Actor Bullet Prakash's daughter's wedding

Actor Bullet Prakash’s daughter’s wedding celebration: ನಟ ಬುಲೆಟ್ ಪ್ರಕಾಶ್ (Bullet Prakash) ಕನ್ನಡ ಕಂಡಂತಹ ಅದ್ಭುತವಾದ ಹಾಸ್ಯ ನಟ ಆದರೆ ಬರಿ 44 ವರ್ಷಕ್ಕೆ ವಿಧಿ ಅವರನ್ನು ಇಹಲೋಕ ತ್ಯಜಿಸುವಂತೆ ಮಾಡಿತು. ಬುಲೆಟ್ ಪ್ರಕಾಶ್ ಕೊನೆಯ ಬಹುತೇಕ ಸಂದರ್ಶನದಲ್ಲಿ ತನ್ನ ಮಗಳ ಮದುವೆ ಅದ್ದೂರಿಯಾಗಿ ಮಾಡಬೇಕೆನ್ನುವ ಆಸೆಯನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದರು ಆದರೆ ಮಗಳ ಮದುವೆ ಮುನ್ನ ವಿಧಿವಶರಾದರು. ಅವರ ಜವಾಬ್ದಾರಿಯನ್ನ ಅವರ ಮಗ ಆಗಿರುವಂತಹ ರಕ್ಷಕ್ ಬರಿ 20 ವರ್ಷಕ್ಕೆ ನೆರವೇರಿಸಿದ್ದಾರೆ. ತನ್ನ ಅಕ್ಕನ ಮದುವೆಯನ್ನ ತಂದೆ ಆಸೆ ಪಟ್ಟ ಹಾಗೆ ಅದ್ದೂರಿಯಾಗಿ ಮಾಡಿದ್ದಾರೆ.

ಬುಲೆಟ್ ಪ್ರಕಾಶ್ (Bullet Prakash) ಮಗಳ ಮದುವೆಗೆ ಯಾವುದೇ ಸ್ಟಾರ್ ನಟರು ಕೂಡ ಆಗಮಿಸಿಲ್ಲ ಕೆಲವೇ ಕೆಲವು ನಟ ನಟಿಯರು ಆಗಮಿಸಿದ್ದರು ಆದರೆ ಚಿತ್ರರಂಗದಲ್ಲಿ ಬಹುತೇಕ ನಟರು ಯಾರು ಬಂದಿಲ್ಲ ಎಂಬ ಒಂದಿಷ್ಟು ಮಾತುಗಳು ಕೇಳಿ ಬರುತ್ತಿವೆ.ಅದೇ ಬುಲೆಟ್ ಪ್ರಕಾಶ್ ಬದುಕಿದ್ದರೆ ಮಗಳ ಮದುವೆಗೆ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರರಂಗದಿಂದ ಕಲಾವಿದರು ಆಗಮಿಸುತ್ತಿದ್ದರು ಅವರು ಇಲ್ಲದ ಕಾರಣ ಬಹುತೇಕ ನಟರು ಆಗಮಿಸಿಲ್ಲ ಎಂದು ಎಲ್ಲರೂ ಭಾವಿಸಿದ್ದಾರೆ.

2016 ರಿಂದ ಬುಲೆಟ್ ಪ್ರಕಾಶ್ (Bullet Prakash) ಅವರಿಗೆ ನಟನೆಯಲ್ಲಿ ಅವಕಾಶಗಳೆಲ್ಲ ಕೈತಪ್ಪಿ ಹೋಗಿತ್ತು ಅವರು ವಿಪರೀತ ದಪ್ಪ ಆಗಿದ್ದರು ನಿಂತುಕೊಳ್ಳಲು ಕೂಡ ಕಷ್ಟವಾಗುತ್ತಿತ್ತು ಹೀಗಾಗಿ ಅವರು ತೆಳ್ಳಗಾಗಲೇಬೇಕಾದ ಅನಿವಾರ್ಯ ಪರಿಸ್ಥಿತಿಯು ಕೂಡ ಎದುರಾಯಿತು ಇದಕ್ಕೆ ಸಂಬಂಧಪಟ್ಟಂತಹ ಚಿಕಿತ್ಸೆಯನ್ನು ಕೂಡ ತೆಗೆದುಕೊಂಡುರು ಆದರೆ ಅವರ ಆರೋಗ್ಯದಲ್ಲಿ ಏರುಪೇರು ಆಗಲು ಶುರುವಾಯಿತು.

