Bangalore Metro: ಬೆಂಗಳೂರು ಮೆಟ್ರೋದಲ್ಲಿ ಕೆಲಸ ಖಾಲಿ ಇದೆ, ಆಸಕ್ತರು ಅರ್ಜಿಹಾಕಿ ಸಂಬಳ 35 ಸಾವಿರ

0 123

ಬೆಂಗಳೂರು ಮೆಟ್ರೋದಲ್ಲಿ (Bangalore Metro) ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು ಅರ್ಹ ಅಭ್ಯರ್ಥಿಗಳು ಆನ್ಲೈನ್ (Online) ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ ( 22/03/2023 ಕ್ಕೆ) :
ಸಾಮಾನ್ಯ ವರ್ಗ ಗರಿಷ್ಠ 35 ವರ್ಷ
2ಎ, 2ಬಿ, 3ಎ, 3ಬಿ ಗರಿಷ್ಠ 38 ವರ್ಷ
ಪ.ಜಾ/ ಪ.ಪಂ/ಪ್ರ~1 ಗರಿಷ್ಠ 40 ವರ್ಷ

ಹುದ್ದೆಯ ಹೆಸರು : ಸ್ಟೇಷನ್ ಕಂಟ್ರೋಲರ್/ ಟ್ರೈನ್ ಆಪರೇಟರ್
ಸೆಕ್ಷನ್ ಇಂಜಿನಿಯರ್ (ಸಿಸ್ಟಮ್ಸ್, ಸಿವಿಲ್)
ಮೇಂಟೇನರ್ಸ್( ಸಿಸ್ಟಮ್ಸ್, ಸಿವಿಲ್ )

Namma Metro
Namma Metro Bengalore

ವೇತನ : ಸ್ಟೇಷನ್ ಕಂಟ್ರೋಲರ್/ ಟ್ರೈನ್ ಆಪರೇಟರ್ ರೂ 35,000~82,660
ಸೆಕ್ಷನ್ ಇಂಜಿನಿಯರ್ (ಸಿಸ್ಟಮ್ಸ್, ಸಿವಿಲ್ ) :ರೂ 40,000 ~94,500
ಮೇಂಟೇನರ್ಸ್ ( ಸಿಸ್ಟಮ್ಸ್, ಸಿವಿಲ್) ರೂ 25,000~59,060

ಹುದ್ದೆಗಳ ಸಂಖ್ಯೆ : ಸ್ಟೇಷನ್ ಕಂಟ್ರೋಲರ್/ ಟ್ರೈನ್ ಆಪರೇಟರ್ : 92 ಹುದ್ದೆ
ಸೆಕ್ಷನ್ ಇಂಜಿನಿಯರ್ (ಸಿಸ್ಟಮ್ಸ್, ಸಿವಿಲ್ ) 14 ಹುದ್ದೆ
ಮೇಂಟೇನರ್ಸ್ ( ಸಿಸ್ಟಮ್ಸ್, ಸಿವಿಲ್ ) 101 ಹುದ್ದೆ

ಉದ್ಯೋಗ ಸ್ಥಳ : ಬೆಂಗಳೂರು
ಆಯ್ಕೆ ವಿಧಾನ : ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಮೂಲ ದಾಖಲೆಗಳ ಪರಿಶೀಲನೆಗಾಗಿ ಮತ್ತು ಕನ್ನಡ ಪರೀಕ್ಷೆಗೆ ಕರೆಯಲಾಗುವುದು. ದಾಖಲಾತಿ ಮತ್ತು ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ನಂತರ ವೈದ್ಯಕೀಯ ಫಿಟ್ ನೆಸ್ ಪರೀಕ್ಷೆ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ : ಪ.ಜಾತಿ, ಪ.ಪಂ ಅಭ್ಯರ್ಥಿಗಳಿಗೆ – ರೂ. 590
ಸಾಮಾನ್ಯ, ಪ್ರ -1, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ರೂ 1180

ಶುಲ್ಕ ಪಾವತಿಸುವ ವಿಧಾನ: ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು ಅಥವಾ ಎಸ್.ಬಿ.ಐ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಚಲನ್ ಮೂಲಕ ನಗದು ಪಾವತಿಸುವ ಮೂಲಕ ಶುಲ್ಕ ಪಾವತಿಸಬಹುದು.

ಅರ್ಜಿ ಸಲ್ಲಿಸುವ ವಿಧಾನ : ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು.

ವಿದ್ಯಾರ್ಹತೆ : ಸ್ಟೇಷನ್ ಕಂಟ್ರೋಲರ್/ ಟ್ರೈನ್ ಆಪರೇಟರ್ ~ ಮೆಟ್ರಿಕ್ಯುಲೇಶನ್ ಜೊತೆಗೆ ಈ ಕೆಳಗಿನ ಯಾವುದೇ ಬ್ರಾಂಚ್ ನಲ್ಲಿ ಮೂರು ವರ್ಷಗಳ ಡಿಪ್ಲೋಮಾ ಎಲೆಕ್ಟ್ರಿಕಲ್ ಇಂಜಿನಿಯರಿಂಗ್/ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್/ ಟೆಲಿಕಮ್ಯುನಿಕೇಷನ್/ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್/ಎಲೆಕ್ಟ್ರಿಕಲ್ ಪವರ್ ಸಿಸ್ಟಮ್ಸ್/ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್/ಮೆಕಾನಿಕಲ್ ಇಂಜಿನಿಯರಿಂಗ್ ಅಥವಾ ಮೂರು ವರ್ಷಗಳ ಡಿಪ್ಲೋಮಾ ತತ್ಸಮಾನ ವಿದ್ಯಾರ್ಹತೆ.

ಸೆಕ್ಷನ್ ಇಂಜಿನಿಯರ್(ಸಿಸ್ಟಮ್ಸ್) ಹುದ್ದೆಗೆ ನಿಗದಿಪಡಿಸಿದ ಬ್ರಾಂಚ್‌ನಲ್ಲಿ ಇಂಜಿನಿಯರಿಂಗ್ ಪದವಿ ಅಥವಾ ಇಂಜಿನಿಯರಿಂಗ್ ಪದವಿಗೆ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ಸೆಕ್ಷನ್ ಇಂಜಿನಿಯರ್(ಸಿವಿಲ್) ಸಿವಿಲ್ ಇಂಜಿನಿಯರಿಂಗ್ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಮೇಂಟೇನರ್ (ಸಿಸ್ಟಮ್ಸ್, ಸಿವಿಲ್ ) ಮೆಟ್ರಿಕ್ಯುಲೇಶನ್ ಜೊತೆಗೆ ಹುದ್ದೆಗೆ ನಿಗದಿಪಡಿಸಿದ ಟ್ರೇಡ್ ನಲ್ಲಿ ಎರಡು ವರ್ಷಗಳ ITI ವಿದ್ಯಾರ್ಹತೆ ಹೊಂದಿರಬೇಕು.

ಇದನ್ನೂ ಓದಿ..Job News: ಬೆಂಗಳೂರಿನ ಕಂಪನಿಯಲ್ಲಿ ಕೆಲಸ ಖಾಲಿ ಇದೆ ಆಸಕ್ತರು ಅರ್ಜಿಹಾಕಿ

ಅರ್ಜಿ ಸಲ್ಲಿಸುವ ದಿನಾಂಕ :
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 24/03/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :24/04/2023
ಶುಲ್ಕ ಪಾವತಿಸಲು ಕೊನೆಯ ದಿನಾಂಕ :27/04/2023

Leave A Reply

Your email address will not be published.