ್ನೂ ಓದಿ:Special Coins: ನಿಮ್ಮಲ್ಲಿ ಈ ವಿಶೇಷ ನಾಣ್ಯ ಇದ್ರೆ ಸಿಗುತ್ತೆ 10 ಲಕ್ಷ ಇದನ್ನ ಪಡೆಯೋದು ಹೇಗೆ? ಇಲ್ಲಿದೆ ವಿವರ