ಜಾಂಡಿಸ್ ಹಾಗೂ ಬೇರೆ ಬೇರೆ ಸಮಸ್ಯೆಗಳು ಶುರುವಾದವು ಅದೇ ಸಮಯದಲ್ಲಿ ಬುಲೆಟ್ ಪ್ರಕಾಶ ಅವರಿಗೆ ನಟನೆ ಮಾಡಲು ಬರುವುದಿಲ್ಲ ಎಂದು ಅಪಪ್ರಚಾರ ಕೂಡ ಮಾಡಿದರು. ಅದು ಅವರ ಮನಸ್ಸಿಗೆ ತುಂಬಾ ನೋವು ಮಾಡಿತು ಕಾಣದ ಕೈ ನನ್ನ ಹಿಂಡಿ ಹಿಪ್ಪೆ ಮಾಡಿ ಬಿಟ್ಟಿತು ಎಂದು ಅವರು ಬಹಳ ನೊಂದಿದ್ದರು. 2016 ರಿಂದ ಹಂತ ಹಂತವಾಗಿ ನನಗೆ ಅವಕಾಶವನ್ನು ತಪ್ಪಿಸಿ ಬಿಟ್ಟರು ಕೊನೆಯ ದಿನಗಳಲ್ಲಿ ನಾನು ಆರ್ಥಿಕ ಸಂಕಷ್ಟಕ್ಕೆ ಸಿಕ್ಕಿಕೊಂಡೆ ಎಂದು ಹೇಳಿಕೊಂಡಿದ್ದರು.

ನಟ ಬುಲೆಟ್ ಪ್ರಕಾಶ್ ಒಬ್ಬ ಹಾಸ್ಯ ನಟನಾಗಿದ್ದು ಸಿನಿಮಾ ರಂಗದಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿದ್ದನು‌ ಹಾಗಾಗಿ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ತನ್ನ ಅಕ್ಕನ ಮದುವೆಗೆ ಪ್ರತಿಯೊಬ್ಬ ನಟರನ್ನು ಆಹ್ವಾನ ಮಾಡಿದ್ದರು ಆದರೆ ಬಹುತೇಕ ನಟರು ಬಂದಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಪುನೀತ್ ರಾಜಕುಮಾರ್ (Puneeth Rajkumar) ಅವರು ಇದ್ದಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂಬ ಮಾತು ಕೂಡ ಕೇಳಿಬರುತ್ತಿದೆ. ಪುನೀತ್ ರಾಜಕುಮಾರ್ ಅವರ ವ್ಯಕ್ತಿತ್ವ ಸರಳತೆ ಅವರನ್ನು ಮತ್ತೆ ಮತ್ತೆ ನೆನಪಿಸುವ ಹಾಗೆ ಮಾಡುತ್ತದೆ. ಒಂದು ವೇಳೆ ಅವರು ಬದುಕಿದ್ದರೆ ಅವರಾದರೂ ಬುಲೆಟ್ ಪ್ರಕಾಶ್ ಅವರ ಮಗಳ ಮದುವೆಗೆ ಆಗಮಿಸುತ್ತಿದ್ದರು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ..ಈ ಊರಲ್ಲಿ ಒಬ್ಬರು 4 ಮದುವೆಯಾದ್ರೆ, ಜೀವನ ಪೂರ್ತಿ ಉಚಿತವಾಗಿ ಸಿಗಲಿದೆ ಶಿಕ್ಷಣ, ಅರೋಗ್ಯ ಚಿಕಿತ್ಸೆ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!