divine dancer: ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ವಿಶೇಷತೆ ಎಂದರೆ ಅದು ದೈವ ನರ್ತನ (God’s embrace) ಮತ್ತು ದೈವಾರಾಧನೆ. ಈ ದೈವಾರಾಧನೆಯು ಕಾಂತಾರ (Kantara Movie) ಸಿನಿಮಾದ ನಂತರದಲ್ಲಿ ಕೇವಲ ದಕ್ಷಿಣ ಕನ್ನಡ (Dakshina Kannada) ಅಷ್ಟೇ ಅಲ್ಲದೆ ಜಗತ್ತಿನಾದ್ಯಂತ ಪ್ರಸಿದ್ಧಿಯನ್ನು ಪಡೆದಿದೆ.
ಇಲ್ಲಿರುವ ದೈವವೂ ಜನರ ಕಷ್ಟಗಳನ್ನು ದೂರ ಮಾಡಿ ಅವರ ಎಲ್ಲ ಸಮಸ್ಯೆಗಳಿಗೂ ಪರಿಹಾರವನ್ನು ನೀಡುತ್ತದೆ ಅದೆಷ್ಟೋ ಜನರು ಇಲ್ಲಿನ ದೈವಕ್ಕೆ ಹರಕೆಯನ್ನು ಕಟ್ಟಿಕೊಳ್ಳುತ್ತಾರೆ ಮತ್ತು ತಾವು ಭವಿಷ್ಯದಲ್ಲಿ ಮಾಡಬೇಕಾದ ಅಥವಾ ತಮ್ಮ ಭವಿಷ್ಯದಲ್ಲಿ ಉಂಟಾಗಬಹುದಾದ ಸಂಭವಗಳ ಬಗ್ಗೆ ತಿಳಿದುಕೊಳ್ಳಲು ದೈವದ ಮೊರೆ ಹೋಗುತ್ತಾರೆ.
ಹೀಗಿರುವಾಗ ಒಮ್ಮೆ ಒಂದು ಸುಂದರವಾದ ಮಹಿಳೆ ಇನ್ನೂ ಮದುವೆಯಾಗದ ಕಾರಣ ತಿಳಿದುಕೊಳ್ಳಲೆಂದು ದೈವದ ಬಳಿ ಪ್ರಶ್ನೆ ಹಾಕುತ್ತಾಳೆ ಆಗ ದೈವ ನರ್ತಕನ ಮೇಲೆ ಆಹ್ವಾನಿತವಾಗಿರುವ ಕೆಂಡದ ಮಾಸ್ತಿಯು ಆತನ ಬಳಿ ನುಡಿಸಿರುವ ಮಾತುಗಳು ಏನೆಂದರೆ ಸ್ವತಹ ದೈವ ನರ್ತಕ ತಾನು ತನ್ನ ಹೆಂಡತಿಯನ್ನು ಕಳೆದುಕೊಂಡಿದ್ದಾನೆ ಈತನೇ ನಿನ್ನ ಪತಿಯಾಗುತ್ತಾನೆ ಇನ್ನೂ ಕೆಲವೇ ದಿನಗಳಲ್ಲಿ ಮಂತ್ರಾಲಯ ಅಥವಾ ಧರ್ಮಸ್ಥಳದಲ್ಲಿ ಈತನಿಂದಲೇ ನಿನ್ನ ಕೊರಳಿಗೆ ತಾಳಿ ಬೀಳುತ್ತದೆ ಇದು ಸತ್ಯ ಮತ್ತು ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ನುಡಿದಿತ್ತು.
ಈ ಘಟನೆ ನಿಜವಾಗಿಯೂ ಅಪರೂಪವಾಗಿದೆ ಮತ್ತು ವಿಚಿತ್ರವಾಗಿದೆ ಈ ವಿಷಯ ತಿಳಿದು ಆಕೆ ಕೂಡ ಗಾಬರಿಗೊಂಡಿದ್ದಳು. ಇದನ್ನೂ ಓದಿ..ಪುರುಷರ ನಿಮಿರುವಿಕೆ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