Govt Of Karnataka: ಸರ್ಕಾರವು ರಾಜ್ಯದ ಜನರಿಗೆ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿಯ ಯೋಜನೆ ಅಡಿಯಲ್ಲಿ ವರ್ಷದ ಎರಡು ನೂರು ದಿನಗಳ ವರೆಗೂ ಕೆಲಸವನ್ನು ನೀಡುವಂತಹ ಉದ್ದೇಶವನ್ನು ಇಟ್ಟುಕೊಂಡು ಒಂದು ಯೋಜನೆಯನ್ನು ಜಾರಿಗೆ ತಂದಿದೆ. ಜನರಿಗೆ ಸಹಾಯ ಆಗುವಂತಹ ಕೆಲಸವನ್ನೇ ನೀಡುವಂತಹ ಉದ್ದೇಶ ಈ ಯೋಜನೆಯಲ್ಲಿದೆ. ಅಂದರೆ ಊರಿನ ಜನರಿಗೆ ಸಹಾಯ ಆಗುವಂತೆ ಕೃಷಿ ಹೊಂಡಗಳ ನಿರ್ಮಾಣ ಹಾಗೂ ಹೈನುಗಾರರಿಗೆ ಕೊಟ್ಟಿಗೆಯ ನಿರ್ಮಾಣದಂತಹ ಕೆಲಸವನ್ನು ಮಾಡಿಸಲು ಸರ್ಕಾರ ಮುಂದಾಗಿದೆ.
ಇದಕ್ಕಾಗಿ ಸಹಾಯಧನವನ್ನು ನೀಡಲು ಕೂಡ ಸರ್ಕಾರ ಮುಂದಾಗಿದೆ ಎಂಬುದಾಗಿ ತಿಳಿದು ಬಂದಿದೆ. ಸದ್ಯಕ್ಕೆ ಸರ್ಕಾರ ದನದ ಕೊಟ್ಟಿಗೆಯನ್ನು ನಿರ್ಮಿಸಲು ಹೈನುಗಾರರಿಗೆ ಸಹಾಯಧನವನ್ನು ನೀಡಲು ಮುಂದಾಗಿರುವ ವಿಚಾರವನ್ನು ನೀವು ಇನ್ನಷ್ಟು ಸಂಪೂರ್ಣ ವಿವರವಾಗಿ ಕಿಸಾನ್ ಜ್ಯೋತಿ ವೆಬ್ಸೈಟ್ ನಲ್ಲಿ ತಿಳಿದುಕೊಳ್ಳಬಹುದಾಗಿದೆ. ದನದ ಕೊಟ್ಟಿಗೆಯನ್ನು ನಿರ್ಮಾಣ ಮಾಡಲು 57000ಗಳವರೆಗೂ ಕೂಡ ಸಹಾಯಧನವನ್ನು ನೀಡಲು ಸರ್ಕಾರ ಮುಂದಾಗಿದೆ.
ನರೇಗಾ ಯೋಜನೆ ಅಡಿಯಲ್ಲಿ ಏಪ್ರಿಲ್ ತಿಂಗಳ ಒಳಗೆ ಸರ್ಕಾರ ಕೂಲಿಕಾರ್ಮಿಕರಿಗೆ ಕೂಲಿಯನ್ನು ಹೆಚ್ಚಿಸುವಂತಹ ಕೆಲಸವನ್ನು ಮಾಡುವುದಾಗಿ ಕೂಡ ಘೋಷಿಸಿದೆ. ಇನ್ನು ಸಹಾಯಧನ ಪಡೆಯಲು ನೀವು ಕರ್ನಾಟಕದ ವಾಸಿಯಾಗಿರಬೇಕು ಹಾಗೂ ಕಡಿಮೆ ಪಕ್ಷ ನಾಲ್ಕು ರಾಸುಗಳನ್ನು ಹೊಂದಿರಬೇಕು. ಪಶುಗಳು ಇರುವ ಬಗ್ಗೆ ಪಶುವೈದ್ಯಾಧಿಕಾರಿಗಳ ದೃಢೀಕರಣ ಪತ್ರ ಕೂಡಬೇಕು. ನರೇಗಾ ಕಾರ್ಡ್ ಅನ್ನು ಕೂಡ ಹೊಂದಿರಬೇಕು ಹಾಗೂ ಈಗಾಗಲೇ ಈ ಯೋಜನೆ ಅಡಿಯಲ್ಲಿ ಯಾವುದೇ ಲಾಭವನ್ನು ಪಡೆದುಕೊಂಡಿರಬಾರದು.
ಊರಿನ ಗ್ರಾಮ ಪಂಚಾಯಿತಿಗೆ ಹೋಗಿ ಈ ಕುರಿತಂತೆ ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆಯನ್ನು ಪ್ರಾರಂಭ ಮಾಡಬೇಕು ಹಾಗೂ ಕೂಡಲೇ ದನದ ಕೊಟ್ಟಿಗೆ ನಿರ್ಮಾಣ ಕಾರ್ಯಕ್ಕೆ ನೀವು ಮುಂದಾಗಬೇಕು. ಇದಕ್ಕಾಗಿ ನಿಮ್ಮ ಕೊಟ್ಟಿಗೆ ಅಳತೆ ಕನಿಷ್ಠ ಪಕ್ಷ 22 ಅಡಿ ಉದ್ದ ಹಾಗೂ 13 ಅಡಿ ಅಗಲ ಇರಬೇಕು. ಇವೆಲ್ಲ ಅರ್ಹತೆಗಳನ್ನು ಪೂರೈಸಿದ ನಂತರವೇ ಸರ್ಕಾರದಿಂದ ನಿಮ್ಮ ಕೊಟ್ಟಿಗೆ ನಿರ್ಮಾಣಕ್ಕೆ ಸಹಾಯಧನ ಬಿಡುಗಡೆಯಾಗಲಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಇದಕ್ಕೆ ಸಂಬಂಧಪಟ್ಟರುವಂತಹ ಕಿಸಾನ್ ಜ್ಯೋತಿ ವೆಬ್ಸೈಟ್ನಲ್ಲಿ ಹೆಚ್ಚಿನ ವಿವರಗಳನ್ನು ಪರಿಶೀಲಿಸಬಹುದಾಗಿದೆ.