KSRTC Jobs On 2023 Karnataka ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಹೊಸ ಅಧಿಸೂಚನೆಯ ಮೇರೆಗೆ ಮುಂದಿನ ವರ್ಷ ಅಂದರೆ 2023ರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು ಹುದ್ದೆಗೆ ಅರ್ಹರಾಗಿರುವ ಹಾಗೂ ಬೇಕಾದ ವಯೋ ಮಾನ್ಯತೆ ಹಾಗೂ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. 2000 ಅಭ್ಯರ್ಥಿಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದ್ದು ನಿಯಮಗಳಿಗೆ ತಕ್ಕನಾಗಿರುವ ಅಭ್ಯರ್ಥಿಗಳು ಸೂಚನೆಗಳನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.

KSRTC Jobs On 2023

ರಾಜ್ಯದ್ಯಂತ ಸಾರಿಗೆ ನಿಗಮದಲ್ಲಿ ಖಾಲಿ ಇರುವ 2,000 ಚಾಲಕ ಹುದ್ದೆಗಳಿಗೆ ನೇಮಕಾತಿಗೆ ಅಧಿಸೂಚನೆ ನೀಡಲಾಗಿದೆ. ಮೊದಲಿಗೆ ತರಬೇತಿ ಅವಧಿಯಲ್ಲಿ ಚಾಲಕರಿಗೆ 10,000 ಹಣವನ್ನು ನೀಡಲಾಗುತ್ತದೆ ಎಂಬುದಾಗಿ ಹೇಳಲಾಗುತ್ತಿತ್ತು ಆದರೆ ಇದನ್ನು ಈಗ 20,000 ಕ್ಕೆ ಏರಿಸಲಾಗಿದೆ. ವಿದ್ಯಾರ್ಹತೆಯನ್ನು ಗಮನಿಸುವುದಾದರೆ ಕನಿಷ್ಠಪಕ್ಷ SSLC ಪಾಸ್ ಮಾಡಿರಬೇಕು ಅಥವಾ PUC ಇಲ್ಲವೇ ಪದವಿಯನ್ನು ಮುಗಿಸಿರಬೇಕು.

ವಯೋಮಿತಿಯ ಕುರಿತಂತೆ ಇನ್ನೂ ನಿರ್ದಿಷ್ಟವಾದ ನಿರ್ಧಾರಕ್ಕೆ ಬಂದಿಲ್ಲ ಅತಿ ಶೀಘ್ರದಲ್ಲೇ ಇದರ ಕುರಿತಂತೆ ಅಧಿಕೃತವಾಗಿ ಪ್ರಕಟಣೆಯನ್ನು ಹೊರಡಿಸಲಾಗುವುದು ಎಂಬುದಾಗಿ ಅಧಿಕೃತ ಇಲಾಖೆಗಳು ತಿಳಿಸಿವೆ. ಅರ್ಜಿ ಸಲ್ಲಿಸುವ ದಿನಾಂಕ ಹಾಗೂ ಕೊನೆಯ ದಿನಾಂಕದ ಕುರಿತಂತೆ ಇಲಾಖೆ ಅತೀ ಶೀಘ್ರದಲ್ಲಿ ಅಧಿಕೃತವಾಗಿ ಪ್ರಕಟಣೆಯನ್ನು ಹೊರಡಿಸಲಿದೆ. ಇನ್ನು ಆನ್ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು ಯಾವ ವೆಬ್ಸೈಟ್ಗೆ ಹೋಗಿ ಅರ್ಜಿಯನ್ನು ಸಲ್ಲಿಸಬೇಕು ಎನ್ನುವ ಮಾಹಿತಿಗಳನ್ನು ಕೂಡ ಅತೀ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ.

ಇನ್ನು ಇದು ಕೇವಲ ಒಂದು ಜಿಲ್ಲೆಗೆ ಸೀಮಿತವಾಗಿರದೇ ಬಹುತೇಕ ರಾಜ್ಯದ ಹಲವಾರು ಜಿಲ್ಲೆಗಳ ರಸ್ತೆ ಸಾರಿಗೆ ನಿಗಮಗಳ ಸಂಸ್ಥೆಗೆ ಬೇಕಾಗಿರುತ್ತದೆ ಹೀಗಾಗಿ ಎಲ್ಲಾ ಜಿಲ್ಲೆಯವರು ಕೂಡ ಈ ಉದ್ಯೋಗಕ್ಕೆ ಪ್ರಯತ್ನಿಸಬಹುದಾಗಿದೆ.

SSLC ಹಾಗೂ PUC ಆದವರಿಗೆ KEB ಇಲಾಖೆಯಲ್ಲಿ ಉದ್ಯೋಗಾವಕಾಶ ಆಸಕ್ತರು ಅರ್ಜಿಹಾಕಿ

2023ರಲ್ಲಿ ಇದರ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಇದರ ಕುರಿತಂತೆ ಹೆಚ್ಚಿನ ಮಾಹಿತಿಗಳು ಹೊರ ಬಂದಿಲ್ಲ. ಇದರ ಕುರಿತಂತೆ ಅಧಿಕೃತ ಮಾಹಿತಿಗಳು ಹೊರ ಬರುತ್ತಿದ್ದಂತೆ ನಿಮಗೆ ತಲುಪಿಸುವ ಕಾರ್ಯವನ್ನು ನಾವು ಮಾಡುತ್ತೇವೆ. ಈ ಉದ್ಯೋಗಕ್ಕೆ ಬೇಕಾಗಿರುವ ಅರ್ಹತೆಯನ್ನು ಹೊಂದಿರುವವರು ಈ ಸರಕಾರಿ ಕೆಲಸಕ್ಕೆ ಪ್ರಯತ್ನಿಸಬಹುದಾಗಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!