ವೃಶ್ಚಿಕ (Scorpio) ರಾಶಿಯಲ್ಲಿ ಜನಿಸಿದಂತಹ ಹೆಣ್ಣಿನ ಗುಣ ಸ್ವಭಾವಗಳು ಹೇಗಿರುತ್ತವೆ. ಪ್ರಕೃತಿ ಎಲ್ಲಾ ಕಡೆಯಲ್ಲೂ ಒಂದೇ ರೀತಿಯಾಗಿ ಇರುವುದಿಲ್ಲ. ಅಂತೆಯೇ ಈ ಪ್ರಕೃತಿಯ ಸೃಷ್ಟಿಯಾದಂತಹ ಮನುಷ್ಯನ ಗುಣ ಸ್ವಭಾವಗಳು ಸಹ ಒಬ್ಬರಿಂದ ಇನ್ನೊಬ್ಬರಿಗೆ ಭಿನ್ನವಾಗಿರುತ್ತದೆ. ಒಬ್ಬ ಮನುಷ್ಯ ಒಂದು ರೀತಿ ಯೋಚಿಸಿದರೆ, ಇನ್ನೊಬ್ಬ ವ್ಯಕ್ತಿಗೆ ಅದೇ ವಿಷಯವು ಬೇರೆ ರೀತಿಯಲ್ಲಿ ಕಾಣಬಹುದು. ಯಾಕೆಂದರೆ ಪ್ರತಿಯೊಬ್ಬರ ಯೋಚನಾ ಲಹರಿ, ಅವರು ಬೆಳೆದಂತಹ ಪರಿಸರ ಹಾಗೂ ಅವರ ರಾಶಿ ನಕ್ಷತ್ತಗಳು ಬೇರೆ ಬೇರೆಯಾಗಿಯೆ ಇರುತ್ತದೆ. ಆದ ಕಾರಣ ಅವರು ಭಿನ್ನವಾಗಿ ಯೋಚಿಸುತ್ತಾರೆ‌.

Scorpio Women Astrology

ಹಾಗಿದ್ದರೆ ವೃಶ್ಚಿಕ (Scorpio) ರಾಶಿಯಲ್ಲಿ ಜನಿಸಿದಂತಹ ಹೆಣ್ಣಿನ ಗುಣ ಸ್ವಭಾವಗಳು ಹೇಗಿರುತ್ತವೆ. ಆಕೆ ಯಾವಾಗ ಹೇಗೆ ನಡೆದುಕೊಳ್ಳುತ್ತಾಳೆ? ಮತ್ತು ಆಕೆಯ ಜೀವನ ಶೈಲಿ ಹೇಗಿರುತ್ತದೆ ಎಂದು ತಿಳಿಯೋಣ ಬನ್ನಿ. ವೃಶ್ಚಿಕ ರಾಶಿಯೆಂಬುದು ಬಹಳ ಶಕ್ತಿಶಾಲಿಯಾದಂತಹ ರಾಶಿಯಾಗಿದೆ. ಇದರಲ್ಲಿ ಜನಿಸಿದವರು ಬಹುತೇಕರು ಗಟ್ಟಿ ಶರೀರವನ್ನು ಹೊಂದಿರುತ್ತಾರೆ.

ಇವರು ಬಹಳಷ್ಟು ಭಿನ್ನವಾಗಿ ಇರುತ್ತಾರೆ‌. ಶಕ್ತಿಯ ಗುಣ ಇವರನ್ನು ಪ್ರಗತಿಶೀಲರನ್ನಾಗಿಸುತ್ತದೆ. ಇದರಿಂದಾಗಿ ಇವರು ಸದಾ ಒಂದಿಲ್ಲೊಂದು ಚಟುವಟಿಕೆಯಿಂದ ಜನರ ಗಮನವನ್ನು ಸೆಳೆಯುತ್ತಲೇ ಇರುತ್ತಾರೆ. ತಮ್ಮ ಭಿನ್ನವಾದ ಜೀವನ ಶೈಲಿ ಹಾಗೂ ಶಕ್ತಿಯಿಂದ ಇವರು ಸಮಾಜದಲ್ಲಿ ಅತೀ ಬೇಗ ಉನ್ನತ ಸ್ಥಾನವನ್ನು ಗಳಿಸಿಕೊಳ್ಳುತ್ತಾರೆ‌.

ಹೆಚ್ಚಾಗಿ ವೃಶ್ಚಿಕ ರಾಶಿಯಲ್ಲಿ ಜನಿಸಿದಂತ ಹೆಣ್ಣು ಮಕ್ಕಳು ನಿಗೂಢ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಇವರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಯಾರಿಗೂ ಊಹಿಸಲು ಸಾಧ್ಯವಿಲ್ಲ. ಇವರು ಸಹ ತಮ್ಮ ಅಭಿಪ್ರಾಯ ಅಥವಾ ಅನಿಸಿಕೆಗಳನ್ನು ಎಲ್ಲರ ಎದುರಲ್ಲಿ ಮುಕ್ತವಾಗಿ ಹಂಚಿಕೊಳ್ಳುವುದಿಲ್ಲ. ತಮ್ಮ ಕೆಲಸವನ್ನು ಆದಷ್ಟು ಗುಪ್ತವಾಗಿ ಮಾಡಿಕೊಳ್ಳುತ್ತಾರೆ‌. ಇದರಿಂದಾಗಿ ಇವರನ್ನು ಅರ್ಥೈಸಿಕೊಳ್ಳಲು ಇತರರಿಗೆ ಅಷ್ಟು ಸುಲಭದಲ್ಲಿ ಸಾಧ್ಯವಾಗದು. ಪ್ರೀತಿ ಪ್ರೇಮದ ವಿಷಯದಲ್ಲಿಯು ಇವರು ಬಹಳಷ್ಟು ಗೌಪ್ಯತೆಯನ್ನು ಕಾಪಾಡಿಕೊಂಡು ಬಂದಿರುತ್ತಾರೆ.

