ಮದುವೆಗೂ ಮುನ್ನವೇ ದೈಹಿಕವಾಗಿ ಸೇರುವವರ ವಿರುದ್ಧ ಇಂಡೋನೇಷ್ಯಾ ದೇಶ ಈಗ ಹೊಸ ಕಾನೂನನ್ನು ಜಾರಿಗೆ ತಂದಿದೆ. ಈ ರೀತಿ ನಿಯಮವನ್ನು ಮೀರಿ ದೈಹಿಕವಾಗಿ ಸೇರಿದರೆ ಒಂದು ವರ್ಷದ ಜೈಲುವಾಸವನ್ನು ಅನುಭವಿಸಬೇಕಾಗಿ ಬರುತ್ತದೆ ಎಂಬುದಾಗಿ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಈಗಾಗಲೇ ಇದರ ಕರಡು ಪ್ರತಿಯನ್ನು ಹೊರ ತೆಗೆದಿದ್ದು ಮುಂದಿನ ಕೆಲವೇ ದಿನಗಳಲ್ಲಿ ಇದು ಅಂಗೀಕಾರವಾಗಲಿದೆ.
ಗಂಡ ಅಥವಾ ಹೆಂಡತಿ ಅಲ್ಲದವರ ಜೊತೆಗೆ ಮದುವೆ ಆಗುವುದಕ್ಕಿಂತ ಮುಂಚೆನೇ ಯಾರು ಕೂಡ ಸೇರುವ ಹಾಗಿಲ್ಲ ಎಂಬುದಾಗಿ ಖಡಾ ಖಂಡಿತವಾಗಿ ನಿಯಮವನ್ನು ಹೊರತರಲಾಗಿದೆ. ಆರ್ಟಿಕಲ್ 413ರ ಅನ್ವಯ ಈ ರೀತಿಯಲ್ಲಿ ತೊಡಗಿದವರ ವಿರುದ್ಧ ಪಾಲಕರು ಸೇರಿದಂತೆ ಯಾರೇ ದೂರು ನೀಡಿದರು ಕೂಡ ಕ್ರಮವನ್ನು ಜರುಗಿಸಲಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ.
ಈ ನಿಯಮ ಎನ್ನುವುದು ಮೂರು ವರ್ಷಗಳ ಹಿಂದೆ ಇಂಡೋನೇಷಿಯಾದಲ್ಲಿ ಅಂಗೀಕಾರ ಆಗಬೇಕಾಗಿತ್ತು ಆದರೆ ಪ್ರತಿಭಟನೆಗಳು ನಡೆದು ಕೊಂಚಮಟ್ಟಿಗೆ ತಡವಾಗಿ ನಿಯಮ ಜಾರಿಗೆ ಬಂದಿದೆ. ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇಂಡೋನೇಷಿಯಾದಲ್ಲಿ ಸಹ ಬಾಳ್ವೆ ಅಂದರೆ ಲಿವಿಂಗ್ ಟುಗೆದರ್ ಅನ್ನು ನಿಷೇಧಿಸಲಾಗಿದೆ. ಇಂಡೋನೇಷ್ಯಾ ಒಂದು ಮುಸ್ಲಿಂ ಬಹುಸಂಖ್ಯಾತ ಹೊಂದಿರುವಂತಹ ದೇಶವಾಗಿದೆ.
ಇನ್ನು ಇಂಡೋನೇಷ್ಯಾ ಸರ್ಕಾರ ಹೊಸದಾಗಿ ಅಂಗೀಕರಿಸಲಿರುವ ಈ ನಿಯಮ ಕೇವಲ ಅಲ್ಲಿನ ನಾಗರಿಕರಿಗೆ ಮಾತ್ರವಲ್ಲದೆ ವಿದೇಶಿ ನಾಗರಿಕರಿಗೂ ಕೂಡ ಅನ್ವಯಿಸುತ್ತದೆ ಎಂಬುದನ್ನು ಗಮನಿಸಬೇಕಾಗುತ್ತದೆ. ಇದು ಇಂಡೋನೇಷ್ಯಾ ಗೆ ಬರಲಿರುವ ಪ್ರವಾಸಿಗರಲ್ಲಿ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು ಎಂಬುದಾಗಿ ಅಲ್ಲಿನ ಕೆಲವು ಸಂಸ್ಥೆಗಳು ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಈ ಹೊಸ ನಿಯಮದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.