Parents Marriage: ಒಂದೇ ದಿನ ಮರಣ ಹೊಂದಿದ ಅಪ್ಪ- ಅಮ್ಮ ಹಾಗೂ ಮಗಳು. ಕಾರಣ ಕೇಳಿದರೆ ನಿಮ್ಮ ಕಣ್ಣಲ್ಲಿ ಕೂಡ ನೀರು ಬರುತ್ತೆ. ಪ್ರತಿಯೊಬ್ಬ ತಂದೆ ತಾಯಿಗಳಿಗೂ ಕೂಡ ತಮ್ಮ ಮಕ್ಕಳ ಭವಿಷ್ಯವೇ ತಮ್ಮ ಜೀವನದ ಪರಮ ಉಚ್ಚ ಧ್ಯೇಯ ಆಗಿರುತ್ತದೆ. ಅದರಲ್ಲೂ ಒಂದು ವೇಳೆ ಅವರ ಮನೆಯಲ್ಲಿ ಹೆಣ್ಣು ಮಗು ಜನಿಸಿದರೆ ಅವಳಿಗೆ ಶಿಕ್ಷಣವನ್ನು (Education) ನೀಡಿ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುವ ತನಕ ಅವರಿಗೆ ನೆಮ್ಮದಿ ಇರುವುದಿಲ್ಲ. ಅಷ್ಟರಮಟ್ಟಿಗೆ ತಮ್ಮ ಮಗಳಿಗೆ ಉತ್ತಮ ಜೀವನವನ್ನು ಒದಗಿಸಬೇಕು ಎನ್ನುವ ಕನಸನ್ನು ಪೋಷಕರು ಹೊಂದಿರುತ್ತಾರೆ.
ಇದೇ ಘಟನೆಗೆ ಸಂಬಂಧಿಸಿದಂತೆ ಹಾವೇರಿ ಜಿಲ್ಲೆಯ ಸವಣೂರು ಪ್ರದೇಶದಲ್ಲಿ ಒಂದೇ ಕುಟುಂಬದ ಮೂವರು ತಮ್ಮ ಜೀವನವನ್ನೇ ಮುಗಿಸಿಕೊಂಡಿದ್ದಾರೆ. ಹೌದು ಗೆಳೆಯರೇ ಒಂದೇ ಕುಟುಂಬದ ಅಮ್ಮ ಅಪ್ಪ ಹಾಗೂ ಮಗಳು ಮೂವರು ಕೂಡ ತಮ್ಮ ಜೀವನವನ್ನೇ ಮುಗಿಸಿಕೊಂಡಿದ್ದಾರೆ. ಹನುಮಂತ ಗೌಡ ಪಾಟೀಲ್ ಹಾಗೂ ಲಲಿತಾ ಪಾಟೀಲ್ ಮತ್ತು ಅವರ ಮಗಳಾಗಿರುವ ನೇತ್ರಾ ಪಾಟೀಲ್ ರವರೆ ಆ ತ್ಮಹ’ತ್ಯೆ ಮಾಡಿಕೊಂಡಿರುವಂತಹ ದುರ್ದೈವಿಗಳು.
ಪಾಟೀಲ್ ದಂಪತಿಗಳು ಇಬ್ಬರು ಸೇರಿ ತಮ್ಮ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದರು ಅದಕ್ಕಾಗಿ ಭರ್ಜರಿ 25 ಲಕ್ಷ ಸಾಲವನ್ನು ಕೂಡ ಮಾಡಿದ್ದರು. ಸಾಲದ ಬಾದೆಯನ್ನು ಹೇಗೆ ತೀರಿಸುವುದು ಎಂದು ತಿಳಿಯದೆ ದಂಪತಿಗಳು ಕೊನೆಗೆ ಯಾವ ದಿಕ್ಕು ಕೂಡ ತೋಚದೆ ತಮ್ಮ ಮನೆಯಲ್ಲಿ ತಮ್ಮ ಜೀವವನ್ನು ತಮ್ಮ ಕೈಯಾರೆ ತೆಗೆದುಕೊಂಡಿದ್ದಾರೆ. ಈ ವಿಚಾರವನ್ನು ತಿಳಿದ ಮಗಳು ಕೂಡ ಮಾಡಿಕೊಂಡಿರುವ ಕಾರ್ಯ ನೋಡಿದರೆ ಖಂಡಿತವಾಗಿ ನೀವು ಕೂಡ ಬೆಚ್ಚಿ ಬೀಳುತ್ತೀರಾ.
ಇದನ್ನೂ ಓದಿ..ಕಿಡ್ನಿ ಸ್ಟೋನ್ ಸಮಸ್ಯೆ ಕಡಿಮೆ ಆಗ್ಲಿಲ್ಲಾ ಅಂದ್ರೆ ನಿಮ್ಮ ಹಣ ವಾಪಾಸ್, ನಾಟಿ ವೈದ್ಯನ ಓಪನ್ ಚಾಲೆಂಜ್
ತಂದೆ ತಾಯಿಯ ಮರಣದ ಸುದ್ದಿ ಕೇಳುತ್ತಿದ್ದಂತೆ ಮಗಳಾಗಿರುವ ನೇತ್ರ ಪಾಟೀಲ್ ಕೂಡ ತನ್ನ ಜೀವವನ್ನು ತನ್ನ ಕೈಯಾರೆ ತಾನೇ ತೆಗೆದುಕೊಂಡಿದ್ದಾಳೆ. ಅಪ್ಪ ಅಮ್ಮನನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಮಗಳು ತನ್ನಿಂದಾಗಿ ತನ್ನ ಪೋಷಕರಿಗೆ ಹೀಗೆ ಆಗಿದೆ ಎನ್ನುವ ವಿಚಾರವನ್ನು ತಿಳಿದು ಸಹಿಸಲು ಸಾಧ್ಯವಾಗದೆ ಈ ರೀತಿ ಮಾಡಿಕೊಂಡಿದ್ದಾಳೆ ಎಂಬುದಾಗಿ ತಿಳಿದು ಬಂದಿದೆ. ನಿಜಕ್ಕೂ ಒಂದೇ ಕುಟುಂಬದ ಮೂವರ ಜೀವನ ಈ ರೀತಿ ಅಂತ್ಯ ಆಗಿರುವುದು ವಿಪರ್ಯಾಸವೇ ಸರಿ.