ಇವರು ತಮ್ಮ ಮನದೊಳಗೆ ಲೆಕ್ಕಾಚಾರ ಮಾಡಿಕೊಂಡು ಕೆಲಸವನ್ನು ನಿರ್ವಹಿಸುತ್ತಾರೆ. ಹೇಳಿಕೊಂಡು ತಿರುಗುವುದಕ್ಕಿಂತ ಮಾಡಿ ತೋರಿಸುವುದಕ್ಕೆ ಹೆಚ್ಚು ಅದ್ಯತೆಯನ್ನು ವೃಶ್ಚಿಕ ರಾಶಿಯ ಹೆಣ್ಣುಮಕ್ಕಳು ನೀಡುವುದರಿಂದ, ಇವರು ಜನರೊಡನೆ ಹಾಳು ಹರಟೆಯಲ್ಲಿ ಎಂದಿಗೂ ತೊಡಗಲು ಇಚ್ಛಿಸುವುದಿಲ್ಲ. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಿ ಜನರಿಂದ ಮೆಚ್ಚುಗೆಗೆ ಪಾತ್ರರಾಗುವುದು ಇವರ ವಿಶೇಷ ಗುಣವಾಗಿದೆ. ಹಾಗೆ ಇದು ಇವರ ಶಕ್ತಿಯು ಕೂಡ ಹೌದು. ವೃಶ್ಚಿಕ ರಾಶಿಯ ಹೆಣ್ಣಿನಲ್ಲಿ ಸಮಯ ಪ್ರಜ್ಞೆ ಸದಾ ಜಾಗ್ರತವಾಗಿದ್ದು, ಇವರು ಸಮಯಕ್ಕೆ ಮಹತ್ವವನ್ನು ನೀಡುವಂತವರಾಗಿದ್ದಾರೆ‌.

ವೃಶ್ಚಿಕ ರಾಶಿಯಲ್ಲಿ ಜನಿಸಿದಂತಹ ಹೆಣ್ಣು ಯಾವುದಾದರೂ ಒಂದು ಸಾಧನೆಯ ಸಂಕಲ್ಪವನ್ನು ಕೈಗೊಂಡಿದ್ದೆ ಆದಲ್ಲಿ, ಆಕೆ ಅದನ್ನು ಪೂರ್ಣಗೊಳಿಸುವವರೆಗೂ ನಿಲ್ಲಲಾರಳು. ಅವಳಲ್ಲಿ ಛಲವು ಹೆಚ್ಚಾಗಿದ್ದು, ತನ್ನ ಕಾರ್ಯ ಸಾಧನೆಗೆ ಎಂತಹ ಕಷ್ಟಗಳನ್ನು ಸಹ ಧೈರ್ಯದಿಂದ ಎದುರಿಸುತ್ತಾಳೆ. ಇವರು ಯಾರ ತಂಟೆಗೂ ಹೋಗದ ಶಾಂತ ಸ್ವಭಾವದ ಮಹಿಳೆಯಾಗಿರುತ್ತಾರೆ‌. ಆದರೆ ಯಾರಾದರೂ ಇವರನ್ನು ಕೆಣಕಿದ್ದಲ್ಲಿ, ತಕ್ಕ ಪಾಠವನ್ನು ಕಲಿಸದೆ ಬಿಡುವುದಿಲ್ಲ. ಇವರಿಗೆ ಕೋಪ ಬರುವುದು ಕಡಿಮೆ. ಬಂದರೆ ಅಷ್ಟು ಸುಲಭಕ್ಕೆ ಹೋಗುವುದಿಲ್ಲ.

ಇವರು ಅನವಶ್ಯಕ ತಂಟೆ ತಕರಾರುಗಳಲ್ಲಿ ಸಿಲುಕಿಕೊಳ್ಳಲು ಬಯಸುವುದಿಲ್ಲ. ಜಗಳ, ಹೊಡೆದಾಟಗಳಿಂದ ಇವರು ಸದಾ ದೂರವೇ ಇರುತ್ತಾರೆ. ತಮ್ಮ ಹಾಗೂ ತಮ್ಮವರ ಸುರಕ್ಷತೆಗೆ ಇವರು ಮೊದಲ ಆದ್ಯತೆಯನ್ನು ನೀಡುತ್ತಾರೆ‌. ಗಂಡ, ಮನೆ, ಮಕ್ಕಳು ಸಂಸಾರದ ಜವಾಬ್ದಾರಿಯನ್ನು ಖುಷಿಯಿಂದ ಹೊರಲು ಇಚ್ಛಿಸುತ್ತಾರೆ‌. ಜನರು ಸಹ ಇವರ ಬಗ್ಗೆ ಕೆಟ್ಟದಾಗಿ ಮಾತನಾಡಲು ಭಯ ಪಡುತ್ತಾರೆ. ಮತ್ತು ಸುತ್ತಲಿನ ಜನರಿಗೆ ಇವರ ಬಗ್ಗೆ ಒಳ್ಳೆಯ ಅಭಿಪ್ರಾಯ ಇರುತ್ತದೆ. ಒಟ್ಟಾರೆಯಾಗಿ ವೃಶ್ಚಿಕ ರಾಶಿಯಲ್ಲಿ ಜನಿಸಿದ ಹೆಣ್ಣು ಬಹಳ ಧೈರ್ಯದಿಂದ ತನ್ನ ಜೀವನವನ್ನು ನಡೆಸುತ್ತಾಳೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!